ಮಡಿಕೇರಿ, ಜು. 7: ಕರ್ನಾಟಕ ಸರ್ಕಾರ ನೋಟರಿ ಅಧಿನಿಯಮದ ಪ್ರಕಾರ ಮಡಿಕೇರಿಯ ವಕೀಲ ಕೆ.ಎಸ್. ಚಂದ್ರಶೇಖರ ಅವರನ್ನು ಕೊಡಗು ಜಿಲ್ಲೆಯ ಮಡಿಕೇರಿ ಕಂದಾಯ ತಾಲೂಕಿನಲ್ಲಿ ನೋಟರಿಯಾಗಿ ನೇಮಿಸಲಾಗಿದೆ. ಇವರನ್ನು ನೋಟರಿಯಾಗಿದ್ದ ಬಿ.ಆರ್. ಹೊನ್ನಪ್ಪ ಅವರ ನಿಧನದಿಂದ ತೆರವಾದ ನೋಟರಿ ಹುದ್ದೆಗೆ ನೇಮಿಸಲಾಗಿದೆ ಎಂದು ಸರ್ಕಾರ ಅಧಿಸೂಚನೆ ಹೊರಡಿಸಿದೆ.