ಮಡಿಕೇರಿ, ಜು. ೧೩: ಬೆಟ್ಟಗೇರಿ ಗ್ರಾಮ ಪಂಚಾಯಿತಿಯ ಹೆರವನಾಡು ಗ್ರಾಮದ ಉಡೋತ್‌ಮೊಟ್ಟೆ ಅಂಗನವಾಡಿ ಕೇಂದ್ರದ ಮೇಲ್ಛಾವಣಿ ಶಿಥಿಲಾವಸ್ಥೆಯಲ್ಲಿದ್ದು, ಕುಸಿಯುವ ಹಂತದಲ್ಲಿದೆ. ಅಂಗನವಾಡಿ ಕೇಂದ್ರಕ್ಕೆ ಬೆಟ್ಟಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಪಂಡ ರ‍್ಯಾಲಿ ಮಾದಯ್ಯ, ಸದಸ್ಯರಾದ ಗೋಪಾಲ ಪೂಜಾರಿ ಉಡೋತ್, ಅಭಿವೃದ್ಧಿ ಅಧಿಕಾರಿ ಉದಯ ಮತ್ತು ಸಿಬ್ಬಂದಿ ವರ್ಗದವರು ಭೇಟಿ ನೀಡಿ ಪರಿಶೀಲಿಸಿದರು. ಪಂಚಾಯಿತಿ ವತಿಯಿಂದ ಟಾರ್ಪಲ್ ಅನ್ನು ಅಂಗನವಾಡಿ ಕಾರ್ಯಕರ್ತೆ ಜಯಂತಿ ಎಂ.ಎಸ್. ಅವರಿಗೆ ಹಸ್ತಾಂತರಿಸಲಾಯಿತು. ಸಹಾಯಕಿ ಕಮಲ ಹಾಜರಿದ್ದರು.