ವೀರಾಜಪೇಟೆ, ಜು. ೧೯: ನೈಜ ಕಾಂಗ್ರೆಸಿಗರನ್ನು ಗ್ರಾಮೀಣ ಭಾಗದಿಂದ ಗುರುತಿಸಿ, ಸಂಘಟಿಸುವ ಕೆಲಸ ಆಗಬೇಕಿದೆ. ಅನ್ಯ ಪಕ್ಷಗಳಲ್ಲಿರುವ ಹಾಗೆ ನಮ್ಮಲ್ಲಿ ಕೇಡಾರ್ ವ್ಯವಸ್ಥೆಯಿಲ್ಲ. ಗ್ರಾಮೀಣ ಭಾಗದ ಕಾರ್ಯಕರ್ತರನ್ನು ಬಲಿಷ್ಠಗೊಳಿಸಬೇಕಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ವಿನಯ್ ಕುಮಾರ್ ಸೊರಕೆ ಅಭಿಪ್ರಾಯಿಸಿದರು. ನಗರದ ಗಣಪತಿ ಆರ್ಕಿಡ್ನಲ್ಲಿ ನಡೆದ ಬ್ಲಾಕ್ ಕಾಂಗ್ರೆಸ್ ಸಭೆಗೆ ಆಗಮಿಸಿದ್ದ ಅವರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ಇತ್ತೀಚೆಗೆ ರಾಜ್ಯದ ಮುಖ್ಯಮಂತ್ರಿ ಕೊಡಗಿಗೆ ವಿಕೋಪ ವೀಕ್ಷಣೆಗೆ ಬಂದಿದ್ದು, ಭೂಕಂಪ ಪೀಡಿತ ಚೆಂಬು ಗ್ರಾಮಕ್ಕೆ ಭೇಟಿ ನೀಡುವ ಸೌಜನ್ಯ ತೋರಲಿಲ್ಲ. ಇಡೀ ದಕ್ಷಿಣ ಭಾರತದ ಎಂಟುಕೋಟಿ ಜನರಿಗೆ ಇಲ್ಲಿ ಹುಟ್ಟುವ ಕಾವೇರಿ ನೀರನ್ನು ಕೊಡಲಾಗುತ್ತದೆ. ಆದರೆ ಈ ಜಿಲ್ಲೆಯ ಜನರಿಗೆ ಇಲ್ಲಿನ ಶಾಸಕರಿಗೆ ಕಾವೇರಿಯಿಂದ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಆಗಿಲ್ಲ ಎಂದರು.
ಮಾಜಿ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಮಾತನಾಡಿ, ಇತ್ತೀಚೆಗೆ ಕೊಡಗಿನ ಕಾವೇರಿ ಮಾತೆಯ ವಿಚಾರದ ಬಗ್ಗೆ ಅವಹೇಳನ ಮಾಡಿದ ವಿಚಾರ ತಿಳಿದಾಗ ತಪ್ಪು ಮಾಡಿದವರಿಗೆ ಶಿಕ್ಷೆಯಾಗಲೇಬೇಕು ಎಂದು ದನಿಯೆತ್ತಿದ್ದೆ. ಆದರೆ ಇವೆಲ್ಲವೂ ಕಾಲಕಾಲಕ್ಕೆ ಬಿಜೆಪಿ ಮಾಡುವ ಷಡ್ಯಂತ್ರ. ಅಣ್ಣ ತಮ್ಮಂದಿರAತೆ ಅನೋನ್ಯತೆಯಿಂದ ಬದುಕುತ್ತಿರುವ ಮುಸ್ಲಿಂ ಹಾಗೂ ಕೊಡವರನ್ನು ಒಡೆದು ಆಳುವ ತಂತ್ರ, ಈ ಬಗ್ಗೆ ಉನ್ನತಮಟ್ಟದ ತನಿಖೆಯಾಗಬೇಕು. ಕಾವೇರಿ ಮಾತೆಗಿರುವ ಶಕ್ತಿಯಿಂದಲೇ ಇಂದು ನಿಜವಾದ ಆರೋಪಿ ಪತ್ತೆಯಾಗುವಂತೆ ಆಗಿದೆ ಎಂದು ಅಭಿಪ್ರಾಯಪಟ್ಟರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಲಕ್ಷö್ಮಣ್ ಕಾಂಗ್ರೆಸ್ ಕಾರ್ಯಕರ್ತರಿಗೆ ಎಐಸಿಸಿ ಪ್ರಮುಖರಾದ ಸೋನಿಯಾಗಾಂಧಿ ಹಾಗೂ ರಾಹುಲ್ ಗಾಂಧಿ ಎದುರಿಸುತ್ತಿರುವ ಇಡಿ ತನಿಖೆಯ ಹಿಂದಿರುವ ನ್ಯಾಷನಲ್ ಹೇರಾಲ್ಡ್ ಪ್ರಕರಣದ ಬಗ್ಗೆ ಸವಿಸ್ತಾರವಾದ ಮಾಹಿತಿ ನೀಡುವುದರ ಜೊತೆಗೆ ಮಾನಸಿಕವಾಗಿ ರಾಹುಲ್ ಮತ್ತು ಸೋನಿಯಾರನ್ನು ಕುಗ್ಗಿಸಲು ಬಿಜೆಪಿ ಹೆಣೆದಿರುವ ಒಂದು ಹುನ್ನಾರವಿದು ಎಂದು ಆರೋಪಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಕೊಡಗಿನ ಕಾಂಗ್ರೆಸ್ ಪಕ್ಷದಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ಯಾರು ಶಾಸಕರು ಆಯ್ಕೆ ಆಗದಿದ್ದರೂ ಕಾಂಗ್ರೆಸ್ ಕಾರ್ಯಕರ್ತರ ಉತ್ಸಾಹವೇನು ಕುಗ್ಗಿಲ್ಲ. ಕಾಂಗ್ರೆಸಿನಿAದ ಮುಂಬರುವ ದಿನಗಳಲ್ಲಿ ಸ್ವಾತಂತ್ರೊö್ಯÃತ್ಸವದ ವಜ್ರ ಮಹೋತ್ಸವದ ನೆನಪಿನಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅದರಲ್ಲಿ ಕಾರ್ಯಕರ್ತರು ಪಾಲ್ಗೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಜಿ ಪೂಣಚ್ಚ ಮಾತನಾಡುತ್ತಾ, ಕಾವೇರಿ ಮಾತೆ ವಿಚಾರದಲ್ಲಿ ರಾಜಕೀಯ ಮಾಡಿದ ಬಿಜೆಪಿಗೆ ಹಾಗೂ ಈ ಘಟನೆಯ ಹಿಂದಿರುವ ಸಮಾಜಘಾತುಕ ಶಕ್ತಿಗಳಿಗೆ ತಕ್ಕ ಶಿಕ್ಷೆಯಾಗಲಿ ಎಂದರು.
ಕಾರ್ಯಕ್ರಮದ ವೇದಿಕೆಯಲ್ಲಿ, ಮಾಜಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಂಜುನಾಥ್ ಕುಮಾರ್ ಕೆ.ಕೆ , ಹಿಂದುಳಿದ ಘಟಕಗಳ ಬ್ಲಾಕ್ ಅಧ್ಯಕ್ಷ ಸಿ.ಕೆ ಪೃಥ್ವಿನಾಥ್, ನಗರ ಕಾಂಗ್ರೆಸ್ ಅಧ್ಯಕ್ಷ ಮಾದಂಡ ತಿಮ್ಮಯ್ಯ, ಪೊನ್ನಂಪೇಟೆ ಹಿಂದುಳಿದ ವರ್ಗಗಳ ಬ್ಲಾಕ್ ಅಧ್ಯಕ್ಷ ಬಾನಂಡ ಪೃಥ್ವಿ, ವೀರಾಜಪೇಟೆ ಅಲ್ಪಸಂಖ್ಯಾತ ಘಟಕದ ಬ್ಲಾಕ್ ಅಧ್ಯಕ್ಷ ರಫೀಕ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಕೀಲರಾದ ನರೇಂದ್ರಕಾಮತ್, ಮೊಹಮ್ಮದ್, ಹನೀಫ್ ಅವರುಗಳು ಪಕ್ಷದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊAಡರು. ಕಾರ್ಯಕ್ರಮವನ್ನು ನಗರ ಕಾಂಗ್ರೆಸ್ ಪ್ರಮುಖ ಎಂ.ಎA ಶಶಿಧರ್ ನಿರೂಪಿಸಿದರು. ವಿವಿಧ ವಲಯ ಅಧ್ಯಕ್ಷರು, ಪಟ್ಟಣ ಪಂಚಾಯಿತಿ ಸದಸ್ಯರುಗಳು , ಕಾರ್ಯಕರ್ತರು ಹಾಜರಿದ್ದರು.