ಪೆರಾಜೆ, ಜು. ೫: ಪೆರಾಜೆ ಬಳಿಯ ಶ್ರೀ ಶಾಸ್ತಾವು ದೇವಸ್ಥಾನ ಬಳಿ ಪಯಸ್ವಿನಿ ನದಿಗೆ ೩ ಕೋಟಿ ರೂ. ವೆಚ್ಚದಲ್ಲಿ ಕಿಂಡಿ ಅಣೆಕಟ್ಟು ಮತ್ತು ತಡೆಗೋಡೆ ನಿರ್ಮಾಣ, ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ೧೪ ಲಕ್ಷ ರೂ. ಯಾಪಾರೆಯಲ್ಲಿ ೧೪ ಲಕ್ಷ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣ, ಬಂಡಶಾಲೆ ರಸ್ತೆ ಕಾಂಕ್ರಿಟೀಕರಣ, ಕೊಡ್ಯಗುಂಡಿ ಗಿರಿಜನ ಕಾಲೋನಿ ರಸ್ತೆ, ಹಾಲೇಕಾಡು ರಸ್ತೆ ಕಾಂಕ್ರಿಟೀಕರಣ, ಬಂಗಾರಕೋಡಿ ರಸ್ತೆ ಕಾಂಕ್ರಿಟೀಕರಣ(ತಲಾ ೪ ಲಕ್ಷ ರೂ), ಕೋಟೆ, ಪೆರಾಜೆ, ಅಮೆಚೂರು ಕೂಡು ರಸ್ತೆ ೭ ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರಿಟೀಕರಣ, ಕುಂಬಳಚೇರಿ ಐನ್ ಮನೆ ಮತ್ತು ರಸ್ತೆ ೫ ಲಕ್ಷ ರೂ. ವೆಚ್ಚದಲ್ಲಿ ಡಾಮರೀಕರಣ ಹೀಗೆ ಸುಮಾರು ೩.೫೬ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ವಿವಿಧ ಕಾಮಗಾರಿಗಳನ್ನು ಶಾಸಕ ಕೆ.ಜಿ.ಬೋಪಯ್ಯ ಅವರು ಬಂಗಾರಕೋಡಿ ರಸ್ತೆ ಕಾಂಕ್ರಿಟೀಕರಣ(ತಲಾ ೪ ಲಕ್ಷ ರೂ), ಕೋಟೆ, ಪೆರಾಜೆ, ಅಮೆಚೂರು ಕೂಡು ರಸ್ತೆ ೭ ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರಿಟೀಕರಣ, ಕುಂಬಳಚೇರಿ ಐನ್ ಮನೆ ಮತ್ತು ರಸ್ತೆ ೫ ಲಕ್ಷ ರೂ. ವೆಚ್ಚದಲ್ಲಿ ಡಾಮರೀಕರಣ ಹೀಗೆ ಸುಮಾರು ೩.೫೬ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ವಿವಿಧ ಕಾಮಗಾರಿಗಳನ್ನು ಶಾಸಕ ಕೆ.ಜಿ.ಬೋಪಯ್ಯ ಅವರು ಯೋಜನೆಯಡಿ ಗ್ರಾಮ ಪಂಚಾಯಿತಿಗಳಿಗೆ ಹೆಚ್ಚಿನ ಅನುದಾನ ಒದಗಿಸುತ್ತಿದ್ದು, ಜಲಜೀವನ್ ಮಿಷನ್ ಯೋಜನೆಯಡಿ ಪ್ರತಿ ಕುಟುಂಬಕ್ಕೂ ನಲ್ಲಿ ನೀರು ಸಂಪರ್ಕ ಕಲ್ಪಿಸಲಾಗುತ್ತದೆ ಎಂದು ಹೇಳಿದರು.
ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ಒದಗಿಸಬೇಕು ಎಂಬುದು ಸರ್ಕಾರದ ಆಶಯವಾಗಿದೆ. ಆ ನಿಟ್ಟಿನಲ್ಲಿ ಜಲಜೀವನ್ ಕಾರ್ಯಕ್ರಮಕ್ಕೆ ಇನ್ನಷ್ಟು ವೇಗ ನೀಡಬೇಕಿದೆ.
ಈಗಾಗಲೇ ಕೈಗೊಳ್ಳಲಾಗಿರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಗ್ರಾ.ಪಂ.ಗೆ ಬೇಕಿರುವ ಹೊಸ ಆದ್ಯತೆಯ ಕಾರ್ಯಕ್ರಮಗಳನ್ನು ನಿಯಮಾನುಸಾರ ಕೈಗೊಳ್ಳುವಂತಾಗಬೇಕು ಎಂದು ಹೇಳಿದರು.
ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣಾ
(ಮೊದಲ ಪುಟದಿಂದ) ಕಾರ್ಯಪಡೆ ಸಮಿತಿ ಅಧ್ಯಕ್ಷ ಶಾಂತೆಯAಡ ರವಿಕುಶಾಲಪ್ಪ ಮಾತನಾಡಿ, ಸರ್ಕಾರ ಜಲಜೀವನ್ ಮಿಷನ್ ಯೋಜನೆಯಡಿ ಪ್ರತಿಯೊಂದು ಮನೆಗೂ ಕುಡಿಯುವ ನೀರು, ವಸತಿ ಯೋಜನೆಯಡಿ ಮನೆ ಇಲ್ಲದ ಕುಟುಂಬಗಳಿಗೆ ಮನೆ, ಬೆಳಕು ಯೋಜನೆಯಡಿ ವಿದ್ಯುತ್ ಸಂಪರ್ಕ ಹೀಗೆ ಹಲವು ಕಾರ್ಯಕ್ರಮ ಕೈಗೊಂಡಿದೆ. ಇವುಗಳು ಬಡ ಜನರಿಗೆ ಕಾಲ ಮಿತಿಯಲ್ಲಿ ತಲುಪುವಂತಾಗಬೇಕು. ಆ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕನಸು ನನಸಾಗಬೇಕು ಎಂದು ಹೇಳಿದರು.
ಕೊಡಗು ಜಿಲ್ಲೆಯಲ್ಲಿ ಹೆಚ್ಚಿನ ಅರಣ್ಯವಿದೆ. ಅರಣ್ಯ ಸಂರಕ್ಷಣೆ ಮಾಡುವುದರ ಜೊತೆಗೆ ಜನರು ಸಹ ಉತ್ತಮ ಬದುಕು ಕಟ್ಟಿಕೊಳ್ಳುವಂತಾಗಬೇಕು. ಆ ದಿಸೆಯಲ್ಲಿ ಕುಗ್ರಾಮಗಳಿಗೂ ಸೌಲಭ್ಯಗಳು ತಲುಪಬೇಕು; ಸರ್ಕಾರದ ಸೌಲಭ್ಯಗಳು ಪ್ರತಿಯೊಬ್ಬರಿಗೂ ತಲುಪಬೇಕು. ಪರಿಸರದ ಜೊತೆ ಜನರು ಬದುಕು ನಡೆಸುವಂತಾಗಬೇಕು ಎಂದರು.
ಮಡಿಕೇರಿ ತಾಲೂಕು ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ಮಾತನಾಡಿ, ಅಡಿಕೆ ಬೆಳೆಗೆ ಹಳದಿ ರೋಗ ಬರುತ್ತಿರುವ ಹಿನ್ನೆಲೆ ಅಡಿಕೆ ಜೊತೆಗೆ ಬಾಳೆ, ಗೇರು, ಕೊಕೋ ಮತ್ತಿತರ ಕೃಷಿ ಮಾಡುವಂತಾಗಬೇಕು. ಅಕ್ರಮ ಸಕ್ರಮ ಯೋಜನೆಯಡಿ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಅರ್ಹರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕೋರಿದರು.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಕೃಷಿಕರು ಆಧಾರ್ ಲಿಂಕ್ (ಇಕೆವೈಸಿ) ಮಾಡಿಸಿಕೊಳ್ಳುವಂತೆ ನಾಗೇಶ್ ಕುಂದಲ್ಪಾಡಿ ಅವರು ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ವಸತಿ ಯೋಜನೆಯ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ನೀಡಿದರು. ಪೆರಾಜೆ ಗ್ರಾ.ಪಂ. ಅಧ್ಯಕೆÀ್ಷ ಚಂದ್ರಕಲಾ ಬಾಲಚಂದ್ರ, ಉಪಾಧ್ಯಕೆÀ್ಷ ಜಯಲಕ್ಷಿö್ಮಧರಣೀಧರ, ಇತರರು ಇದ್ದರು.