ಚೆಯ್ಯಂಡಾಣೆ, ಜೂ. ೨೭: ಸ್ಥಳೀಯ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು ಪುಂಡಾನೆಯು ಬೊವ್ವೇರಿಯಂಡ ಮಿಟ್ಟು ಮಂದಣ್ಣ ಅವರ ಮನೆಯ ಗೇಟನ್ನು ತುಳಿದು ಹಾನಿಪಡಿಸಿದ್ದು ಗೇಟು ಜಖಂಗೊAಡಿದೆ.

ಅಲ್ಲದೆ ಬೊವ್ವೇರಿಯಂಡ ದಿಲೀಪ್ ಅವರ ಕೆರೆ ಹಾಗೂ ತೋಟಕ್ಕೆ ಲಗ್ಗೆ ಇಟ್ಟು ಕಾಫಿ, ಅಡಿಕೆ, ಬಾಳೆ ಗಿಡಗಳನ್ನು ಹಾನಿಪಡಿಸಿದ್ದು, ತೋಟದಲ್ಲಿನ ಗೇಟನ್ನು ಮಗುಚಿ ಹಾಕಿ ಅಪಾರ ನಷ್ಟ ಉಂಟು ಮಾಡಿದೆ. ಕೂಡಲೇ ಸಂಬAಧಪಟ್ಟ ಅರಣ್ಯಾಧಿಕಾರಿಗಳು ಪರಿಹಾರ ನೀಡಿ ಕಾಡಾನೆಗಳು ತೋಟಗಳಿಗೆ ನುಸುಳದ ರೀತಿಯಲ್ಲಿ ಶಾಶ್ವತ ಪರಿಹಾರಕ್ಕೆ ಆಗ್ರಹಿಸಿದ್ದಾರೆ. -ಅಶ್ರಫ್