ಕುಶಾಲನಗರ, ಜು. ೪ : ಕುಶಾಲನಗರ ಇನ್ನರ್ ವ್ಹೀಲ್ ಕ್ಲಬ್ ನ ೨೦೨೨-೨೩ ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಕುಶಾಲನಗರ ರೋಟರಿ ಸಭಾಂಗಣದಲ್ಲಿ ನಡೆಯಿತು.
ನೂತನ ಸಾಲಿನ ಅಧ್ಯಕ್ಷರಾಗಿ ಅಶ್ವಿನಿ ಪುರುಷೋತ್ತಮ ರೈ, ಉಪಾಧ್ಯಕ್ಷರಾಗಿ ನೇಹಾ ಜಗದೀಶ್, ಕಾರ್ಯದರ್ಶಿಯಾಗಿ ಅಶ್ವಿನಿ ಆರ್. ಕುಮಾರ್, ಖಜಾಂಚಿಯಾಗಿ ದೀಪ ಪೂಜಾರಿ, ಎಡಿಟರ್ ಆಗಿ ಚಿತ್ರ ರಮೇಶ್, ಐಎಸ್ಓ ಆಗಿ ದಿವ್ಯ ಸುಜಯ್ ಅಧಿಕಾರ ವಹಿಸಿಕೊಂಡರು.
ಕಳೆದ ಸಾಲಿನ ಅಧ್ಯಕ್ಷರಾದ ರೂಪಾ ಉಮಾಶಂಕರ್, ಕಾರ್ಯದರ್ಶಿ ಭಾರತಿ ದೇವಯ್ಯ, ಖಜಾಂಚಿ ತೇಜಸ್ವಿನಿ ಗೌತಮ್ ವೇದಿಕೆಯಲ್ಲಿದ್ದರು. ಚಾರ್ಟರ್ಡ್ ಪ್ರೆಸಿಡೆಂಟ್ ಆರತಿ ಎಚ್.ಶೆಟ್ಟಿ ನೂತನ ಸಾಲಿನ ಪದಾಧಿಕಾರಿಗಳಿಗೆ ಪದಗ್ರಹಣ ನೆರವೇರಿಸಿ ಅಧಿಕಾರ ಹಸ್ತಾಂತರಿಸಿದರು.
ಡಿಸ್ಟಿçಕ್ಟ್ ವೈಸ್ ಛೇರ್ಮನ್ ಪೂರ್ಣಿಮ ರವಿ, ಕ್ಲಬ್ನ ಮಾಜಿ ಅಧ್ಯಕ್ಷರುಗಳಾದ ಸುಪ್ರಿತಾ ರವಿ, ರೇಖಾ ಗಂಗಾಧರ್, ಸುನಿತಾ ಮಹೇಶ್, ಕವಿತಾ ಸಾತಪ್ಪನ್, ಜಾಸ್ಮಿನ್, ಪ್ರಮುಖರಾದ ಶೋಭಾ ಸತೀಶ್ ಮತ್ತಿತರರು ಇದ್ದರು.
ಕಾರ್ಯಕ್ರಮದಲ್ಲಿ ಸುನಿತಾ ಮಹೇಶ್ ರಚಿಸಿದ ಆರ್ಯ ಲೋಪಮುದ್ರ ಬುಲೆಟಿನ್ ಅನ್ನು ಡಿಸ್ಟಿçಕ್ಟ್ ವೈಸ್ ಛೇರ್ಮನ್ ಡಾ.ಪೂರ್ಣಿಮ ರವಿ ಬಿಡುಗಡೆಗೊಳಿಸಿದರು. ವನ ಮಹೋತ್ಸವ ಅಂಗವಾಗಿ ಸಸಿಗಳನ್ನು ವಿತರಿಸಲಾಯಿತು. ವೈದ್ಯರ ದಿನ ಅಂಗವಾಗಿ ಕುಶಾಲನಗರದ ಹಿರಿಯ ವೈದ್ಯರಾದ ಡಾ.ಹರಿ ಶೆಟ್ಟಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.