ನಾಪೋಕ್ಲು, ಜು. ೧೬ : ಇಲ್ಲಿಗೆ ಸಮೀಪದ ಬೆಟ್ಟಗೇರಿ ಗ್ರಾಮ ಪಂಚಾಯಿತಿಯ ಪಾಲೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಅರ್ಚಕರ ಮನೆ ಹಿಂಬದಿಯ ಬರೆ ತೀವ್ರ ಮಳೆ ಗಾಳಿಯಿಂದ ಗುರುವಾರ ಕುಸಿದು ಸಂಕಷ್ಟ ಎದುರಾದ ಹಿನ್ನೆಲೆಯಲ್ಲಿ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಅರ್ಚಕರ ಮನೆ ಹಾಗೂ ಸಭಾಭವನ ತೀವ್ರ ಅಪಾಯ ಮಟ್ಟದಲ್ಲಿದ್ದು ಹೆಚ್ಚಿನ ದುರಂತ ಸಂಭವಿಸುವ ಮುನ್ನ ತಡೆಗೋಡೆ ನಿರ್ಮಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳದಲ್ಲಿ ದೇವಾಲಯದ ಪ್ರಮುಖರು ಹಾಗೂ ಗ್ರಾಮಸ್ಥರು ಒತ್ತಾಯಿಸಿದರು. ಬಳಿಕ ಮಾತನಾಡಿದ ಬೋಪಯ್ಯ ತಡೆಗೋಡೆ ನಿರ್ಮಿಸಲು ೧೫ ಲಕ್ಷ ರೂಪಾಯಿಯನ್ನು ನೀಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭ ಬೆಟ್ಟಗೇರಿ ಗ್ರಾಮ ಪಂಚಾಯಿತಿಯ ಅಧ್ಯಕ್ಷ ನಾಪಂಡ ರ‍್ಯಾಲಿ, ಸದಸ್ಯರಾದ ಮೀನಾಕ್ಷಿ, ಎಡಿಕೇರಿ ಡಾಲಿ ದೇವಯ್ಯ, ಬೊಳ್ಳಿಯಂಡ ಹರೀಶ್, ಬೆಪ್ಪುರನ ಮೇದಪ್ಪ, ಮೇಪಾಡಂಡ ವೇಣು ಉತ್ತಪ್ಪ, ಬಿ.ಎ. ರಾಮಣ್ಣ, ಕಂದಾಯ ಪರಿವೀಕ್ಷಕ ರವಿಕುಮಾರ್, ಅರ್ಚಕ ದೇವಿ ಪ್ರಸಾದ್ ಇನ್ನಿತರರು ಉಪಸ್ಥಿತರಿದ್ದರು.