ಗೋಣಿಕೊಪ್ಪ ವರದಿ, ಜು. ೧೬: ಭಾನುವಾರ ನಿಧನರಾದ ಪತ್ರಕರ್ತ, ನಾಪೋಕ್ಲು ಭಾಗದ ವರದಿಗಾರ ಕುಂದೈರೀರ ಎಂ. ರಮೇಶ್ ಅವರಿಗೆ ಪೊನ್ನಂಪೇಟೆ ಮತ್ತು ವೀರಾಜಪೇಟೆ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸಿಲ್ವರ್‌ಸ್ಕೆöÊ ಸಭಾಂಗಣ ದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಸಂಘದ ರಾಜ್ಯ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಪೊನ್ನಂಪೇಟೆ ತಾಲೂಕು ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ, ವೀರಾಜಪೇಟೆ ತಾಲೂಕು ಅಧ್ಯಕ್ಷ ರಜಿತ್‌ಕುಮಾರ್ ಗುಹ್ಯ, ಜಿಲ್ಲಾ ಉಪಾಧ್ಯಕ್ಷ ಹೆಚ್.ಕೆ. ಜಗದೀಶ್, ಸಂಘದ ಪ್ರಮುಖರಾದ ಮಂಡೇಡ ಅಶೋಕ್, ವಿ.ವಿ. ಅರುಣ್ ಕುಮಾರ್, ಮಚ್ಚಮಾಡ ಅನೀಶ್ ಮಾದಪ್ಪ, ಪುತ್ತಂ ಪ್ರದೀಪ್, ತೇಜಸ್ ಪಾಪಯ್ಯ, ಡಿ. ನಾಗೇಶ್, ಕುಟ್ಟಂಡ ಅಜಿತ್ ಕರುಂಬಯ್ಯ, ಕುಪ್ಪಂಡ ದತ್ತಾತ್ರಿ, ರೇಖಾ ಗಣೇಶ್, ಚನ್ನನಾಯಕ, ಹೆಚ್.ಆರ್. ಸತೀಶ್ ಇದ್ದರು.