ಮಡಿಕೇರಿ, ಜು. ೧೨: ತಾ. ೧೦ ರಂದು ಬೆಂಗಳೂರಿನಿAದ ರಾತ್ರಿ ೧೨ ಗಂಟೆಗೆ ವೀರಾಜಪೇಟೆ ಮಾರ್ಗವಾಗಿ ಮಡಿಕೇರಿಗೆ ಆಗಮಿಸಿದ ರಾಜಹಂಸ ಬಸ್‌ನಲ್ಲಿ (ಕೆಎ ೨೧ ಎಫ್-೦೨೩೧) ಕಗ್ಗೋಡ್ಲು ನಿವಾಸಿ, ಸೋಮಣ್ಣ ಎಂಬವರು ರೂ. ೬೦ ಸಾವಿರ ಬೆಲೆ ಬಾಳುವ ಮೊಬೈಲನ್ನು ಕಳೆದುಕೊಂಡಿದ್ದರು. ಇದನ್ನು ಸಂಚಾರಿ ಶಾಖೆಯ ಅಚ್ಚುತ ಭಟ್ ಅವರ ಸಮ್ಮುಖದಲ್ಲಿ ಮಡಿಕೇರಿ ಕೆ.ಎಸ್.ಆರ್.ಟಿ.ಸಿ. ಡಿಪೋನ ನಿರ್ವಾಹಕ ಟಿ.ಕೆ. ರೇಣುಕಾರ್ಯ ಮತ್ತು ಚಾಲಕ ಅಶೋಕ್ ಕುಮಾರ್ ಹಿಂತಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.