ಮಡಿಕೇರಿ, ಜು. 2: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಮಡಿಕೇರಿ ಕಚೇರಿಯಲ್ಲಿ ಡಿ ದರ್ಜೆ ನೌಕರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ದೇವರಾಜಯ್ಯ ಅವರು ತಾ. 2ರಂದು ನಿಧನರಾದರು. ನಿನ್ನೆ ಮಧ್ಯಾಹ್ನದ ವೇಳೆ ಬಿದ್ದು, ತಲೆಗೆ ಪೆಟ್ಟಾಗಿತ್ತು. ಕುಟುಂಬದವರು ಆಸ್ಪತ್ರೆಗೆ ದಾಖಲಿಸಿದ್ದರು, ಇಂದು ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ತೀರಿಕೊಂಡಿದ್ದಾರೆ.