ಸಿದ್ದಾಪುರ, ಜು. ೧೯: ಬೆಳ್ಳಂಬೆಳಿಗ್ಗೆ ಲಾರಿಯೊಂದು ಚರಂಡಿಯಲ್ಲಿ ಸಿಲುಕಿದ ಘಟನೆ ನೆಲ್ಲಿಹುದಿಕೇರಿಯಲ್ಲಿ ನಡೆದಿದೆ. ಸಿಮೆಂಟ್ ತುಂಬಿದ ಲಾರಿಯೊಂದು ಬೇರೊಂದು ವಾಹನಕ್ಕೆ ದಾರಿ ನೀಡುವ ಸಂದರ್ಭದಲ್ಲಿ ನೂತನವಾಗಿ ರೂ. ೨ ಕೋಟಿ ವೆಚ್ಚದಲ್ಲಿ ನಿರ್ಮಿಸಿದ ರಸ್ತೆಯ ಬದಿಯಲ್ಲಿನ ಚರಂಡಿಗೆ ಸಿಲುಕಿದೆ. ಪರಿಣಾಮ ಬೆಳಿಗ್ಗೆ ಕೆಲಸಕ್ಕೆ ಹಾಗೂ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುವ ವಾಹನ ಸವಾರರಿಗೆ ಸಮಸ್ಯೆ ಉಂಟಾಗಿದೆ.

ಶಾಸಕರ ಅನುದಾನದಲ್ಲಿ ರೂ. ೨ ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ನೆಲ್ಲಿಹುದಿಕೇರಿಯ ರಸ್ತೆ ಕಾಮಗಾರಿ ಸಂಪೂರ್ಣವಾಗಿ ಕಳಪೆಯಿಂದ ಕೂಡಿದ್ದು, ರಸ್ತೆ ನಿರ್ಮಾಣ ಮಾಡಿ ಕೆಲವೇ ದಿನಗಳಲ್ಲೇ ರಸ್ತೆಯು ಗುಂಡಿ ಬಿದ್ದಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಮಳೆಯ ನೀರು ಚರಂಡಿಯ ಮೂಲಕ ಹರಿಯದೇ ಮುಖ್ಯರಸ್ತೆಯಲ್ಲೇ ಹರಿಯುತ್ತಿದ್ದು ಪಾದಚಾರಿಗಳಿಗೆ ಕಿರಿಕಿರಿ ಉಂಟು ಮಾಡುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.