ಸೋಮವಾರಪೇಟೆ, ಜು. ೧೩: ಇಲ್ಲಿನ ಲಯನ್ಸ್ ಕ್ಲಬ್ ಮತ್ತು ಲಿಯೋ ಕ್ಲಬ್ಗಳ ಪದಗ್ರಹಣ ಕಾರ್ಯಕ್ರಮ ತಾ. ೧೭ ರಂದು ಒಕ್ಕಲಿಗರ ಸಮುದಾಯ ಭವನದಲ್ಲಿ ಸಂಜೆ ೬.೩೦ಕ್ಕೆ ನಡೆಯಲಿದೆ ಎಂದು ಅಧ್ಯಕ್ಷ ಸಿ.ಕೆ. ಮಲ್ಲಪ್ಪ ತಿಳಿಸಿದ್ದಾರೆ.
ನೂತನ ಸಾಲಿನ ಅಧ್ಯಕ್ಷ ಸಿ.ಕೆ. ರೋಹಿತ್, ಪ್ರಧಾನ ಕಾರ್ಯದರ್ಶಿ ಕೆ.ಎನ್. ತೇಜಸ್ವಿ, ಖಜಾಂಚಿ ಜಿ.ಟಿ. ಯೋಗೇಂದ್ರ ಹಾಗೂ ಲಿಯೋ ಅಧ್ಯಕ್ಷ ಅಜಯ್ ಸೇರಿದಂತೆ ನೂತನ ಆಡಳಿತ ಮಂಡಳಿಗೆ ಹಾಸನದ ಮಾಜೀ ಜಿಲ್ಲಾ ಗವರ್ನರ್ ಹೆಚ್.ಎಸ್. ಮಂಜುನಾಥ್ಮೂರ್ತಿ ಪದಗ್ರಹಣ ನೆರವೇರಿಸಲಿದ್ದಾರೆ.