ಕೂಡಿಗೆ, ಜು.೨೧: ಕಾವೇರಿ ನೀರಾವರಿ ನಿಗಮದ ಅಧೀನದ ಹಾರಂಗಿ ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರರಾಗಿ ಐ.ಕೆ. ಪುಟ್ಟಸ್ವಾಮಿ ನೇಮಕಗೊಂಡಿದ್ದಾರೆ. ಪುಟ್ಟಸ್ವಾಮಿ ಇಲಾಖೆಯ ರಾಮನಾಥಪುರ ಉಪ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಕಾವೇರಿ ನೀರಾವರಿ ನಿಗಮ ಹಾರಂಗಿ ವಲಯದ ಕಾರ್ಯಪಾಲಕ ಅಭಿಯಂತರು ಮತ್ತು ಸಹಾಯಕ ಕಾರ್ಯಕ್ರಮ ಅಭಿಯಂತರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.