ಸುಂಟಿಕೊಪ್ಪ, ಜು. ೨೧: ಸಾಮಾನ್ಯವಾಗಿ ಕಂಡುಬರದ ನವಿಲುಗಳು ಇದೀಗ ಕಾಫಿ ತೋಟಗಳಲ್ಲಿ ಕಂಡುಬರುತ್ತಿವೆ. ಸುಂಟಿಕೊಪ್ಪ ನಗರ ಸೇರಿದಂತೆ ಹಲವು ಕಾಫಿ ತೋಟಗಳಲ್ಲಿ ಹಾಗೂ ಸುಂಟಿಕೊಪ್ಪದ ಪಂಪ್‌ಹೌಸ್ ರಸ್ತೆಯಲ್ಲಿರುವ ಬಡಾವಣೆಯ ಮನೆಯ ಚಾವಣಿಯ ಮೇಲೆ ಕುಳಿತು ಹೋಗುತ್ತಿವೆ. ಕಳೆದ ೬ ತಿಂಗಳ ಹಿಂದೆ ಈ ಭಾಗದಲ್ಲಿ ಕೇವಲ ಎರಡು ನವಿಲುಗಳು ಮಾತ್ರ ಕಂಡು ಬಂದಿತ್ತು. ಇದೀಗ ೫೦ಕ್ಕೂ ಹೆಚ್ಚು ನವಿಲುಗಳು ಸುತ್ತಮುತ್ತಲಿನ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿವೆ. ತೋಟದಲ್ಲಿ ಮೊಟ್ಟೆ ಇಟ್ಟು ಮರಿಗಳಾಗುತ್ತಿವೆ. ಸುಂಟಿಕೊಪ್ಪ ಮಾದಾಪುರ ರಸ್ತೆಯ ಸ್ವಸ್ಥ ಶಾಲೆಯ ಬಳಿ ನೋಡುಗರಿಗೆ ನವಿಲು ಕಾಣಸಿಗುತ್ತಿದ್ದು ಅಚ್ಚರಿ ಉಂಟುಮಾಡಿದೆ.

-ರಾಜುರೈ