ಶನಿವಾರಸಂತೆ, ಜು. ೧೬: ಕೆಲವು ದಿನಗಳ ಹಿಂದೆ ಶನಿವಾರಸಂತೆ ಸಮೀಪ ಗೋಡೆ ಕುಸಿತಕ್ಕೊಳಗಾಗಿ ಗಾಯಗೊಂಡಿದ್ದ ವೃದ್ಧೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದು, ಮಳೆಹಾನಿಗೆ ಮೊದಲ ಜೀವ ಬಲಿಯಾದಂತಾಗಿದೆ.
ಶನಿವಾರಸAತೆ ಬಳಿಯ ದುಂಡಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸುಳುಗಳಲೆ ಗ್ರಾಮದ ದಿ. ದಕ್ಷಿಣಾಮೂರ್ತಿ ಅವರ ಪತ್ನಿ ವಸಂತಮ್ಮ (೭೦) ಎಂಬವರ ಮನೆಯ ಸ್ನಾನದ ಗೋಡೆ ಕುಸಿದು ಅವರ ಎರಡು ಕಾಲುಗಳು, ಮುಖ ಹಾಗೂ ಕಣ್ಣಿಗೆ ಗಂಭೀರ ಗಾಯಗಳಾಗಿದ್ದವು. ಕಳೆದ ತಾ. ೫ ರಂದು ಬೆಳಿಗ್ಗೆ ಈ ದುರ್ಘಟನೆ ಸಂಭವಿಸಿದ್ದು, ವಸಂತಮ್ಮ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು
(ಮೊದಲ ಪುಟದಿಂದ) ಇಂದು ಬೆಳಿಗ್ಗೆ ಸಾವನ್ನಪ್ಪಿದ್ದಾರೆ. ಇದರಿಂದಾಗಿ ಮಹಾ ಮಳೆಯ ಅನಾಹುತದಲ್ಲಿ ಮೊದಲ ಮಾನವ ಜೀವ ಹಾನಿ ಸಂಭವಿಸಿದAತಾಗಿದೆ. ಮೃತರು ಈರ್ವರು ಪುತ್ರರು, ಈರ್ವರು ಪುತ್ರಿಯರನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ತಾ.೧೭ರಂದು (ಇಂದು) ನೆರವೇರಲಿದೆ.