ವೀರಾಜಪೇಟೆ, ಜು. 7: ನಗರದಲ್ಲಿ ಅಕ್ರಮವಾಗಿ ಲಾಟರಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ನಗರ ಪೊಲೀಸರು ಬಂದಿಸಿ ಪ್ರಕರಣ ದಾಖಲಿಸಿದ್ದಾರೆ.

ವೀರಾಜಪೇಟೆ ನಗರ ಗೌರಿಕೆರೆ ನಿವಾಸಿ ಅಬೂಬಕರ್ ಎಂಬವರ ಪುತ್ರ ರಿಯಾಜ್ (40) ಅಕ್ರಮವಾಗಿ ಲಾಟರಿ ಮಾರಾಟ ಮಾಡುತ್ತಿದ್ದ ವೇಳೆ ಬಂದಿತನಾದ ವ್ಯಕ್ತಿ.

ಕೇರಳ ರಾಜ್ಯದಿಂದ ಲಾಟರಿ ಖರೀದಿಸಿ ನಗರದಲ್ಲಿ ತನ್ನ ಗಿರಾಕಿಗಳಿಗೆ ಮಾರಾಟ ಮಾಡುವ ವೇಳೆಯಲ್ಲಿ ನಗರ ಪೊಲೀಸ್ ಸಿಬ್ಬಂದಿಗಳು ಧಾಳಿ ನಡೆಸಿ ಕೇರಳ ರಾಜ್ಯದ ಲಾಟರಿ ಚೀಟಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ವೀರಾಜಪೇಟೆ ನಗರ ಠಾಣೆಯಲ್ಲಿ ಕರ್ನಾಟಕ ರಾಜ್ಯ ಲಾಟರಿ ನಿಷೇಧ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.