ಮಡಿಕೇರಿ, ಜು. 7: ಚೇರಂಬಾಣೆಯ ಬಾಡಗ ಗ್ರಾಮದ ಕೆ.ಎಸ್. ಮುತ್ತಮ್ಮ ಅವರಿಗೆ ಮೈಸೂರು ವಿಶ್ವ ವಿದ್ಯಾನಿಲಯವು ‘ಇಂಪ್ಯಾಕ್ಟ್ ಆಫ್ ಕಾಫಿ ಸರ್ಟಿಫಿಕೇಷನ್ ಪೆÇ್ರಗ್ರಾಮ್ಸ್ ಆಫ್ ಕಾಫಿ ಇಂಡಸ್ಟ್ರಿ’, ಎನ್ನುವ ಸಂಶೋಧನಾ ಪ್ರಬಂಧ ಮಂಡನೆಗೆ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

ಇವರು ಡಾ. ಶಂಕರಪ್ಪ ಅವರ ಮಾರ್ಗದರ್ಶನಲ್ಲಿ ಸಂಶೋಧನೆ ಮಂಡಿಸಿದ್ದಾರೆ. ಇವರು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದು, ಬಿ. ಬಾಡಗ ಗ್ರಾಮದ ಕೇಕಡ ಸುಬ್ಬಯ್ಯ ಮತ್ತು ಜಾಜಿ ಸೀತವ್ವ ದಂಪತಿಯ ಪುತ್ರಿ ಮತ್ತು ಪಟ್ಟಮಾಡ ಅರುಣ್ ಚರ್ಮಣ್ಣ ಅವರ ಪತ್ನಿಯಾಗಿದ್ದಾರೆ.