ಚಂದ್ರಶೇಖರ್ ಗುರೂಜಿ ಹತ್ಯೆ : ಹಂತಕರ ಬಂಧನ
ಹುಬ್ಬಳ್ಳಿ, ಜು. ೫: ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಅವರನ್ನು ಹತ್ಯೆ ಮಾಡಲಾಗಿದೆ. ಹತ್ಯೆಗೆ ಸಂಬAಧಿಸಿದAತೆ ಇಬ್ಬರು ಹಂತಕರನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆಯಾದ ೫ ಗಂಟೆಗಳಲ್ಲೇ ಹುಬ್ಬಳ್ಳಿಯ ವಿದ್ಯಾನಗರ ಪೊಲೀಸರು ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿ ಆರೋಪಿಗಳಾದ ಮಹಾಂತೇಶ್ ಶಿರೂರ ಮತ್ತು ಮಂಜುನಾಥ ದುಮ್ಮವಾಡನನ್ನು ಬಂಧಿಸಿದ್ದಾರೆ. ಆರೋಪಿಗಳು ಕಾರಿನಲ್ಲಿ ಪರಾರಿಯಾಗುತ್ತಿದ್ದಾರೆ ಎಂಬ ಮಾಹಿತಿ ಪಡೆದ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದರು. ರಸ್ತೆ ಮಧ್ಯೆ ಜೆಸಿಬಿಯಿಂದ ಆರೋಪಿಗಳಿದ್ದ ಕಾರನ್ನು ಅಡ್ಡಗಟ್ಟಿದ ಪೊಲೀಸರು ಆರೋಪಿಗಳು ಪ್ರತಿದಾಳಿ ನಡೆಸಬಹುದು ಎಂಬ ಮುನ್ನೆಚ್ಚರಿಕೆಯಿಂದ ಗನ್ ಪಾಯಿಂಟ್ ನಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಬ್ಬರು ಚಂದ್ರಶೇಖರ ಗುರೂಜಿ ಅವರಿಗೆ ಆಪ್ತರಾಗಿದ್ದು ಸರಳವಾಸ್ತು ಸಂಸ್ಥೆಯಲ್ಲಿ ಗುರೂಜಿ ಜೊತೆ ಕೆಲಸ ಮಾಡಿದ್ದರು ಎಂಬ ವಿಷಯಗಳನ್ನು ಪೊಲೀಸರು ಕಲೆ ಹಾಕಿದ್ದಾರೆ.
ಪಿಎಸ್ಐ ನೇಮಕಾತಿ ಹಗರಣ
೫೦ಕ್ಕೂ ಹೆಚ್ಚು ಪೊಲೀಸ್ ಬಂಧನ
ಬೆAಗಳೂರು, ಜು. ೫: ಪಿಎಸ್ಐ ನೇಮಕಾತಿ ಹಗರಣಕ್ಕೆ ಸಂಬAಧಿಸಿದAತೆ ಎಡಿಜಿಪಿ ಸೇರಿದಂತೆ ೫೦ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಬಂಧನ ಆಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಮಂಗಳವಾರ ಹೇಳಿದ್ದಾರೆ. ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೃಹ ಸಚಿವರು, ಕಾಂಗ್ರೆಸ್ ಮುಖಂಡರ ಪತ್ರಿಕಾಗೋಷ್ಠಿ ನೋಡಿದ್ದೇನೆ. ಕಾಂಗ್ರೆಸ್ ಏನನ್ನು ಬಯಸುತ್ತಾರೆ ಎಂದು ಗೊತ್ತಾಗುತ್ತಿಲ್ಲ. ಸಾಕ್ಷಿ ಸಿಕ್ಕ ಬಳಿಕ ಸಿಐಡಿ ತನಿಖೆಗೆ ಸೂಚಿಸಿ ಸರ್ಕಾರ ಹಸ್ತಕ್ಷೇಪ ಮಾಡದೇ ಪಾರದರ್ಶಕ ತನಿಖೆ ನಡೆಸಿದೆ. ಎಡಿಜಿಪಿ ಅರೆಸ್ಟ್ ಆಗಿದೆ. ಐವತ್ತಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಬಂಧನ ಆಗಿದೆ ಎಂದರು. ಈ ಹಿಂದೆ ಪರೀಕ್ಷೆಯಲ್ಲಿ ಅವ್ಯಾಹತವಾಗಿ ಇಂತಹ ಪ್ರಕರಣ ನಡೆದಿದೆ ಎಂದರು.
ನೂಪುರ್ ಶರ್ಮಾಗೆ ಛೀಮಾರಿ: ನಿವೃತ್ತ ನ್ಯಾಯಾಧೀಶರ ವಿರೋಧ
ದೆಹಲಿ, ಜು. ೫: ನೂಪುರ್ ಶರ್ಮಾ ವಿಚಾರವಾಗಿ ಇತ್ತೀಚೆಗೆ ಸುಪ್ರೀಂ ಕೋರ್ಟ್ ನಡೆದುಕೊಂಡ ರೀತಿ ಲಕ್ಷö್ಮಣ ರೇಖೆ ದಾಟಿದಂತೆ ಎಂದು ನಿವೃತ್ತ ಸುಪ್ರೀಂಕೋರ್ಟ್ ಜಡ್ಜ್ಗಳು ಅಭಿಪ್ರಾಯಪಟ್ಟಿದ್ದಾರೆ. ಪ್ರವಾದಿ ಮಹಮದ್ ಕುರಿತು ಹೇಳಿಕೆ ನೀಡಿದ ನೂಪುರ್ ಶರ್ಮಾ ದೇಶದ ಕ್ಷಮೆ ಯಾಚಿಸಬೇಕು ಎಂದು ಸುಪ್ರೀಂಕೋರ್ಟ್ ಇತ್ತೀಚಿಗೆ ಆದೇಶ ನೀಡಿತ್ತು. ಸುಪ್ರೀಂ ಕೋರ್ಟ್ ನೀಡಿದ್ದ ಈ ಆದೇಶದ ವಿರುದ್ಧ೧೫ ನಿವೃತ್ತ ನ್ಯಾಯಾಧೀಶರು, ೭೭ ಮಾಜಿ ಅಧಿಕಾರಿಗಳು ಮತ್ತು ಸಶಸ್ತç ಪಡೆಗಳ ೨೫ ನಿವೃತ್ತ ಅಧಿಕಾರಿಗಳು ಟೀಕಿಸಿ ಸಿಜೆಐ ಎನ್.ವಿ. ರಮಣ (ಅಎI ಓಗಿ ಖಚಿmಚಿಟಿಚಿ) ಅವರಿಗೆ ಪತ್ರ ಬರೆದಿದ್ದಾರೆ. ನೂಪೂರ್ ಶರ್ಮಾ (ಓuಠಿuಡಿ Shಚಿಡಿmಚಿ ಅoಟಿಣಡಿoveಡಿsಥಿ) ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದ ಸುಪ್ರೀಂ ಕೋರ್ಟ್ ಜಡ್ಜ್ಗಳ ಅಭಿಪ್ರಾಯದ (Suಠಿಡಿeme ಅouಡಿಣ ಅommeಟಿಣs ಔಟಿ ಓuಠಿuಡಿ Shಚಿಡಿmಚಿ) ವಿರುದ್ಧ೧೫ ನಿವೃತ್ತ ನ್ಯಾಯಾಧೀಶರು, ೭೭ ಮಾಜಿ ಅಧಿಕಾರಿಗಳು ಮತ್ತು ಸಶಸ್ತ್ರ ಪಡೆಗಳ ೨೫ ನಿವೃತ್ತ ಅಧಿಕಾರಿಗಳು ಪತ್ರ ಬರೆದಿದ್ದಾರೆ ಎಂದು ತಿಳಿದುಬಂದಿದೆ.ಸಹಿ ಮಾಡಿದವರಲ್ಲಿ ಬಾಂಬೆ ಹೈಕೋರ್ಟ್ನ ಮಾಜಿ ಮುಖ್ಯ ನ್ಯಾಯಮೂರ್ತಿ ಕ್ಷಿತಿಜ್ ವ್ಯಾಸ್, ಗುಜರಾತ್ ಹೈಕೋರ್ಟ್ ಮಾಜಿ ನ್ಯಾಯಾಧೀಶ ಎಸ್. ಎಂ. ಸೋನಿ, ರಾಜಸ್ಥಾನ ಹೈಕೋರ್ಟ್ ಮಾಜಿ ನ್ಯಾಯಾಧೀಶರಾದ ಆರ್. ಎಸ್. ರಾಥೋಡ್ ಮತ್ತು ಪ್ರಶಾಂತ್ ಅಗರ್ವಾಲ್ ಮತ್ತು ದೆಹಲಿ ಹೈಕೋರ್ಟ್ ಮಾಜಿ ನ್ಯಾಯಾಧೀಶ ಎಸ್.ಎನ್. ಧಿಂಗ್ರಾ ಸೇರಿದ್ದಾರೆ. ಇದಲ್ಲದೆ ಮಾಜಿ ಐಎಎಸ್ ಅಧಿಕಾರಿಗಳಾದ ಆರ್.ಎಸ್. ಗೋಪಾಲನ್ ಮತ್ತು ಎಸ್. ಕೃಷ್ಣ ಕುಮಾರ್, ನಿವೃತ್ತ ರಾಯಭಾರಿ ನಿರಂಜನ್ ದೇಸಾಯಿ, ಮಾಜಿ ಡಿಜಿಪಿಗಳಾದ ಎಸ್.ಪಿ. ವೈದ್ ಮತ್ತು ಬಿ.ಎಲ್. ವೋಹ್ರಾ, ಲೆಫ್ಟಿನೆಂಟ್ ಜನರಲ್ ವಿ.ಕೆ. ಚತುರ್ವೇದಿ (ನಿವೃತ್ತ) ಮತ್ತು ಏರ್ ಮಾರ್ಷಲ್ ಎಸ್ ಪಿ ಸಿಂಗ್ (ನಿವೃತ್ತ) ಸಹ ಸುಪ್ರೀಂಕೋರ್ಟ್ ಅವಲೋಕನದ ಹೇಳಿಕೆಗೆ ಸಹಿ ಹಾಕಿದ್ದಾರೆ. ನ್ಯಾಯಾಂಗ ಆದೇಶದ ಭಾಗವಾಗಿರದ ಈ ಅವಲೋಕನಗಳನ್ನು ಯಾವುದೇ ವಿಸ್ತರಣೆಯಿಲ್ಲದೆ ನ್ಯಾಯಾಂಗ ಔಚಿತ್ಯ ಮತ್ತು ನ್ಯಾಯೋಚಿತತೆಯ ಹಲಗೆಯ ಮೇಲೆ ಪವಿತ್ರಗೊಳಿಸಲಾಗುವುದಿಲ್ಲ. ಇಂತಹ ಅತಿರೇಕದ ಉಲ್ಲಂಘನೆಗಳು ನ್ಯಾಯಾಂಗದ ಇತಿಹಾಸದಲ್ಲಿ ಸಮಾನಾಂತರವಾಗಿಲ್ಲ,' ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಪಾಕಿಸ್ತಾನದ ಜೈಲಿನಲ್ಲಿ ೬೮೨
ಭಾರತೀಯ ಕೈದಿಗಳ ಬಂಧನ
ನವದೆಹಲಿ, ಜು. ೫: ೬೮೨ ಭಾರತೀಯ ಕೈದಿಗಳು ತನ್ನ ರಾಷ್ಟ್ರದ ಜೈಲಿನಲ್ಲಿ ಬಂಧನದಲ್ಲಿರುವುದಾಗಿ ಪಾಕಿಸ್ತಾನ ಖಚಿತಪಡಿಸಿದೆ. ೨೦೦೮ರ ಒಪ್ಪಂದದ ವಿನಾಯಿತಿಯಂತೆ ಭಾರತ ಮತ್ತು ಪಾಕಿಸ್ತಾನ ತಮ್ಮ ರಾಷ್ಟ್ರದಲ್ಲಿ ಬಂಧನದಲ್ಲಿರುವ ನಾಗರಿಕ ಖೈದಿಗಳು ಹಾಗೂ ಮೀನುಗಾರರ ಪಟ್ಟಿಯನ್ನು ವಿನಿಮಯ ಮಾಡಿಕೊಂಡಿವೆ. ಜನವರಿ ೧ ಮತ್ತು ಜುಲೈ ೧ ರಂದು ವರ್ಷಕ್ಕೆ ಎರಡು ಬಾರಿ ಈ ಪಟ್ಟಿಯನ್ನು ವಿನಿಮಯ ಮಾಡಿಕೊಳ್ಳಲಾಗುತ್ತದೆ. ೪೯ ನಾಗರಿಕರು ಮತ್ತು ೬೩೩ ಮೀನುಗಾರರು ಸೇರಿದಂತೆ ೬೮೨ ಭಾರತೀಯ ಕೈದಿಗಳನ್ನು ಬಂಧನದಲ್ಲಿಡಲಾಗಿದೆ ಎಂದು ಭಾರತೀಯ ಹೈಕಮಿಷನರ್ ಅವರೊಂದಿಗೆ ಪಾಕಿಸ್ತಾನ ಮಾಹಿತಿ ಹಂಚಿಕೊAಡಿರುವುದಾಗಿ ಪಾಕ್ ವಿದೇಶಾಂಗ ಅಧಿಕಾರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದೇ ರೀತಿಯಲ್ಲಿ ಭಾರತ ಕೂಡಾ ಮಾಹಿತಿ ನೀಡಿದ್ದು, ಪಾಕಿಸ್ತಾನದ ೩೪೬ ನಾಗರಿಕರು, ೧೧೬ ಮೀನುಗಾರರು ಸೇರಿದಂತೆ ದೇಶದಲ್ಲಿರುವ ೪೬೧ ಪಾಕಿಸ್ತಾನದ ಕೈದಿಗಳ ಪಟ್ಟಿಯನ್ನು ಭಾರತ ಹಂಚಿಕೊAಡಿದೆ.
ಕೊರೊನಾ ಏರಿಳಿತ: ಇಂದು ಬೆಂಗಳೂರಿನಲ್ಲಿ ೭೭೫ ಸೇರಿ ರಾಜ್ಯದಲ್ಲಿ ೮೩೯ ಮಂದಿಗೆ ಪಾಸಿಟಿವ್ : ಇಬ್ಬರು ಸಾವು!
ಬೆಂಗಳೂರು, ಜು. ೫: ರಾಜ್ಯದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆಯಲ್ಲಿ ಏರಿಳಿತ ಮುಂದುವರೆದಿದ್ದು, ಕಳೆದ ೨೪ ಗಂಟೆಯಲ್ಲಿ ೮೩೯ ಮಂದಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ ೩೯,೭೩,೮೭೩ಕ್ಕೆ ಏರಿಕೆಯಾಗಿದೆ. ಇನ್ನೂ ರಾಜ್ಯದಲ್ಲಿ ಮಹಾಮಾರಿ ಕೊರೊನಾದಿಂದ ಇಂದು ಇಬ್ಬರು ಮೃತಪಟ್ಟಿದ್ದು, ಇದರೊಂದಿಗೆ ಸಾವಿನ ಸಂಖ್ಯೆ ೪೦,೦೮೦ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಬೆಂಗಳೂರಿನಲ್ಲಿ ಇಂದು ೭೭೫ ಮಂದಿಗೆ ಸೋಂಕು ದೃಢಪಟ್ಟಿದೆ. ಇದರೊಂದಿಗೆ ನಗರದಲ್ಲಿ ಸೋಂಕಿತರ ಸಂಖ್ಯೆ ೧೮,೦೮,೧೮೭ಕ್ಕೆ ಏರಿಕೆಯಾಗಿದೆ. ಇಂದು ರಾಜಧಾನಿಯಲ್ಲಿ ಯಾವುದೇ ಕೊರೊನಾ ಸಾವು ವರದಿಯಾಗಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೇಳಿದೆ. ರಾಜ್ಯದಲ್ಲಿ ಇಂದು ೯೧೩ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಸೋಂಕಿನಿAದ ಚೇತರಿಸಿಕೊಂಡವರ ಸಂಖ್ಯೆ ೩೯,೨೭,೩೫೩ಕ್ಕೆ ಏರಿಕೆಯಾಗಿದೆ. ಇನ್ನು ೬,೩೯೮ ಸಕ್ರಿಯ ಪ್ರಕರಣಗಳಿವೆ.