ಮಡಿಕೇರಿ, ಜು. ೫: ಜಿಲ್ಲೆಯ ಗಡಿ ಗ್ರಾಮಗಳಲ್ಲಿ ಸರಣಿ ಭೂಕಂಪನದ ಕಾರಣ ತಿಳಿಯುವ ನಿಟ್ಟಿನಲ್ಲಿ ವಿಜ್ಞಾನಿಗಳ ತಂಡ ತಾ. ೬ ರಂದು (ಇಂದು) ಜಿಲ್ಲೆಗೆ ಆಗಮಿಸಲಿದೆ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ. ಸತೀಶ ಅವರು ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ.

ತಾ. ೫ ರಂದು ಶಕ್ತಿ ದಿನಪತ್ರಿಕೆ ಯಲ್ಲಿ ‘ಸರಣಿ ಭೂಕಂಪನ ಹಿಂದಿನ ಕಾರಣ ತಿಳಿದುಕೊಳ್ಳಲು ವಿಜ್ಞಾನಿಗಳ ನಿರಾಸಕಿ’್ತ ಎಂಬ ಶೀರ್ಷಿಕೆಯಡಿ ಪ್ರಕಟಗೊಂಡ ವರದಿಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ, ಈಗಾಗಲೇ ವಿಪತ್ತು ನಿರ್ವಹಣಾ ಪ್ರಾಧಿಕಾರದ ವಿಜ್ಞಾನಿಗಳೊಂದಿಗೆ ಆನ್‌ಲೈನ್ ಮೂಲಕ ಚರ್ಚಿಸಿ ವಿಷಯ ತಿಳಿಸಲಾಗಿದೆ. ಹೈದರಬಾದ್‌ನ ರಾಷ್ಟಿçÃಯ ಭೂಗರ್ಭ ಸಂಶೋಧನೆ ಸಂಸ್ಥೆ (ಎನ್‌ಜಿಆರ್‌ಐ), ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ, ವಿಪತ್ತು ನಿರ್ವಹಣಾ ಪ್ರಾಧಿಕಾರದ ನುರಿತರು ಬುಧವಾರ ಬರಲಿದ್ದಾರೆ. ಸಂಪಾಜೆ, ಕರಿಕೆ, ಭಾಗಮಂಡಲ, ಚೆಂಬು, ಸೇರಿದಂತೆ ಸುಳ್ಯದ ಭಾಗಗಳಲ್ಲಿಯೂ ಅಧ್ಯಯನ ನಡೆಸಿ, ಜನರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ಜಿಲ್ಲಾಡಳಿತ ಪ್ರಕೃತಿ ವಿಕೋಪ ಎದುರಿಸಲು ಹಲವಷ್ಟು ಕ್ರಮ ಕೈ ಗೊಂಡಿದೆ. ಭಯ ಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.

ನಿರಂತರವಾಗಿ ಭೂಕಂಪನ ವಾಗುತ್ತಿರುವ ಗಡಿ ಗ್ರಾಮಗಳಲ್ಲಿ ಎಚ್ಚರಿಕೆ ವಹಿಸಲಾಗಿದೆ. ಅಧಿಕಾರಿಗಳ ತಂಡದಿAದ ಮೇಲ್ವಿಚಾರಣೆ ನಡೆಯುತ್ತಿದೆ. ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿದೆ ಎಂದು ಇದೇ ಸಂದರ್ಭ ಮಾಹಿತಿ ಒದಗಿಸಿದರು.