ಚೆಯ್ಯಂಡಾಣೆ, ಜು. 7: ನರಿಯಂದಡ ಗ್ರಾಮ ಪಂಚಾಯಿತಿಗೆ ಒಳಪಟ್ಟ ಚೆಯ್ಯಂಡಾಣೆ - ಪಾರಾಣೆ ಸಂಪರ್ಕ ರಸ್ತೆ ತೀರ ಹದಗೆಟ್ಟಿದ್ದು, ಕಡಿತಗೊಳ್ಳುವ ಆತಂಕ ಎದುರಾಗಿದೆ. ನಾಪೆÇೀಕ್ಲು ಮಡಿಕೇರಿ ಮುಂತಾದೆಡೆ ಸಂಚರಿಸಲು ಈ ರಸ್ತೆ ಸಂಪರ್ಕ ಕಲ್ಪಿಸುತ್ತಿದ್ದು, ಗುಂಡಿಮಯವಾದ ರಸ್ತೆ ಕಳೆದ ಹಲವಾರು ವರ್ಷಗಳಿಂದ ದುರಸ್ತಿ ಕಾಣದೆ ಶೋಚನೀಯ ಪರಿಸ್ಥಿತಿಯಲ್ಲಿದೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಮಾಡಿದರೂ ಪರಿಹಾರ ಮಾತ್ರ ದೊರೆತಿಲ್ಲ.

ತೋಟಂಬೈಲು ಸಮೀಪದÀ ಸೇತುವೆ ಕೂಡ ತೀವ್ರ ಹದಗೆಟ್ಟಿದೆ. ಮಳೆಗಾಲ ಬಿರುಸು ಪಡೆದು ಕೊಂಡಿದ್ದು, ಸಂಪರ್ಕ ಕಡಿತಗೊಳ್ಳುವ ಆತಂಕ ಸೃಷ್ಟಿಯಾಗಿದೆ. ಸೇತುವೆಯ ಮೇಲ್ಭಾಗದಲ್ಲಿ ನೀರು ತುಂಬಿ ಕೆಸರುಮಯವಾಗಿದೆ. ಈ ವರ್ಷ ಧಾರಾಕಾರ ಮಳೆ ಬಂದರೆ ಈ ಸೇತುವೆ ಹಾನಿಯಾಗುವ ಸಾಧ್ಯತೆ ಇದೆ. ಸಂಬಂಧಪಟ್ಟ ಲೋಕೋಪ ಯೋಗಿ ಇಲಾಖೆ ಕೂಡಲೇ ಈ ರಸ್ತೆ ಹಾಗೂ ಸೇತುವೆ ಕಾಮಗಾರಿ ಕೈಗೊಂಡು ಈ ಭಾಗದ ಜನರ ಸಮಸ್ಯೆಯನ್ನು ನೀಗಿಸಬೇಕಾಗಿ ಪತ್ರಿಕೆಯ ಮೂಲಕ ಸ್ಥಳೀಯರು ಆಗ್ರಹಿಸಿದ್ದಾರೆ.

ಎಡಪಾಲ ಗ್ರಾಮಸ್ಥರು ಮುಖ್ಯವಾಗಿ ಚೆಯ್ಯಂಡಾಣೆಯನ್ನು ಅವಲಂಬಿಸಿರುತ್ತಾರೆ. ಗ್ರಾಮ ಪಂಚಾಯಿತಿ ಕಚೇರಿ, ನ್ಯಾಯಬೆಲೆ ಅಂಗಡಿ, ಪ್ರೌಢಶಾಲೆ, ಬ್ಯಾಂಕುಗಳಿಗೆ ತೆರಳಬೇಕಾದರೆ ಈ ರಸ್ತೆ ಮುಖ್ಯ ವಾಗಿದ್ದು, ಸೇತುವೆ ದುಸ್ಥಿತಿಯಲ್ಲಿದ್ದು. ಸಂಚರಿಸಲು ತೊಡಕಾಗುತ್ತಿದೆ ಎಂದು ಜುಮಾ ಮಸೀದಿ ಎಡಪಾಲ ಅಧ್ಯಕ್ಷ ಕೆ.ಯು. ಶಾಫಿ ಆಗ್ರಹಿಸಿದ್ದಾರೆ.

ಸೇತುವೆ ದುಸ್ಥಿತಿಯಲ್ಲಿರು ವುದರಿಂದ ದಿನನಿತ್ಯ ಸಂಚರಿಸುವ ಬಸ್‍ಗಳಿಗೆ ತೊಂದರೆ ಯಾಗುತ್ತಿದ್ದು, ಮೂರ್ನಾಡು, ಮಡಿಕೇರಿ, ನಾಪೆÇೀಕ್ಲು ಚೆಯ್ಯಂಡಾಣೆಗೆ ತೆರಳಲು ತುಂಬಾ ತೊಂದರೆಯಾಗುತ್ತಿದೆ. ಕೂಡಲೇ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆಯವರು ಕಾಮಗಾರಿ ಆರಂಭಿಸಿ ಈ ಭಾಗದ ಜನರ ತೊಂದರೆಯನ್ನು ಪರಿಹರಿಸಬೇಕೆಂದು ಅಯ್ಯಪ್ಪ ಯುವಕ ಸಂಘದ ಅಧ್ಯಕ್ಷ ಬೆಳಿಯಂಡ್ರ ಹರಿಪ್ರಶಾದ್ ಆಗ್ರಹಿಸಿದ್ದಾರೆ.

- ಅಶ್ರಫ್ ಚೆಯ್ಯಂಡಾಣೆ