ಮಡಿಕೇರಿ,ಜು.೧: ಕಳೆದ ಒಂದು ವಾರದ ಅವಧಿಯಲ್ಲಿ ಮೂರು ಬಾರಿ ಕಂಪಿಸಿ ಅಲ್ಲಲ್ಲಿ ನಡುಕ ಹುಟ್ಟಿಸಿದ್ದ ಭೂಮಿ ಇಂದು ಮತ್ತೆ ಎರಡು ಬಾರಿ ಕಂಪಿಸಿ ಇನ್ನಷ್ಟು ಆತಂಕ ಸೃಷ್ಟಿಸಿದೆ. ತಾ.೨೩ ಹಾಗೂ ೨೫, ೨೮ರಂದು ಕೊಡಗು-ಹಾಸನ, ಕೊಡಗು ದ.ಕನ್ನಡ ಹಾಗೂ ಕೊಡಗು-ಕೇರಳ ಗಡಿ ಭಾಗಗಳಲ್ಲಿ ಭೂಕಂಪನದ ಅನುಭವವಾಗಿತ್ತು. ಇದೀಗ ಇಂದು ಮತ್ತೆ ಎರಡು ಬಾರಿ ಭೂಮಿ ಕಂಪಿಸಿದೆ. ನಡುರಾತ್ರಿ ಹಾಗೂ ಬೆಳಿಗ್ಗೆ ಕಂಪಿಸಿದ್ದು, ಒಂದೇ ದಿನದಲ್ಲಿ ಎರಡು ಬಾರಿ ಕಂಪನವಾಗಿದ್ದು, ಜೊತೆ ಜೊತೆಯಲ್ಲಿ ಒಟ್ಟು ಐದು ಬಾರಿ ಭೂಕಂಪ ಉಂಟಾಗಿರುವದು ಜನತೆಯಲ್ಲಿ ನಡುಕ ಹುಟ್ಟಿಸಿದೆ.

ಕೊಡಗು - ದ. ಕನ್ನಡ ಗಡಿಭಾಗವಾದ ಪೆರಾಜೆ ಗ್ರಾ.ಪಂ. ವ್ಯಾಪ್ತಿಯ ಪೆರಾಜೆ, ಚೆಂಬು ಗ್ರಾಮ, ಕೇರಳ ಗಡಿಭಾಗದ ಕರಿಕೆ ಗ್ರಾಮ ಹಾಗೂ ಮಕ್ಕಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಕ್ಕೋಡ್ಲು ಗ್ರಾಮಗಳಲ್ಲಿ ಏಕ ಕಾಲದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ನಡುರಾತ್ರಿ ಕಳೆದು ೧.೧೫ ಗಂಟೆ ಹಾಗೂ ಬೆಳಿಗ್ಗೆ ೧೦.೪೭ಕ್ಕೆ ಭೂಮಿ ಕಂಪಿಸಿದೆ. ಚೆಂಬು-ಪೆರಾಜೆ ಗ್ರಾಮ ಕಂಪನದ ಕೇಂದ್ರ ಬಿಂದುವಾಗಿದೆ.

೧.೮ ತೀವ್ರತೆ

ನಡುರಾತ್ರಿ ಕಳೆದು ೧ ಗಂಟೆ ೧೫ ನಿಮಿಷ ೧೨ ಸೆಕೆಂಡು ವೇಳೆಯಲ್ಲಿ ಎರಡು ಸೆಕೆಂಡುಗಳ ಕಾಲ ಭೂಕಂಪನವಾಗಿದ್ದು, ರಿಕ್ಟರ್ ಮಾಪಕದಲ್ಲಿ ೧.೮ರಷ್ಟು ತೀವ್ರತೆ ದಾಖಲಾಗಿದೆ. ಪೆರಾಜೆ, ಚೆಂಬು ಗ್ರಾಮದಿಂದ ೫.೨ಕಿ.ಮೀ. ಪಶ್ಚಿಮ ವಾಯುವ್ಯ ದಿಕ್ಕಿನಲ್ಲಿ ಕಂಪಿಸಿದ್ದು, ಪರಿಣಾಮವಾಗಿ ಕರಿಕೆ ಗ್ರಾಮದ ಉತ್ತರ ವಾಯುವ್ಯ ದಿಕ್ಕಿನಲ್ಲಿ ೯.೪ಕಿ.ಮೀ. ವ್ಯಾಪ್ತಿಯಲ್ಲಿ, ಸಂಪಾಜೆ ಹೋಬಳಿಯ ಪಶ್ಚಿಮ ದಿಕ್ಕಿನಲ್ಲಿ ೧೧.೫ಕಿ.ಮೀ ವ್ಯಾಪ್ತಿಯಲ್ಲಿ. ಸುಳ್ಯ ತಾಲೂಕಿನ ಆಗ್ನೇಯ ದಿಕ್ಕಿನ ೧೧ಕಿ.ಮೀ ವ್ಯಾಪ್ತಿಯಲ್ಲಿ ಒಟ್ಟು ೨೦ರಿಂದ ೩೦ ಕಿ.ಮೀ.ದೂರದಲ್ಲಿ ಹತ್ತು ಅಡಿ ಆಳದಲ್ಲಿ ಭೂಮಿ ಕಂಪಿಸಿದೆ.

೨.೧ ತೀವ್ರತೆ

ನಂತರ ಮತ್ತೆ ಬೆಳಿಗ್ಗೆ ೧೦ ಗಂಟೆ ೪೭ನಿಮಿಷ ೨೬ಸೆಕೆಂಡ್‌ಗೆ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ ೨.೧ರಷ್ಟು ತೀವ್ರತೆ ದಾಖಲಾಗಿದೆ. ಗಡಿ ಗ್ರಾಮ ಚೆಂಬು ಹಾಗೂ ಪೆರಾಜೆ ಯಿಂದ ೫.೧ಕಿ.ಮೀ ಪಶ್ಚಿಮ ವಾಯುವ್ಯ ದಿಕ್ಕಿನಲ್ಲಿ ಭೂಮಿಯ ೧೦ ಕಿ.ಮೀ. ಆಳದಲ್ಲಿ ಕಂಪನವಾಗಿದೆ. ಇದರ ಪರಿಣಾಮ ಕರಿಕೆ ಭಾಗದ ಉತ್ತರ ವಾಯುವ್ಯ ದಿಕ್ಕಿನಲ್ಲಿ ೯.೧ಕಿ.ಮೀ. ವ್ಯಾಪ್ತಿಯಲ್ಲಿ, ಸಂಪಾಜೆ ಹೋಬಳಿಯ ಪಶ್ಚಿಮದಲ್ಲಿ ೧೧.೬ಕಿ.ಮೀ ವ್ಯಾಪ್ತಿಯಲ್ಲಿ, ಸುಳ್ಯ ತಾಲೂಕಿನ ಆಗ್ನೇಯದಲ್ಲಿ ೧೧.೩ಕಿ.ಮೀ. ವ್ಯಾಪ್ತಿಯಲ್ಲಿ ಒಟ್ಟು ೨೦-೩೦ಕಿ.ಮೀ ದೂರದಲ್ಲಿ ಕಂಪನದ ಅನುಭವವಾಗಿದೆ ಎಂದು ಕರ್ನಾಟಕ ವ್ಯಾಪ್ತಿಯಲ್ಲಿ ಒಟ್ಟು ೨೦ರಿಂದ ೩೦ ಕಿ.ಮೀ.ದೂರದಲ್ಲಿ ಹತ್ತು ಅಡಿ ಆಳದಲ್ಲಿ ಭೂಮಿ ಕಂಪಿಸಿದೆ.

೨.೧ ತೀವ್ರತೆ

ನಂತರ ಮತ್ತೆ ಬೆಳಿಗ್ಗೆ ೧೦ ಗಂಟೆ ೪೭ನಿಮಿಷ ೨೬ಸೆಕೆಂಡ್‌ಗೆ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ ೨.೧ರಷ್ಟು ತೀವ್ರತೆ ದಾಖಲಾಗಿದೆ. ಗಡಿ ಗ್ರಾಮ ಚೆಂಬು ಹಾಗೂ ಪೆರಾಜೆ ಯಿಂದ ೫.೧ಕಿ.ಮೀ ಪಶ್ಚಿಮ ವಾಯುವ್ಯ ದಿಕ್ಕಿನಲ್ಲಿ ಭೂಮಿಯ ೧೦ ಕಿ.ಮೀ. ಆಳದಲ್ಲಿ ಕಂಪನವಾಗಿದೆ. ಇದರ ಪರಿಣಾಮ ಕರಿಕೆ ಭಾಗದ ಉತ್ತರ ವಾಯುವ್ಯ ದಿಕ್ಕಿನಲ್ಲಿ ೯.೧ಕಿ.ಮೀ. ವ್ಯಾಪ್ತಿಯಲ್ಲಿ, ಸಂಪಾಜೆ ಹೋಬಳಿಯ ಪಶ್ಚಿಮದಲ್ಲಿ ೧೧.೬ಕಿ.ಮೀ ವ್ಯಾಪ್ತಿಯಲ್ಲಿ, ಸುಳ್ಯ ತಾಲೂಕಿನ ಆಗ್ನೇಯದಲ್ಲಿ ೧೧.೩ಕಿ.ಮೀ. ವ್ಯಾಪ್ತಿಯಲ್ಲಿ ಒಟ್ಟು ೨೦-೩೦ಕಿ.ಮೀ ದೂರದಲ್ಲಿ ಕಂಪನದ ಅನುಭವವಾಗಿದೆ ಎಂದು ಕರ್ನಾಟಕ (ಮೊದಲ ಪುಟದಿಂದ) ಆತಂಕ ಶುರುವಾಗಿದೆ’ ಎಂದು ಕರಿಕೆ ಹದಿಮೂರನೇ ಮೈಲು ನಿವಾಸಿ ರಾಜೇಶ್ ರಾಘವ ಹೇಳುತ್ತಾರೆ.

ಮನೆಯಲ್ಲಿ ಬಿರುಕು..!

ಸಂಪಾಜೆ ಹೋಬಳಿಯ ಪೆರಾಜೆ ಗ್ರಾಮದಲ್ಲೂ ಕಂಪನವಾಗಿದೆ. ಕಂಪನದ ತೀವ್ರತೆಗೆ ಪೆರಾಜೆ ಕುಂಬಳಚೇರಿ ವಿ.ವೆಂಕಪ್ಪ ಅವರ ವಾಸದ ಮನೆಯ ಸುತ್ತಲೂ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಅಮೆಚೂರು ಶಾಲಾ ಕೊಠಡಿಯ ಗೋಡೆ, ಮೂಲೆಮಜಲು ಕಮಲಾಕ್ಷ ಸೇರಿದಂತೆ ಬಂಗಾರಕೋಡಿ ವ್ಯಾಪ್ತಿಯಲ್ಲಿಯೂ ಮನೆಗಳಲ್ಲಿ ಬಿರುಕು ಬಿಟ್ಟಿವೆ.

ಮುಕ್ಕೋಡ್ಲುವಿನಲ್ಲಿ..!

ಇತ್ತ ಮಡಿಕೇರಿ ತಾಲೂಕಿನ ಮಕ್ಕಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಕ್ಕೋಡ್ಲು ಗ್ರಾಮದಲ್ಲೂ ಭೂಮಿ ಸದ್ದು ಮಾಡಿದೆ. ನಡುರಾತ್ರಿ ೧.೧೫ರ ವೇಳಗೆ ಭೂಮಿಯೊಳಗಿನಿಂದ ಸದ್ದು ಕೇಳಿಸಿರುವದಾಗಿ ಮುಕ್ಕೋಡ್ಲು ನಿವಾಸಿ ತಡಿಯಪ್ಪನ ಕುಶಾಲಪ್ಪ ಮಾಹಿತಿ ನೀಡಿದ್ದಾರೆ. ಮುಕ್ಕೋಡ್ಲು ವ್ಯಾಪ್ತಿಯಲ್ಲಿ ೨೦೧೮ರಲ್ಲೂ ಭೂ ಕಂಪನದೊAದಿಗೆ ಭೂಕುಸಿತ ಉಂಟಾಗಿ ಹಾನಿಯಾಗಿತ್ತು. ಕುಶಾಲಪ್ಪ ಅವರ ಮನೆಯೂ ಸೇರಿದಂತೆ ಹಲವರ ಮನೆಗಳು ಕೊಚ್ಚಿ ಹೋಗಿದ್ದವು. ಮೊನ್ನೆ ಕೂಡ ಭೂಕಂಪನದ ಅನುಭವವಾಗಿದ್ದು, ಇದೀಗ ಇಂದು ಮತ್ತೆ ಅದೇ ಅನುಭವ ಆಗಿರುವದು ಜನರಲ್ಲಿ ಆತಂಕ ಮೂಡಿಸಿದೆ. ಸುಳ್ಯ ತಾಲೂಕಿನ ಗೂನಡ್ಕ, ಅರಂತೋಡು ಭಾಗಗಳಲ್ಲಿಯೂ ಕಂಪನದ ಅನುಭವವಾಗಿದೆ.

ಪದೇ ಪದೇ ಭೂಮಿ ನಡುಗುತ್ತಿರುವದರಿಂದ ಜಿಲ್ಲೆಯ ಜನತೆ, ಅದರಲ್ಲೂ ಗಡಿಭಾಗದ, ಬೆಟ್ಟ ಗುಡ್ಡ ಪ್ರದೇಶಗಳಲ್ಲಿ ನೆಲೆಸಿರುವ ಜನರು ಭಯ ಭೀತರಾಗಿದ್ದಾರೆ. ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳುವ ಬಗ್ಗೆ ಚಿಂತನೆ ನಡೆಸುತ್ತಿದ್ದಾರಾದರೂ ಹೋಗುವದಾದರೂ ಎಲ್ಲಿಗೆ ಎಂದು ಚಿಂತಾಕ್ರಾAತರಾಗಿದ್ದಾರೆ.

-ಸುಧೀರ್ ಹೊದ್ದೆಟ್ಟಿ, ಕಿರಣ್ ಕುಂಬಳಚೇರಿ