ಮಡಿಕೇರಿ, ಜು. ೧೩: ತಾ. ೧೦ ರಂದು ಸಂಪಾಜೆ-ಕೊಯನಾಡು ಶಾಲೆಯ ಸಮೀಪದ ಕಿಂಡಿ ಅಣೆಕಟ್ಟೆಗೆ ಅಡ್ಡಲಾಗಿ ಮರಗಳು ನಿಂತು ಪ್ರವಾಹಕ್ಕೆ ಸಿಲುಕಿದ ನಾಲ್ಕು ಮನೆಗಳು ಜಲಾವೃತಗೊಂಡಿದ್ದು, ಅದೇ ದಿನ ನೆರೆ ಹಾವಳಿಗೆ ಒಳಗಾದವರ ರಕ್ಷಣೆ ಕಾರ್ಯ ನಡೆಯಿತು.
ತಾ. ೧೧ ರಂದು ನೆರೆ ಹಾವಳಿಯಿಂದ ಮುಳುಗಿದ ಮನೆಗಳ ಸ್ವಚ್ಛತಾ ಕಾರ್ಯ ಹಾಗೂ ಕೆಸರು ತೆಗೆಯುವ ಕಾರ್ಯದಲ್ಲಿ ಪಯಸ್ವಿನಿ ಯುವಕ ಸಂಘ, ಆದರ್ಶ ಫ್ರೆಂಡ್ಸ್ ಚೆಡಾವು ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ತೊಡಗಿಸಿಕೊಂಡರು.