ಮಡಿಕೇರಿ, ಜು. ೧೩: ಕೊಡಗು ಜಿಲ್ಲಾ ವುಶು ಅಸೋಸಿಯೇಷನ್ ಹಾಗೂ ಕರ್ನಾಟಕ ವುಶು ಅಸೋಸಿಯೇಷನ್ ವತಿಯಿಂದ ಮಾದಾಪುರದಲ್ಲಿ ೪ನೇ ಜಿಲ್ಲಾಮಟ್ಟದ ವುಶು ಚಾಂಪಿಯನ್ ಶಿಪ್ ನಡೆಯಿತು.

ಮಾದಾಪುರದ ಡಾ. ಅಂಬೇಡ್ಕರ್ ಭವನದಲ್ಲಿ ನಡೆದ ಸ್ಪರ್ಧೆಯನ್ನು ಹಿರಿಯರಾದ ಶ್ರೀಧರ್, ಸುಂಟಿಕೊಪ್ಪ ಜೆಸಿಐನ ಅಧ್ಯಕ್ಷ ಬಿ.ಆರ್. ಸತೀಶ್ ಕುಮಾರ್ ಉದ್ಘಾಟಿಸಿದರು.

ವುಶು ಸಂಸ್ಥೆಯ ಅಧ್ಯಕ್ಷ ಪಿ.ಕೆ. ರಮೇಶ್ ಅಧ್ಯಕ್ಷತೆಯಲ್ಲಿ ನಡೆದ ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧ ಭಾಗಗಳ ಸುಮಾರು ೧೫ ತಂಡಗಳು ಭಾಗವಹಿಸಿದ್ದವು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಸ್ವಸ್ಥ ಸಂಸ್ಥೆಯ ವ್ಯವಸ್ಥಾಪಕ ಮುರುಗೇಶ್ ವಿಜೇತ ಕ್ರೀಡಾಪಟುಗಳಿಗೆ ಪದಕ ವಿತರಿಸಿದರು.