ವೀರಾಜಪೇಟೆ, ಜು. 7: ವಯೋವೃದ್ಧ ಕಾಯಿಲೆಗಳಿಂದ ಬಳಲುತ್ತಿದ್ದ ವೃದ್ಧೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಶಿವಕೇರಿಯಲ್ಲಿ ನಡೆದಿದೆ.
ವೀರಾಜಪೇಟೆ ನಗರದ ಶಿವಕೇರಿಯ ನಿವಾಸಿ ದಿ. ಚಾತು ಎಂಬವರ ಪತ್ನಿ ಎಂ.ಸಿ. ದೇವಮ್ಮ (ದೇವು -85) ನೇಣಿಗೆ ಶರಣಾದ ವೃದ್ಧೆ.
ಮೃತರ ಮಗ ಎಂ.ಸಿ. ರಘು ನೀಡಿದ ದೂರಿನ ಮೇರೆಗೆ ವೀರಾಜಪೇಟೆ ನಗರ ಠಾಣೆಯಲ್ಲಿ ಜೀವನದಲ್ಲಿ ಜಿಗುಪ್ಸೆ, ಆತ್ಮಹತ್ಯೆ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.