ಗೋಣಿಕೊಪ್ಪ ವರದಿ, ಜು. 2 : ಬೀಟೆ ಮರ ಕಡಿದ ಆರೋಪ ಎದುರಿಸುತ್ತಿದ್ದ ಆರೋಪಿಯನ್ನು ಪೊನ್ನಂಪೇಟೆ ಸಿವಿಲ್ ಮತ್ತು ಜೆಎಂಎಫ್‍ಸಿ ನ್ಯಾಯಾಲಯ ನಿರಪರಾದಿ ಎಂದು ತೀರ್ಪು ನೀಡಿದೆ.

ಹುದೂರು ಗ್ರಾಮದ ನಿವಾಸಿ ಕೆ.ಕೆ. ಕಾಸಿಂ ಎಂಬವರ ವಿರುದ್ಧ 2015ರಲ್ಲಿ ಪೊನ್ನಂಪೇಟೆ ವಲಯ ಅರಣ್ಯಾಧಿಕಾರಿ ಕರ್ನಾಟಕ ಅರಣ್ಯ ನಿಯಮ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಪೊನ್ನಂಪೇಟೆ ಸಿವಿಲ್ ಮತ್ತು ಜೆಎಂಎಫ್‍ಸಿ ನ್ಯಾಯಾಧೀಶೆ ಕೆ. ಎಸ್. ಆಶಾ ಅವರು ಆರೋಪಿಯನ್ನು ನಿರಪರಾದಿ ಎಂದು ತೀರ್ಪು ನೀಡಿ ಆದೇಶಿಸಿದೆ. ಕಾಸಿಂ ಪರ ವಕೀಲ ಮಚ್ಚಮಾಡ ಟಿ. ಕಾರ್ಯಪ್ಪ, ಬಿ.ಎಸ್. ಕುಮಾರಿ ವಾದಿಸಿದ್ದರು.