ಗೋಣಿಕೊಪ್ಪಲು, ಜು. 7: ತಮ್ಮ ಜೀವನದ ಹಂಗನ್ನು ತೊರೆದು ಕಾಡಾನೆಯನ್ನು ಪಳಗಿಸುವ ಮಾವುತರು ಹಾಗೂ ಕಾವಾಡಿಗರು ತಮ್ಮ ಬೇಡಿಕೆಯನ್ನು ರಾಜ್ಯಪಾಲರ ಮುಂದಿಟ್ಟರು.

ಕೊಡಗಿಗೆ ಭೇಟಿ ನೀಡಿದ ಕರ್ನಾಟಕದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ದುಬಾರೆಯ ಸಾಕಾನೆಯ ಶಿಬಿರಕ್ಕೆ ತೆರಳಿ ಇಲ್ಲಿನ ಆನೆ ಮಾವುತರ ಹಾಗೂ ಕಾವಾಡಿಗರ ಸಮಸ್ಯೆಯನ್ನು ಆಲಿಸಿದರು. ಈ ವೇಳೆ ಮಾವುತರು ತಮ್ಮ ಪ್ರಮುಖ ಬೇಡಿಕೆಯನ್ನು ಈಡೇರಿಸುವಂತೆ ರಾಜ್ಯಪಾಲರ ಮುಂದೆ ಮನವಿ ಮಾಡಿದರು. ಒಂದು ವೇಳೆ ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ಮೈಸೂರಿನ ದಸರಾ ಕಾರ್ಯಕ್ರಮಕ್ಕೆ ಆನೆ ಗಳೊಂದಿಗೆ ಭಾಗವಹಿಸುವುದಿಲ್ಲ ಎಂದು ರಾಜ್ಯಪಾಲರಿಗೆ ತಿಳಿಸಿದರು. ರಾಜ್ಯಪಾಲರು ಮುಖ್ಯಮಂತ್ರಿಯವರಿಗೆ ಈ ಬಗ್ಗೆ ಪ್ರಸ್ತಾಪಿಸುವುದಾಗಿ ಭರವಸೆ ನೀಡಿದ್ದಾರೆ.

ಅಲ್ಲದೆ ಇಲಾಖೆಯಲ್ಲಿ ತಮ್ಮನ್ನು ‘ಸಿ’ ದರ್ಜೆಯ ನೌಕರರನ್ನಾಗಿ ಪರಿಗಣಿಸುವಂತೆ ಆಗ್ರಹಿಸಿದ್ದಾರೆ. 93 ಆನೆ ಕಾವಾಡಿಗರು ಹಾಗೂ 58 ಆನೆ ಈಡೇರಿಸುವಂತೆ ರಾಜ್ಯಪಾಲರ ಮುಂದೆ ಮನವಿ ಮಾಡಿದರು. ಒಂದು ವೇಳೆ ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ಮೈಸೂರಿನ ದಸರಾ ಕಾರ್ಯಕ್ರಮಕ್ಕೆ ಆನೆ ಗಳೊಂದಿಗೆ ಭಾಗವಹಿಸುವುದಿಲ್ಲ ಎಂದು ರಾಜ್ಯಪಾಲರಿಗೆ ತಿಳಿಸಿದರು. ರಾಜ್ಯಪಾಲರು ಮುಖ್ಯಮಂತ್ರಿಯವರಿಗೆ ಈ ಬಗ್ಗೆ ಪ್ರಸ್ತಾಪಿಸುವುದಾಗಿ ಭರವಸೆ ನೀಡಿದ್ದಾರೆ.

ಅಲ್ಲದೆ ಇಲಾಖೆಯಲ್ಲಿ ತಮ್ಮನ್ನು ‘ಸಿ’ ದರ್ಜೆಯ ನೌಕರರನ್ನಾಗಿ ಪರಿಗಣಿಸುವಂತೆ ಆಗ್ರಹಿಸಿದ್ದಾರೆ. 93 ಆನೆ ಕಾವಾಡಿಗರು ಹಾಗೂ 58 ಆನೆ ವೇತನವನ್ನು ಪರಿಷ್ಕರಣೆ ಮಾಡುವಂತೆ ಹಾಗೂ ಉದ್ಯೋಗವನ್ನು ಖಾಯಂಗೊಳಿಸಿ ‘ಸಿ.’ ಶ್ರೇಣಿಯಲ್ಲಿ ನಮ್ಮನ್ನು ಪರಿಗಣಿಸುವಂತೆ ಒತ್ತಾಯಿಸಿ ತಾ. 15ರಂದು ಆನೆ ಮಾವುತರು ಹಾಗೂ ಕಾವಾಡಿಗರು ಸಭೆ ಸೇರಿ ಮುಂದಿನ ನಿರ್ಧಾರ ಕೈಗೊಳ್ಳುವ ಬಗ್ಗೆ ತಿಳಿದು ಬಂದಿದೆ. ತಮ್ಮ ಪ್ರಮುಖ ಬೇಡಿಕೆ ಈಡೇರಿಸುವ ಸಲುವಾಗಿ ಕಠಿಣ ನಿರ್ಧಾರ ಕೈಗೊಳ್ಳುವ ತೀರ್ಮಾನವನ್ನು ಸಭೆಯಲ್ಲಿ ಮಂಡಿಸುವ ಸಾಧ್ಯತೆ ಹೆಚ್ಚಾಗಿದೆ.

ತಮ್ಮ ಬೇಡಿಕೆ ಈಡೇರದೆ ಇದ್ದಲ್ಲಿ ಮುಂದಿನ ದಸರಾ ಕಾರ್ಯಕ್ರಮಕ್ಕೆ ತಮ್ಮ ಸಾಕಾನೆಗಳೊಂದಿಗೆ ತೆರಳದಿರಲು ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಸಭೆಗೆ ಮತ್ತಿಗೋಡು, ದುಬಾರೆ, ಬಂಡಿಪುರ ಹಾಗೂ ಸಕ್ರೆಬೈಲಿನ ಆನೆ ಶಿಬಿರದಿಂದ ಸಾಕಷ್ಟು ಮಂದಿ ಸಭೆಯಲ್ಲಿ ಭಾಗವಹಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಬೇಡಿಕೆ ಈಡೇರದಿದ್ದಲ್ಲಿ ತಮ್ಮ ಆನೆಗಳನ್ನು ಬಿಟ್ಟು ಉಳಿದ ಯಾವುದೇ ಕೆಲಸಗಳಿಗೆ ತೆರಳದಂತೆ ನಿರ್ಧಾರ ಪ್ರಕಟಿಸುವ ಸಂಭವವಿದೆ. ಇದರಿಂದ ಅನಿವಾರ್ಯವಾಗಿ ಇವರ ಪ್ರಮುಖ ಬೇಡಿಕೆಯನ್ನು ಇಲಾಖೆಯು ಈಡೇರಿಸಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ.

- ಹೆಚ್.ಕೆ. ಜಗದೀಶ್.