ಸೋಮವಾರಪೇಟೆ, ಜು. ೧: ಸಮೀಪದ ತೋಳೂರುಶೆಟ್ಟಳ್ಳಿ ಗ್ರಾಮದ ಶ್ರೀ ಸಬ್ಬಮ್ಮ ದೇವಾಲಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ವೀರೇಂದ್ರ ಹೆಗ್ಗಡೆಯವರು ರೂ. ೧.೫೦ ಲಕ್ಷ ನೆರವು ಒದಗಿಸಿದ್ದು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪದಾಧಿಕಾರಿಗಳು ದೇಣಿಗೆ ಚೆಕ್ನ್ನು ದೇವಾಲಯ ಸಮಿತಿಗೆ ಹಸ್ತಾಂತರಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ ಅವರ ಸಹಕಾರದೊಂದಿಗೆ ಶ್ರೀಕ್ಷೇತ್ರದಿಂದ ಬಿಡುಗಡೆಯಾದ ನೆರವಿನ ಚೆಕ್ನ್ನು ಯೋಜನಾಧಿಕಾರಿ ರೋಹಿತ್, ಶಾಂತಳ್ಳಿ ವಲಯ ಮೇಲ್ವಿಚಾರಕಿ ಕಲಾವತಿ ಅವರುಗಳು ದೇವಾಲಯ ಸಮಿತಿ ಅಧ್ಯಕ್ಷ ರಾಜ್ಗೋಪಾಲ್ ಅವರಿಗೆ ಹಸ್ತಾಂತರಿಸಿದರು.
ಈ ಸಂದರ್ಭ ದೇವಾಲಯ ಸಮಿತಿ ಕಾರ್ಯದರ್ಶಿ ಡಿ.ಎಲ್. ಜಗದೀಶ್, ಸದಸ್ಯರಾದ ಎಸ್.ಜಿ. ರವೀಂದ್ರ, ಎಂ.ಬಿ. ರಾಜಪ್ಪ, ಹೆಚ್.ಟಿ. ಸೋಮಯ್ಯ, ಬಿ.ಡಿ. ಪರಮೇಶ್, ಡಿ.ಎಂ. ದಿಲೀಪ್, ಲಕ್ಷö್ಮಣ್, ಚಂದ್ರಶೇಖರ್, ಸುಧಾಕರ್, ಮದನ್ ಅವರುಗಳು ಉಪಸ್ಥಿತರಿದ್ದರು.