ಮಡಿಕೇರಿ, ಜು. ೧೯: ಕೊಡಗು ಜಿಲ್ಲೆಯಲ್ಲಿ ಕಳೆದ ಹಲವು ದಿನಗಳಿಂದ ನಿರಂತರವಾಗಿ ಧಾರಾಕಾರವಾಗಿ ಸುರಿಯುವುದರೊಂದಿಗೆ ಹಲವು ಅನಾಹುತಗಳನ್ನು ಸೃಷ್ಟಿಸಿದ್ದ ಮುಂಗಾರು ಮಳೆಯ ಅಬ್ಬರ ಇದೀಗ ತುಸು ಕಡಿಮೆಯಾದಂತಿದೆ.

ತಾ. ೧೯ಕ್ಕೆ ಪುನರ್ವಸು ಮಳೆ ನಕ್ಷತ್ರ ಕೊನೆಗೊಂಡಿದ್ದು, ತಾ. ೨೦ ರಿಂದ (ಇಂದಿನಿAದ) ಪುಷ್ಯ ಮಳೆ ಆರಂಭಗೊಳ್ಳಲಿದೆ. ಜುಲೈ ತಿಂಗಳ ಆರಂಭದಿAದ ಜಿಲ್ಲೆಯಲ್ಲಿ ಭಾರೀ ಮಳೆಯಾಗಿತ್ತು.

ಜನವರಿ ಆರಂಭದಿAದ ಈತನಕ ಜಿಲ್ಲೆಯಲ್ಲಿ ಸರಾಸರಿ ೭೨.೯೨ ಇಂಚು ಮಳೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಜಿಲ್ಲಾ ಸರಾಸರಿ ೨೧ ಇಂಚಿನಷ್ಟು ಅಧಿಕವಾಗಿದೆ.

ಮಡಿಕೇರಿ ತಾಲೂಕಿನಲ್ಲಿಯೂ ಈ ಬಾರಿ ಕಳೆದ ವರ್ಷಕ್ಕಿಂತ ಸುಮಾರು ೨೬ ಇಂಚಿನಷ್ಟು ಅಧಿಕ ಮಳೆಯಾಗಿದೆ. ಕಳೆದ ವರ್ಷ ಜನವರಿಯಿಂದ ಈತನಕ ೭೪.೯೪ ಇಂಚು ಮಳೆಯಾಗಿದ್ದರೆ ಪ್ರಸಕ್ತ ವರ್ಷ ೧೦೧.೪೮ ಇಂಚು ಮಳೆ ಬಿದ್ದಿದೆ.

ವೀರಾಜಪೇಟೆ ತಾಲೂಕಿನಲ್ಲಿ ಕಳೆದ ಬಾರಿ ೪೨.೫೬ ಇಂಚು ಮಳೆಯಾಗಿದ್ದರೆ ಈ ಬಾರಿ ೫೭.೮೬ ಇಂಚು ಹಾಗೂ ಸೋಮವಾರಪೇಟೆ ಯಲ್ಲಿ ಕಳೆದ ಬಾರಿ ೩೭.೯೪ ಹಾಗೂ ಪ್ರಸಕ್ತ ಸಾಲಿನಲ್ಲಿ ೫೯.೪೩ ಇಂಚು ಮಳೆ ದಾಖಲಾಗಿದೆ.