ಮಡಿಕೇರಿ, ಜು. ೧೭: ನಗರದ ಜಿಲ್ಲಾಡಳಿತದ ಭವನ ಎದುರು ಸುಮಾರು ೭ ಕೋಟಿ ವೆಚ್ಚದಲ್ಲಿ ಆಧುನಿಕ ಶೈಲಿಯಲ್ಲಿ ನಿರ್ಮಿಸಿದ ತಡೆಗೋಡೆ (ರಿಎನ್‌ಫರ‍್ಸ್ಮೆಂಟ್ ಅರ್ದನ್ ಪ್ಯಾನಲ್) ಇದೀಗ ಆತಂಕಕ್ಕೆ ಕಾರಣವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಮಡಿಕೇರಿ ಮೂಲಕ ಮಂಗಳೂರಿಗೆ ಸಾಗುವ ಹೆದ್ದಾರಿ ಸಂಚಾರ ನಿಷೇಧಿಸಿ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ.

ಮಡಿಕೇರಿ-ಮಂಗಳೂರು ಹೆದ್ದಾರಿ ಬದಿಗೆ ಹೊಂದಿಕೊAಡAತೆ ನಿರ್ಮಾಣವಾದ ಭಾರಿ ಪ್ರಮಾಣದ ಹಾಗೂ ಎತ್ತರದ ತಡೆಗೋಡೆ ವಾಲಿದ್ದು, ಉಬ್ಬು ಕಾಣಿಸಿಕೊಂಡಿರು ವುದು ಕಳೆದ ಕೆಲವು ದಿನಗಳ ಹಿಂದೆ ಗೋಚರಿಸಿದೆ. ಇದೀಗ ತಡೆಗೋಡೆ ಅಳವಡಿಸಿರುವ ಪ್ಯಾನಲ್‌ಗಳ ಉಬ್ಬು ವಾಲಿದ್ದು ಹೆಚ್ಚಾಗತೊಡಗಿದೆ. ಅದಲ್ಲದೆ ಪ್ಯಾನಲ್‌ಗಳು ಬೀಳುವ ರೀತಿಯಲ್ಲಿ ಗೋಚರಿಸಿರುವುದರಿಂದ ಭಯ ಸೃಷ್ಟಿಯಾಗಿದೆ.

ಕಳೆದ ರಾತ್ರಿ ತಡೆಗೋಡೆಯ ಅಲ್ಲಲ್ಲಿ ಹೆಚ್ಚಿನ ಪ್ರಮಾಣದ ಬಿರುಕು ಹಾಗೂ ಪ್ಯಾನಲ್‌ಗಳ ಸ್ಥಾನ ಪಲ್ಲಟ ಮತ್ತಷ್ಟು ಆತಂಕ ಉಂಟುಮಾಡಿದೆ. ಜಿಲ್ಲಾಡಳಿತ ಭವನದ ಎದುರು ನಿರ್ಮಾಣವಾಗುತ್ತಿರುವ ಈ ತಡೆಗೋಡೆಯನ್ನು ಮಳೆಗಾಲ ಮುನ್ನ ಪೂರ್ಣಗೊಳಿಸಬೇಕಾಗಿತ್ತು. ಆದರೆ, ಕೆಲಸ ತಡವಾದ ಹಿನ್ನೆಲೆ ಮಳೆ ನೀರು, ಮಣ್ಣು ತಡೆಗೋಡೆಯ ಒಳನುಗ್ಗಿದ ಪರಿಣಾಮ ಇಷ್ಟೆಲ್ಲ ಸಮಸ್ಯೆಗಳು ಸೃಷ್ಟಿಯಾಗಿವೆ ಎಂದು ಶಾಸಕರುಗಳು, ಸಂಸದರು ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಅಧಿಕಾರಿಗಳ ವಿರುದ್ಧ ಕೂಡ ಅವರುಗಳು ಅಸಮಾಧಾನ ವ್ಯಕ್ತಪಡಿಸಿದ್ದರು.

ರಸ್ತೆ ಸಂಚಾರ ನಿಷೇಧ

ಇದೀಗ ದಿನದಿಂದ ದಿನಕ್ಕೆ ತಡೆಗೋಡೆಯಲ್ಲಿ ಬಿರುಕು ಹಾಗೂ ಉಬ್ಬು ಹೆಚ್ಚಾಗುತ್ತಿರುವುದರಿಂದ ಜಿಲ್ಲಾಡಳಿತ ಮಡಿಕೇರಿ ಮೂಲಕ ಮಂಗಳೂರು ಹೆದ್ದಾರಿ ಸಂಚಾರ ನಿಷೇಧಿಸಿದೆ. ಕಳೆದ ತಡರಾತ್ರಿಯಿಂದ ಈ ಕ್ರಮ ಕೈಗೊಂಡಿದ್ದು, ಬ್ಯಾರಿಕೇಡ್ ಅಳವಡಿಸಿ ಯಾವುದೇ ವಾಹನ ತೆರಳದಂತೆ ನಿಗಾ ವಹಿಸಲಾಗಿದೆ. ಪೊಲೀಸರನ್ನು ಕೂಡ ಇಲ್ಲಿ ಪರಿಣಾಮ ಇಷ್ಟೆಲ್ಲ ಸಮಸ್ಯೆಗಳು ಸೃಷ್ಟಿಯಾಗಿವೆ ಎಂದು ಶಾಸಕರುಗಳು, ಸಂಸದರು ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಅಧಿಕಾರಿಗಳ ವಿರುದ್ಧ ಕೂಡ ಅವರುಗಳು ಅಸಮಾಧಾನ ವ್ಯಕ್ತಪಡಿಸಿದ್ದರು.

ರಸ್ತೆ ಸಂಚಾರ ನಿಷೇಧ

ಇದೀಗ ದಿನದಿಂದ ದಿನಕ್ಕೆ ತಡೆಗೋಡೆಯಲ್ಲಿ ಬಿರುಕು ಹಾಗೂ ಉಬ್ಬು ಹೆಚ್ಚಾಗುತ್ತಿರುವುದರಿಂದ ಜಿಲ್ಲಾಡಳಿತ ಮಡಿಕೇರಿ ಮೂಲಕ ಮಂಗಳೂರು ಹೆದ್ದಾರಿ ಸಂಚಾರ ನಿಷೇಧಿಸಿದೆ. ಕಳೆದ ತಡರಾತ್ರಿಯಿಂದ ಈ ಕ್ರಮ ಕೈಗೊಂಡಿದ್ದು, ಬ್ಯಾರಿಕೇಡ್ ಅಳವಡಿಸಿ ಯಾವುದೇ ವಾಹನ ತೆರಳದಂತೆ ನಿಗಾ ವಹಿಸಲಾಗಿದೆ. ಪೊಲೀಸರನ್ನು ಕೂಡ ಇಲ್ಲಿ ಮೇಲ್ಭಾಗದಲ್ಲಿ ಕಾಂಕ್ರಿಟ್ ದಾರಿ ಮಾಡಬೇಕಾಗಿತ್ತು. ಮಳೆಯಾದ ಹಿನ್ನೆಲೆ ಕಾಮಗಾರಿಗೆ ಹಿನ್ನಡೆಯಾಗಿದೆ. ಒತ್ತಡ ಉಂಟಾದ

(ಮೊದಲ ಪುಟದಿಂದ) ಹಿನ್ನೆಲೆ ಪ್ಯಾನಲ್‌ಗಳಲ್ಲಿ ಪಲ್ಲಟ ಉಂಟಾಗಿದೆ. ತಡೆಗೋಡೆ ಉತ್ಕೃಷ್ಟ ಮಟ್ಟದಲ್ಲಿದೆ. ಕಾಂಕ್ರೀಟ್ ಸ್ಲಾö್ಯಬ್‌ಗಳನ್ನು ಮೂರು ಹಂತಗಳಲ್ಲಿ ಬಲಪಡಿಸಿ ನಿರ್ಮಿಸಲಾಗಿದೆ. ಟ್ಯಾಗ್ ಮಾಡಿ ಸ್ಟೀಲ್ ನೈಲ್‌ಗಳನ್ನು, ಮೆಸ್‌ಗಳನ್ನು ಒಳ ಭಾಗದಲ್ಲಿ ಅಳವಡಿಸಲಾಗಿರುತ್ತದೆ. ಯಾವುದಾದರೂ ಪ್ಯಾನಲ್‌ಗಳು ಸ್ಥಾನ ಪಲ್ಲಟಗೊಂಡರೆ ಆ ಪ್ಯಾನಲ್ ಮಾತ್ರ ಹೊರಬರುತ್ತದೆ ಹೊರತು ಇಡೀ ಗೋಡೆಗೆ ಸಮಸ್ಯೆ ಉಂಟಾಗುವುದಿಲ್ಲ. ತಡೆಗೋಡೆಯ ತುದಿಭಾಗದಲ್ಲಿ ಮಾತ್ರ ಸಮಸ್ಯೆಯಾಗಿದೆ ಹೊರತು ಮಧ್ಯ ಭಾಗದಲ್ಲಿ ಯಾವುದೇ ರೀತಿಯ ಸಮಸ್ಯೆ ಉಂಟಾಗುವುದಿಲ್ಲ ಎಂದು ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ನಾಗರಾಜು ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ. ಮುಂದಿನ ಅಕ್ಟೋಬರ್ ಬಳಿಕ ಕಾಮಗಾರಿ ಪುನರಾರಂಭಿಸಲಾಗುತ್ತದೆ ಎಂದಿದ್ದಾರೆ.

ಲೋಕೋಪಯೋಗಿ ಇಲಾಖೆಯ ಮುಖ್ಯ ಅಭಿಯಂತರ ರವಿಕುಮಾರ್ ಅವರು ಈಗಾಗಲೇ ಆಗಮಿಸಿದ್ದು, ಪರಿಶೀಲನೆ ಕೂಡ ನಡೆಸಿದ್ದಾರೆ. ಮತ್ತೋರ್ವ ಮುಖ್ಯ ಅಧಿಕಾರಿ ಗೋವಿಂದ್ ರಾಜ್ ಎಂಬವರು ಕೂಡ ಆಗಮಿಸಿದ್ದಾರೆ. ಸದ್ಯಕ್ಕೆ ಕಾಮಗಾರಿ ಸ್ಥಗಿತಗೊಳಿಸಲಾಗಿದೆ. ಮಳೆಯಿಂದ ಒತ್ತಡ ಉಂಟಾಗಿ ಮಣ್ಣು ತಡೆಗೋಡೆಯ ತುದಿ ಭಾಗಕ್ಕೆ ಜಾರಿದ ಕಾರಣ ಸಮಸ್ಯೆಯಾಗಿದೆ. ಕಳೆದ ರಾತ್ರಿಯಿಂದ ಉಬ್ಬು ಹೆಚ್ಚಿದೆ. ಸದ್ಯಕ್ಕೆ ಸ್ಯಾಂಡ್ ಬ್ಯಾಗ್, ಸ್ಟೀಲ್ ರಾಡ್‌ಗಳ ಮೂಲಕ ಅದನ್ನು ಬಲಪಡಿಸಿ ಯಾವುದೇ ಅಪಾಯ ಉಂಟಾಗದAತೆ ಸುರಕ್ಷತಾ ಕ್ರಮಕೈಗೊಳ್ಳಲಾಗಿದೆ. ಜಿಲ್ಲಾಡಳಿತ ಭವನಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದು ಅಧಿಕಾರಿ ನಾಗರಾಜು ವಿವರಿಸಿದ್ದಾರೆ. ತಡೆಗೋಡೆಯಿಂದ ಜಿಲ್ಲಾಡಡಳಿತ ಭವನಕ್ಕೆ ಸದ್ಯಕ್ಕೆ ಸಮಸ್ಯೆ ಇಲ್ಲ. ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿ ತಾಂತ್ರಿಕ ನೆರವು ನೀಡಲಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ. ಸತೀಶ ಅಭಿಪ್ರಾಯಪಟ್ಟಿದ್ದಾರೆ.