ಮಡಿಕೇರಿ, ಜು. ೧೬: ಇದೇ ತಿಂಗಳ ೨೮ರಿಂದ ಲಂಡನ್ನ ಬರ್ಮಿಂಗ್ ಹ್ಯಾಂನಲ್ಲಿ ಆರಂಭ ಗೊಳ್ಳಲಿರುವ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿರುವ ಭಾರತೀಯ ಕ್ರೀಡಾಪಟುಗಳ ಪೈಕಿ ಕೊಡಗಿನವರಾದ ಕುಟ್ಟಂಡ ಜೋಶ್ನಾ ಚಿಣ್ಣಪ್ಪ ಹಾಗೂ ಅಶ್ವಿನಿ ಪೊನ್ನಪ್ಪ ಅವರುಗಳು ಪಾಲ್ಗೊಳ್ಳುತ್ತಿದ್ದಾರೆ. ಸ್ಕಾ÷್ವಷ್ ಕ್ರೀಡೆಯಲ್ಲಿ ಜೋಶ್ನಾ ಹಾಗೂ ಬ್ಯಾಡ್ಮಿಂಟನ್ನಲ್ಲಿ ಅಶ್ವಿನಿ ಪೊನ್ನಪ್ಪ ದೇಶವನ್ನು ಪ್ರತಿನಿಧಿಸುತ್ತಿದ್ದಾರೆ.
ಮೂಲತಃ ಪಾಲಿಬೆಟ್ಟದವರಾದ ಚೆನ್ನೆöÊಯಲ್ಲಿರುವ ಕುಟ್ಟಂಡ ಅಂಜನ್ ಚಿಣ್ಣಪ್ಪ ಹಾಗೂ ಸುನಿತಾ ಚಿಣ್ಣಪ್ಪ ದಂಪತಿ ಪುತ್ರಿ ಜೋಶ್ನಾ ಏಷ್ಯನ್ ಚಾಂಪಿಯನ್ ಹಾಗೂ ವಿಶ್ವ ರ್ಯಾಂಕಿAಗ್ ಪಟ್ಟಿಯಲ್ಲಿ ೧೭ನೇ ರ್ಯಾಂಕ್ನಲ್ಲಿದ್ದಾರೆ. ಈ ಬಾರಿಯ ಕಾಮನ್ವೆಲ್ತ್ನಲ್ಲಿ ಜೋಶ್ನಾ ಸ್ಕಾ÷್ವಷ್ನಲ್ಲಿ ಸಿಂಗಲ್ಸ್ ಹಾಗೂ ಡಬಲ್ಸ್ನಲ್ಲಿ ತಮ್ಮ ಸಹಪಾಠಿ ದೀಪಿಕಾ ಪಳ್ಳಿಕಲ್ ಅವರೊಂದಿಗೆ ಆಡಲಿದ್ದಾರೆ. ಸಿಂಗಲ್ಸ್ ಹಾಗೂ ಡಬಲ್ಸ್ ಎರಡೂ ವಿಭಾಗದಲ್ಲಿ ಪದಕ ಗಳಿಸುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.
ಅಮ್ಮತ್ತಿಯ ಮಾಚಿಮಂಡ ಪೊನ್ನಪ್ಪ ಹಾಗೂ ಕಾವೇರಿ ದಂಪತಿಯ ಪುತ್ರಿ ಅಶ್ವಿನಿ (ತಾಮನೆ- ಪೊನ್ನಚೆಟ್ಟಿರ) ಅವರು
(ಮೊದಲ ಪುಟದಿಂದ) ನಾಲ್ಕನೇ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ಬಾರಿ ಅಶ್ವಿನಿ ಮಿಕ್ಸೆಡ್ ಡಬಲ್ಸ್ನಲ್ಲಿ ಸುಮಿತ್ ರೆಡ್ಡಿ ಅವರೊಂದಿಗೆ ಸ್ಪರ್ಧಿಸಲಿದ್ದಾರೆ. ಈ ಹಿಂದಿನ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಅಶ್ವಿನಿ ದೇಶಕ್ಕೆ ಪದಕದ ಸಾಧನೆ ಮಾಡಿದವರಾಗಿದ್ದಾರೆ.
ಪ್ರಸಕ್ತ ವರ್ಷದ ಕಾಮನ್ವೆಲ್ತ್ನಲ್ಲಿ ಪಾಲ್ಗೊಳ್ಳುತ್ತಿರುವ ಕ್ರೀಡಾಪಟುಗಳ ಪೈಕಿ ಇವರಿಬ್ಬರು ಮಾತ್ರ ಕೊಡಗು ಮೂಲದವರಾಗಿದ್ದಾರೆ.