ಕೂಡಿಗೆ, ಜು. ೧೬: ಕುಶಾಲನಗರ ಹೋಬಳಿ ವ್ಯಾಪ್ತಿಯ ಪೌತಿ ಖಾತೆ ಆಂದೋಲನ ಕಾರ್ಯಕ್ರಮವು ಕುಶಾಲನಗರದ ನಾಡಕಛೇರಿಯ ಸಭಾಂಗಣದಲ್ಲಿ ತಾಲೂಕು ತಹಶೀಲ್ದಾರ ಪ್ರಕಾಶ್ ಅಧ್ಯಕ್ಷತೆಯಲ್ಲಿ ನಡೆಯಿತು.
ಆಂದೋಲನ ಕಾರ್ಯಕ್ರಮದ ಅಡಿಯಲ್ಲಿ ಶಿರಂಗಾಲ, ತೊರೆನೂರು, ಹೆಬ್ಬಾಲೆ, ಕೂಡಿಗೆ, ಕೂಡುಮಂಗಳೂರು, ಮುಳ್ಳುಸೋಗೆ, ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವಾಸಿಗಳು ಸಂಬAಧಿಸಿದ ಅರ್ಜಿಗಳನ್ನು ದಾಖಲೆಗಳ ಸಮೇತ ಅರ್ಜಿ ಸಲ್ಲಿಸಿದರು.
ತಹಶೀಲ್ದಾರ ಪ್ರಕಾಶ್ ಕಾರ್ಯಕ್ರಮದ ಸದುಪಯೋಗ ಪಡಿಸಿಕೊಳ್ಳಬೇಕಾಗಿ ಮತ್ತು ಕಂದಾಯ ಇಲಾಖೆಯ ನಿಯಮನುಸಾರವಾಗಿ ಪೌತಿ ಖಾತೆಗಳ ತಿದ್ದುಪಡಿಯನ್ನು ಸರಿಪಡಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭ ಉಪ ತಹಶೀಲ್ದಾರ ಕೆ.ಜೆ. ಮಧುಸೂದನ್, ಕಂದಾಯ ನಿರೀಕ್ಷಕ ಸಂತೋಷ್ ಸೇರಿದಂತೆ ಲೆಕ್ಕಾಧಿಕಾರಿಗಳಾದ ಗೌತಮ್, ಗುರುದರ್ಶನ್, ಸಚಿನ್, ಪೀರ್ ಮಹಮ್ಮದ್ ಸೇರಿದಂತೆ ಗ್ರಾಮ ಸಹಾಯಕರಾದ ಲೋಕೇಶ್, ಮಂಜುನಾಥ್ ಹಾಜರಿದ್ದರು.