ಮಡಿಕೇರಿ, ಜು. ೧೨: ಕೊಡಗು ರಕ್ಷಣಾ ವೇದಿಕೆ ಮಳೆಹಾನಿಯಿಂದ ನಷ್ಟ ಅನುಭವಿಸಿ ಅತಂತ್ರ ಸ್ಥಿತಿ ಅನುಭವಿಸುತ್ತಿರುವ ಕುಟುಂಬಗಳಿಗೆ ಪರಿಹಾರ ಒದಗಿಸಲು ಮತ್ತು ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಲು ‘ವಿಪತ್ತು ಪರಿಹಾರ ವಾಹನ’ವನ್ನು ಆರಂಭಿಸಿದೆ. ಈ ವಾಹನದ ಕಾರ್ಯ ಚಟುವಟಿಕೆಗೆ ಸುದರ್ಶನ ಅತಿಥಿ ಗೃಹದ ಎದುರು ಉಸ್ತುವಾರಿ ಸಚಿವ ಬಿ.ಸಿ. ನಾಗೇಶ್ ಚಾಲನೆ ನೀಡಿದರು.
ಕೊರವೇ ಅಧ್ಯಕ್ಷ ಪವನ್ ಪೆಮ್ಮಯ್ಯ ಮಾತನಾಡಿ, ಈ ಬಾರಿ ಮಹಾಮಳೆಯಿಂದ ಯಾವುದೇ ಸಂಕಷ್ಟ ಪರಿಸ್ಥಿತಿ ಎದುರಾದರೂ ಕೊರವೇ ಸಂತ್ರಸ್ತರ ಸಹಾಯಕ್ಕೆ ಬರಲಿದೆ. ನೆರವಿಗಾಗಿ ೯೦೪೯೦೫೦೯೦೫ನ್ನು ಸಂಪರ್ಕಿಸ ಬಹುದು ಎಂದು ತಿಳಿಸಿದರು.
ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ, ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಂವರ್ ಸಿಂಗ್ ಮೀನಾ, ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ, ಕೊರವೇ ಭಾಗಮಂಡಲ ಹೋಬಳಿ ಅಧ್ಯಕ್ಷ ಚದುಕಾರ್ ವಿನೋದ್, ಕೆ.ವಿಷು, ನಿರ್ದೇಶಕ ರವಿ ಪಾಪು, ಮಡಿಕೇರಿ ನಗರ ಘಟಕದ ಪ್ರಧಾನ ಕಾರ್ಯದರ್ಶಿ ಭರತ್ ನಾಣಯ್ಯ, ಪೊನ್ನಂಪೇಟೆ ಘಟಕದ ಅಧ್ಯಕ್ಷ ಅಜ್ಜಿಕುಟ್ಟಿರ ಪೊನ್ನಪ್ಪ, ಉಪಾಧ್ಯಕ್ಷ ಚೇರಂಡ ರೋಷನ್, ಮತ್ತಿತರ ಪ್ರಮುಖರು ಈ ಸಂದರ್ಭ ಹಾಜರಿದ್ದರು.