ಮಡಿಕೇರಿ, ಜು. ೧೬: ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿರು ವುದರಿಂದ ಕೃಷಿ ಚಟುವಟಿಕೆಗಳು ಗರಿಗೆದರಲಿದ್ದು, ರೈತರ ಬೇಡಿಕೆಗೆ ತಕ್ಕಂತೆ ರಸಗೊಬ್ಬರ ಪೂರೈಸಲು ಅಗತ್ಯ ಕ್ರಮವಹಿಸುವಂತೆ ಜಿ.ಪಂ. ಸಿಇಒ ಭಂವರ್ ಸಿಂಗ್ ಮೀನಾ ಸೂಚಿಸಿದ್ದಾರೆ.

ನಗರದ ಜಿ.ಪಂ. ಸಭಾಂಗಣದಲ್ಲಿ ರಸಗೊಬ್ಬರ ಪೂರೈಕೆ ಮತ್ತು ದಾಸ್ತಾನು ಸಂಬAಧಿಸಿದAತೆ ಮಾಹಿತಿ ಪಡೆದು ಅವರು ಮಾತನಾಡಿದರು. ಕೃಷಿ ಪತ್ತಿನ ಸಹಕಾರ ಸಂಘಗಳ ಸಿಇಒಗಳು ಕಾಲ ಕಾಲಕ್ಕೆ ಬೇಡಿಕೆ ಇರುವ ರಸಗೊಬ್ಬರಗಳನ್ನು ಪೂರೈಸಿಕೊಳ್ಳಲು ಹೆಚ್ಚಿನ ಮುತುವರ್ಜಿವಹಿಸಬೇಕು. ರೈತರಿಗೆ ರಸಗೊಬ್ಬರ ಎಷ್ಟು ಬೇಡಿಕೆ ಇದೆ, ಸಹಕಾರ ಸಂಘಗಳ ವ್ಯಾಪ್ತಿಯಲ್ಲಿ ಎಷ್ಟು ರಸಗೊಬ್ಬರ ಬೇಕಿದೆ ಎಂಬುದನ್ನು ಖಚಿತಪಡಿಸಿಕೊಂಡು ಕೃಷಿ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು.

ರಸಗೊಬ್ಬರ ಪೂರೈಸುವಲ್ಲಿ ಯಾವುದೇ ರೀತಿಯ ವ್ಯತ್ಯಯ ಉಂಟಾಗದAತೆ ಗಮನಹರಿಸಬೇಕು. ಸಮಸ್ಯೆಗಳಿದ್ದಲ್ಲಿ ಮಾಹಿತಿ ನೀಡು ವಂತಾಗಬೇಕು ಎಂದು ಜಿ.ಪಂ. ಸಿಇಒ ಹೇಳಿದರು. ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಶಬಾನಾ ಎಂ. ಷೇಕ್ ಮಾತನಾಡಿ, ಕೃಷಿ ಪತ್ತಿನ ಸಹಕಾರ ಸಂಘಗಳ ವ್ಯಾಪ್ತಿಯಲ್ಲಿ ರಸಗೊಬ್ಬರ ಎಷ್ಟು ಬೇಡಿಕೆ ಇದೆ, ಕಳೆದ ವರ್ಷ ಎಷ್ಟು ಪೂರೈಕೆಯಾಗಿ ಎಷ್ಟು ಮಾರಾಟವಾಗಿತ್ತು ಎಂಬುದನ್ನು ಗಮನಿಸಿ ಎರಡು ತಿಂಗಳ ಮುಂಚಿತ ವಾಗಿ ರಸಗೊಬ್ಬರ ಪೂರೈಸಿಕೊಳ್ಳಲು ಮುಂದಾಗಬೇಕು ಎಂದು ಮನವಿ ಮಾಡಿದರು. ಹಾಸನ ಜಿಲ್ಲೆಯಿಂದ ರಸಗೊಬ್ಬರ ಪೂರೈಕೆಯಾಗು ವುದರಿಂದ ಮುಂಗಡವಾಗಿ ಹಣ ಪಾವತಿಸಿ ರಸಗೊಬ್ಬರ ಪೂರೈಸಿ ಕೊಳ್ಳಲು ಮುಂದಾಗಬೇಕು. ಜಿಲ್ಲೆಯಲ್ಲಿ ರಸಗೊಬ್ಬರ ದಾಸ್ತಾನು ಇರಬೇಕು. ಯಾವುದೇ ರೀತಿಯಲ್ಲಿ ಕೊರತೆ ಉಂಟಾಗದAತೆ ನೋಡಿ ಕೊಳ್ಳಬೇಕು. ಪ್ರತಿ ತಿಂಗಳು ಎಷ್ಟು ರಸಗೊಬ್ಬರ ಬೇಕು ಎಂಬ ಬಗ್ಗೆ ಎರಡು ತಿಂಗಳ ಮುಂಚಿತವಾಗಿ ಇಂಡೆAಟ್ ನೀಡಬೇಕು ಎಂದು ಶಬಾನಾ ಎಂ. ಷೇಕ್ ಹೇಳಿದರು. ಜಿಲ್ಲೆಗೆ ಬರಬೇಕಿರುವ ರಸಗೊಬ್ಬರವನ್ನು ತರಿಸಿಕೊಳ್ಳಲು ಪ್ರಯತ್ನಿಸಬೇಕು. ಆ ನಿಟ್ಟಿನಲ್ಲಿ ಕೃಷಿ ಇಲಾಖೆಯು ಸಮನ್ವಯತೆಯಿಂದ ಕಾರ್ಯನಿರ್ವಹಿಸಲಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರು ನುಡಿದರು.

ಸಹಕಾರ ಸಂಘಗಳ ಉಪ ನಿಬಂಧಕ ರಮೇಶ್ ಸಹಕಾರ ಇಲಾಖೆಯ ಕಾರ್ಯ ಕ್ರಮಗಳು, ಪ್ರಗತಿ ಸಂಬAಧ ಮಾಹಿತಿ ಪಡೆದರು. ಸಹಾಯಕ ನಿಬಂಧಕ ಮೋಹನ್ ಇತರರು ಇದ್ದರು.