(ವರದಿ: ಪುತ್ತರಿರ ಕರುಣ್ ಕಾಳಯ್ಯ) ಚೆಟ್ಟಳ್ಳಿ, ಜು. ೧೭: ಮಳೆಗಾಲ ಪ್ರಾರಂಭವಾದೊಡನೆ ಕಾಫಿ ಗಿಡದ ರೆಂಬೆ ಕೊಂಬೆಗಳಲ್ಲಿ, ಮೆಣಸುಬಳ್ಳಿ, ಬಾಳೆ, ಅಡಿಕೆ, ಶುಂಠಿ ಗಿಡಗಳಲೆೆಲ್ಲ ಪುಟ ಪುಟ್ಟ ಶಂಖದAತೆ ನೇತಾಡುತ್ತಾ ಬೆಳೆಗಾರರಿಗೆ ತಲೆ ನೋವಾಗಿದ್ದ ಆಫ್ರಿಕನ್ ದೈತ್ಯ ಶಂಖ ಹುಳಗಳನ್ನು ಈ ವರ್ಷ ಬೆಳ್ಳಕ್ಕಿ (ಕೊಕ್ಕರೆ), ನವಿಲುಗಳು ಹಾಗೂ ವಿವಿಧ ಬಗೆಯ ಹಕ್ಕಿಗಳು ತಿಂದು ಹಾಕಿ ನಾಶಪಡಿಸುವುದರ ಮೂಲಕ ಬೆಳೆಗಾರರಿಗೆ ವರದಾನವಾಗಿವೆ.

ಕಾಫಿ ತೋಟಗಳಲ್ಲಿ ‘ಅಖಾಟಿನಾಫೂಲಿಕ’ ಎಂದು ಕರೆಯಲ್ಪಡುವ ನೇತಾಡುವ ಆಫ್ರಿಕಾದ ದೈತ್ಯ ಶಂಖು ಹುಳುಗಳು (ಮೂಲತಃ ಪೂರ್ವ ಆಫ್ರಿಕಾ) ೧೮೪೭ರಲ್ಲಿ ಭಾರತದಲ್ಲಿ ಕಾಣಿಸಿಕೊಂಡವು. ಮಳೆಗಾಲದಲ್ಲಿ ಹೇರಳವಾಗಿ ಕಾಣಸಿಗುವ ಈ ಹುಳಗಳು ರಾತ್ರಿ ವೇಳೆಯಲ್ಲಿ ಹೆಚ್ಚು ಚುರುಕಾಗಿದ್ದು ಹಗಲಿನ ವೇಳೆಯಲ್ಲಿ ಮರಗಳ ಮೇಲೆ ಬಿದ್ದಿರುವ ಮರದ ತುಂಡುಗಳಲ್ಲಿ, ಕಸದ ರಾಶಿಯಲ್ಲಿ ಅಡಗಿಕೊಂಡಿ ರುತ್ತವೆÉ. ಮಳೆಗಾಲದ ಪ್ರಾರಂಭದಲ್ಲಿ ಇವುಗಳ ಕಾರ್ಯಚಟುವಟಿಕೆ ಆರಂಭಗೊಳ್ಳುತ್ತದೆ. ಪಪ್ಪಾಯ, ರಬ್ಬರ್, ಕೊಕೊ, ಬಾಳೆ, ಅಡಿಕೆ ಸೇರಿದಂತೆ ೫೦೦ಕ್ಕೂ ಹೆಚ್ಚು ವಿವಿಧ ಜಾತಿಗಳ ಸಸ್ಯಗಳಿಗೆ ಹಾನಿ ಮಾಡುತ್ತವೆÉ. ಇದರ ಜೀವಿತಾವಧಿ ೩-೫ ವರ್ಷಗಳಾಗಿದ್ದು ಕೆಲವು ೯ ವರ್ಷಗಳವರೆಗೂ ಜೀವಿಸಿರುವುದಾಗಿ ಸಸ್ಯ ತಜ್ಞರು ಅಭಿಪ್ರಾಯಿಸುತ್ತಾರೆ.

ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಬೆಳ್ಳಾರಳ್ಳಿ, ಹಂಡ್ಲಿ, ಶಿರಂಗಾಲ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಕಳೆದ ಐದಾರು ವರ್ಷಗಳಿಂದ ಬೆಳೆಗಾರರಿಗೆ ತಲೆನೋವಾಗಿ ಪರಿಣಮಿಸಿರುವ ಈ ಆಫ್ರಿಕನ್ ದೈತ್ಯ ಶಂಖ ಹುಳಗಳು ಮಳೆ ಪ್ರಾರಂಭದಲ್ಲೇ ತೋಟಗಳಲ್ಲಿ ಕಾಣತೊಡಗಿವೆÉ. ಶಂಖ ಹುಳಗಳು ಹೆಚ್ಚಾದ ಸಂದರ್ಭದಲ್ಲಿ ಚೆಟ್ಟಳ್ಳಿ ಕಾಫಿ ಉಪಸಂಶೋಧನಾ ಕೇಂದ್ರದ ತಜ್ಞರು ಭೇಟಿ ಮಾಡಿ ಶಂಖಹುಳಗಳ ನಿಯಂತ್ರಣಕ್ಕೆ ಸಲಹೆ ಸೂಚನೆ ನೀಡುವುದರ ಜೊತೆಗೆ ಕಿಟ್‌ಗಳನ್ನು ವಿತರಿಸುತಿದ್ದರು. ವಿವಿಧ ಬಗೆಯ ಔಷಧಿಗಳನ್ನು ಸಿಂಪಡಿಸುವುದರ ಜೊತೆಗೆ ‘ಕ್ಯಾಚ್ ಅಂಡ್ ಕಿಲ್ಲ್’ ಕ್ರಮದ ಮೂಲಕ ಶಂಖ ಹುಳಗಳನೆಲ್ಲ ಕಿತ್ತು ತಂದು, ಗುಂಡಿ ತೆಗೆದು ಸುಣ್ಣ ಹಾಗೂ ಉಪ್ಪನ್ನು ಹಾಕಿ ಅದರಲ್ಲಿ ಹುಳಗಳನೆಲ್ಲ ಮುಚ್ಚಿ ಹಾಕಲಾಗುತ್ತಿತ್ತು.

ಈ ಬಾರಿ ಬೆಳ್ಳಕ್ಕಿ (ಕೊಕ್ಕರೆ)ಗಳು, ನವಿಲು, ಹಕ್ಕಿಗಳು ಶಂಖ ಹುಳಗಳಿರುವ ಜಾಗದಲ್ಲಿ ಕಂಡು ಬರುತಿದ್ದು, ಅವುಗಳೆÉಲ್ಲ ಶಂಖಹುಳಗಳನ್ನು ತಿಂದು ನಾಶಪಡಿಸುತ್ತಿದ್ದು, ಹಿಂದಿನ ವರ್ಷಗಳಿಗಿಂತ ಹೆಚ್ಚಾಗಿ ಶಂಖಹುಳುಗಳÀ ನಿಯಂತ್ರಣವಾಗುವ ಮೂಲಕ ಯಾವುದೇ ಕ್ರಮಕೈಗೊಳ್ಳದೆ ಬೆಳೆಗಾರರು ನಿಟ್ಟುಸಿರು ಬಿಡುವಂತಾಗಿದೆ.