ಮಡಿಕೇರಿ, ಜು. 7: ಕೊಡವ ಸಮುದಾಯ ಹಾಗೂ ಜನಾಂಗದ ಮಹಿಳೆಯರು ಮತ್ತು ಮಾತೆ ಕಾವೇರಿಯ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೋರ್ವ ಅವಹೇಳನಕಾರಿ ಅಂಶವನ್ನು ‘ಪೋಸ್ಟ್’ ಮಾಡಿದ್ದು, ಇದರ ವಿರುದ್ಧ ಪೊಲೀಸ್ ದೂರು ದಾಖಲಾಗಿದೆ.
ಟರಿvbಞoggಞಟvಥಿ ಎಂಬ ಇನ್ಸ್ಟಾಗ್ರಾಂ ಖಾತೆಯಿಂದ ಮೊಹಮದ್ ಅಸ್ಫಕ್ ಎಂಬ ಹೆಸರಿನಲ್ಲಿ ಈ ಅವಹೇಳನಕಾರಿ ಅಂಶವನ್ನು ಹಾಕಲಾಗಿದೆ. ಈ ಜನಾಂಗೀಯ ನಿಂದನೆ ವಿರುದ್ಧ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಕನೆಕ್ಟಿಂಗ್ ಕೊಡವಾಸ್ ಸಂಘಟನೆ, ಮಡಿಕೇರಿ ಕೊಡವ ಸಮಾಜ, ಪೊಮ್ಮಕ್ಕಡ ಕೂಟ ನಗರ ಠಾಣೆಯಲ್ಲಿ ದೂರು ದಾಖಲಿಸಿದೆ.
ಇದೇ ವಿಚಾರಕ್ಕೆ ಸಂಬಂಧಿಸಿ ದಂತೆ ವೀರಾಜಪೇಟೆ ನಗರ ಠಾಣೆಯಲ್ಲಿ ವೀರಾಜಪೇಟೆ ಕೊಡವ ಸಮಾಜ, ಪೊಮ್ಮಕ್ಕಡ ಕೂಟ, ಜಮ್ಮಕೊಡವ ಸಂಘಟನೆ, ಹಿಂದೂ ಜಾಗರಣಾ ವೇದಿಕೆ, ಕೊಡಗು ಯುವಸೇನೆ ಹಾಗೂ ಇತರ ಕೆಲವು ಸಂಘಟನೆಗಳ ಮೂಲಕವೂ ದೂರು ನೀಡಲಾಗಿದೆ.
ಕೊಡಗಿನ ಕುಲದೇವತೆ ಮಾತೆ ಕಾವೇರಿ ಹಾಗೂ ಕೊಡವ ಸಮುದಾಯ ಮತ್ತು ಕೊಡವ ಯುವತಿಯರ ಬಗ್ಗೆ ಅವಹೇಳನಕಾರಿ ಹೇಳಿಕೆ ಪೋಸ್ಟ್ ಮಾಡಿರುವವನ ವಿರುದ್ಧ ಕಾನೂನು ಕ್ರಮಕೈಗೊಳ್ಳ ಬೇಕೆಂದು ಕೊಡಗು ಯುವಸೇನೆ ಒತ್ತಾಯಿಸಿದೆ.
ಕೊಡಗಿನ ಕುಲದೇವತೆ ಮಾತೆ ಕಾವೇರಿ ಹಾಗೂ ಕೊಡವ ಸಮುದಾಯ ಹಾಗೂ ಕೊಡವ ಯುವತಿಯರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಮೊಹಮದ್ ಅಸ್ಫಕ್ ಎಂಬವನ ಮೇಲೆ ಕೊಡಗು ಯುವ ಸೇನೆಯ ಜಿಲ್ಲಾ ಸಂಚಾಲಕ ಮಾಚೆಟ್ಟಿರ ಸಚಿನ್ ಮಂದಣ್ಣ ಅವರು ವೀರಾಜಪೇಟೆ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ಪ್ರಕರಣವನ್ನು ಹಿಂದೂ ಯುವವಾಹಿನಿಯ ಕರ್ನಾಟಕ ಪ್ರದೇಶ ಮಸ್ತಿಯೂ ಗಂಭೀರವಾಗಿ ಪರಿಗಣಿಸಿದ್ದು ಕೊಡಗಿನ ಜನರ ಧಾರ್ಮಿಕ ಭಾವನೆಗಳಿಗೆ ಹಾಗೂ ಯುವತಿಯರ ಬಗ್ಗೆ ಕೆಟ್ಟದಾಗಿ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡವನ ಮೇಲೆ ಸೂಕ್ತ ಕ್ರಮ ಕೈಗೊಳ್ಳÀ್ಳಬೇಕೆಂದು ಹಿಂದೂ ಯುವವಾಹಿನಿಯ ರಾಜ್ಯ ವರಿಷ್ಠ ಉಪಾಧ್ಯಕ್ಷ ಹಾಗೂ ಕೊಡಗು ಯುವ ಸೇನೆಯ ಸಂಸ್ಥಾಪಕ ಕುಲ್ದೀಪ್ ಪೂಣಚ್ಚ ಆಗ್ರಹಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿ ನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಇತರ ದೂರು ಇಲ್ಲಿಗೆ ವರ್ಗವಾಗಲಿದೆ ಎಂದು ತಿಳಿದು ಬಂದಿದೆ.
ಕನೆಕ್ಟಿಂಗ್ ಕೊಡವಾಸ್ನಿಂದ ಈ ಬಗ್ಗೆ ಮೊದಲು ದೂರು ದಾಖಲಾಗಿದೆ. ಎಲ್ಲಾ ಸಮಾಜ ಹಾಗೂ ಸಂಘಟನೆಗಳ ಪ್ರಮುಖರು ದೂರುದಾರರಾಗಿದ್ದಾರೆ. ಈ ಬಗ್ಗೆ ಪೊಲೀಸ್ ಇಲಾಖೆ ಸೂಕ್ತ ಕ್ರಮಕೈಗೊಂಡು ಜನಾಂಗೀಯ ನಿಂದನೆ ಹಾಗೂ ಅವಹೇಳನಕಾರಿ ಹೇಳಿಕೆ ನೀಡಿರುವವರನ್ನು ತಕ್ಷಣ ಬಂಧಿಸಬೇಕೆಂದು ಒತ್ತಾಯಿಸಲಾಗಿದೆ.
ಬಿಜೆಪಿ ಪಕ್ಷದಿಂದ ಖಂಡನೆ
ಗೋಣಿಕೊಪ್ಪಲು: ಕೊಡವರ ಹಾಗೂ ಕಾವೇರಿ ಮಾತೆಯ ಬಗ್ಗೆ ಅವಹೇಳನಕಾರಿ ಸಂದೇಶ ಹರಿಬಿಟ್ಟ ವ್ಯಕ್ತಿಯ ಮೇಲೆ ಪೆÇಲೀಸರು ಕಠಿಣ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಪಕ್ಷದ ಮಾಧ್ಯಮ ಸಂಚಾಲಕ ಕುಟ್ಟಂಡ ಅಜಿತ್ ಕರುಂಬಯ್ಯ ಹಾಗೂ ಸಹಸಂಚಾಲಕ ಪುಲಿಯಂಡ ಪೆÇನ್ನಣ್ಣ ಆಗ್ರಹಿಸಿದ್ದಾರೆ.
ಅನಾಮಧೇಯ ವ್ಯಕ್ತಿ ಇಲ್ಲಿನ ಕೊಡವರು ಹಾಗೂ ಕಾವೇರಿ ಮಾತೆಯನ್ನು ಕೆಟ್ಟ ಪದಗಳಿಂದ ನಿಂದಿಸಿ, ಅವಹೇಳನಕಾರಿ ಸಂದೇಶ ಗಳನ್ನು ವಾಟ್ಸಾಪ್, ಫೇಸ್ಬುಕ್ ಸೇರಿ ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪೊಲೀಸ್ ಇಲಾಖೆ ಸೂಕ್ತ ಕ್ರಮಕೈಗೊಂಡು ಜನಾಂಗೀಯ ನಿಂದನೆ ಹಾಗೂ ಅವಹೇಳನಕಾರಿ ಹೇಳಿಕೆ ನೀಡಿರುವವರನ್ನು ತಕ್ಷಣ ಬಂಧಿಸಬೇಕೆಂದು ಒತ್ತಾಯಿಸಲಾಗಿದೆ.
ಬಿಜೆಪಿ ಪಕ್ಷದಿಂದ ಖಂಡನೆ
ಗೋಣಿಕೊಪ್ಪಲು: ಕೊಡವರ ಹಾಗೂ ಕಾವೇರಿ ಮಾತೆಯ ಬಗ್ಗೆ ಅವಹೇಳನಕಾರಿ ಸಂದೇಶ ಹರಿಬಿಟ್ಟ ವ್ಯಕ್ತಿಯ ಮೇಲೆ ಪೆÇಲೀಸರು ಕಠಿಣ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಪಕ್ಷದ ಮಾಧ್ಯಮ ಸಂಚಾಲಕ ಕುಟ್ಟಂಡ ಅಜಿತ್ ಕರುಂಬಯ್ಯ ಹಾಗೂ ಸಹಸಂಚಾಲಕ ಪುಲಿಯಂಡ ಪೆÇನ್ನಣ್ಣ ಆಗ್ರಹಿಸಿದ್ದಾರೆ.
ಅನಾಮಧೇಯ ವ್ಯಕ್ತಿ ಇಲ್ಲಿನ ಕೊಡವರು ಹಾಗೂ ಕಾವೇರಿ ಮಾತೆಯನ್ನು ಕೆಟ್ಟ ಪದಗಳಿಂದ ನಿಂದಿಸಿ, ಅವಹೇಳನಕಾರಿ ಸಂದೇಶ ಗಳನ್ನು ವಾಟ್ಸಾಪ್, ಫೇಸ್ಬುಕ್ ಸೇರಿ ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು, ಕೊಡವ ಜನಾಂಗದ ಮಾನಹಾನಿಯಾಗಿದೆ. ಇದರಿಂದಾಗಿ ಇವರ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಅ.ಕೊ.ಸ.: ಇದೇ ವಿಷಯದ ಬಗ್ಗೆ ಅಖಿಲ ಕೊಡವ ಸಮಾಜ ಹಾಗೂ ಯೂತ್ವಿಂಗ್ನ ಪದಾಧಿಕಾರಿಗಳು ಇಂದು ವೀರಾಜಪೇಟೆ ಡಿವೈಎಸ್ಪಿ ಹಾಗೂ ಮಡಿಕೇರಿ ಕ್ರೈಂ ಬ್ರಾಂಚ್ನಲ್ಲಿ ಮತ್ತೊಂದು ದೂರು ಸಲ್ಲಿಸಿ ಕ್ರಮಕ್ಕೆ ಆಗ್ರಹಿಸಿದ್ದಾರೆ.