*ಗೋಣಿಕೊಪ್ಪ, ಜೂ. ೨೭: ೭೫ ಸಾವಿರ ರೈತರಿಗೆ ಸುಮಾರು ೫೦ ಕೋಟಿಗೂ ಹೆಚ್ಚು ಪರಿಹಾರ ಧನ ನೇರವಾಗಿ ಖಾತೆಗೆ ಜಮಾ ಆಗಿದೆ ಎಂದು ರಾಜ್ಯ ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ, ಶಾಸಕ ಕೆ.ಜಿ. ಬೋಪ್ಪಯ್ಯ ಹೇಳಿದರು.
ತಾಲೂಕು ಬಿಜೆಪಿ ಕೃಷಿ ಮೋರ್ಚಾ ವತಿಯಿಂದ ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಕೃಷಿ ಫಲಾನುಭವಿಗಳ ಸಮಾವೇಶಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನೂತನವಾಗಿ ಐವತ್ತಕ್ಕೂ ಹೆಚ್ಚು ವಿವಿಧ ಬಗೆಗಳ ಕೃಷಿ ಚಟುವಟಿಕೆ ಕಾರ್ಯಕ್ರಮಗಳನ್ನು ಕೇಂದ್ರ ಮತ್ತು ರಾಜ್ಯ ಸರಕಾರ ಅನುಷ್ಠಾನಗೊಳಿಸಿದೆ. ಇದರ ಸದುಪಯೋಗವನ್ನು ಪ್ರತಿಯೊಬ್ಬ ರೈತರು ಪಡೆದುಕೊಂಡಿದ್ದು, ರೈತರ ಚೇತರಿಕೆಗೆ ಸಹಕಾರಿಯಾಗಿದೆ ಎಂದು ತಿಳಿಸಿದರು. ಕಿಸಾನ್ ಸಮ್ಮಾನ್ ಯೋಜನೆ ಫಲಾನುಭವಿಗಳಾಗಲು *ಗೋಣಿಕೊಪ್ಪ, ಜೂ. ೨೭: ೭೫ ಸಾವಿರ ರೈತರಿಗೆ ಸುಮಾರು ೫೦ ಕೋಟಿಗೂ ಹೆಚ್ಚು ಪರಿಹಾರ ಧನ ನೇರವಾಗಿ ಖಾತೆಗೆ ಜಮಾ ಆಗಿದೆ ಎಂದು ರಾಜ್ಯ ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ, ಶಾಸಕ ಕೆ.ಜಿ. ಬೋಪ್ಪಯ್ಯ ಹೇಳಿದರು.
ತಾಲೂಕು ಬಿಜೆಪಿ ಕೃಷಿ ಮೋರ್ಚಾ ವತಿಯಿಂದ ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಕೃಷಿ ಫಲಾನುಭವಿಗಳ ಸಮಾವೇಶಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನೂತನವಾಗಿ ಐವತ್ತಕ್ಕೂ ಹೆಚ್ಚು ವಿವಿಧ ಬಗೆಗಳ ಕೃಷಿ ಚಟುವಟಿಕೆ ಕಾರ್ಯಕ್ರಮಗಳನ್ನು ಕೇಂದ್ರ ಮತ್ತು ರಾಜ್ಯ ಸರಕಾರ ಅನುಷ್ಠಾನಗೊಳಿಸಿದೆ. ಇದರ ಸದುಪಯೋಗವನ್ನು ಪ್ರತಿಯೊಬ್ಬ ರೈತರು ಪಡೆದುಕೊಂಡಿದ್ದು, ರೈತರ ಚೇತರಿಕೆಗೆ ಸಹಕಾರಿಯಾಗಿದೆ ಎಂದು ತಿಳಿಸಿದರು. ಕಿಸಾನ್ ಸಮ್ಮಾನ್ ಯೋಜನೆ ಫಲಾನುಭವಿಗಳಾಗಲು ೧೦ ಹೆಚ್ಪಿ ಮೋಟರ್ ಬಳಕೆಯಲ್ಲಿ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಒಂದಷ್ಟು ಬದಲಾವಣೆಯನ್ನು ತರಲಾಗಿದೆ. ಇತರ ಜಿಲ್ಲೆಗಳಲ್ಲಿ ನೀಡುವ ಅನುಕೂಲವನ್ನು ಕೊಡಗಿನ ರೈತರಿಗೂ ನೀಡಬೇಕು ಎಂಬ ಬೇಡಿಕೆಯನ್ನು ಸಲ್ಲಿಸಲಾಗಿದೆ. ಸದ್ಯದ ಮಟ್ಟಿಗೆ ೧೦ ಹೆಚ್.ಪಿ ಮೋಟರ್ ಬಳಸಿದ ಬಿಲ್ಲನ್ನು ಪಾವತಿಸಿ ನಂತರದಲ್ಲಿ ಇಲಾಖೆ ಬಿಲ್ಲಿನ ಮೊತ್ತವನ್ನು ತಮ್ಮ ಖಾತೆಗೆ ಹಿಂದಿರುಗಿಸಲಿದೆಯೆAದು ಮಾಹಿತಿ ನೀಡಿದರು.
ರೈತ ಮಕ್ಕಳಿಗೆ ಶೈಕ್ಷಣಿಕ ನೆರವಿಗೆ ವಿದ್ಯಾನಿಧಿ, ಕಿಸಾನ್ ಸಮ್ಮಾನ್ ನಿಧಿಗೆ ರಾಜ್ಯ ಸರ್ಕಾರದಿಂದ ೪ ಸಾವಿರ ನೆರವು, ರಸಗೊಬ್ಬರಗಳಿಗೆ ಸಬ್ಸಿಡಿ, ಸಂಚಾರಿ ಪಶು ವೈದ್ಯ ಚಿಕಿತ್ಸಾಲಯ ಮೂಲಕ ಹೈನುಗಾರಿಕೆಗೆ ನೆರವು, ಡ್ರೋನ್ ತಂತ್ರಜ್ಞಾನದ ಮೂಲಕ ಬೆಳೆಗಳ ಮೌಲ್ಯಮಾಪನ ಸೇರಿ ಇಂತಹ ಹಲವಾರು ಕಾರ್ಯ ಯೋಜನೆಗಳು ರೈತ ಪರವಾಗಿ ಜಾರಿಗೆ ತಂದಿದೆ. ರೈತರ ಸಂಕಷ್ಟಕ್ಕೆ ಸ್ಪಂದಿಸಿ ಕೃಷಿ ಕಲ್ಯಾಣಕ್ಕಾಗಿ ನೆರವಿಗೆ ಆದ್ಯತೆ ಮೋದಿ ಸರ್ಕಾರ ನೀಡಿದೆ. ಬೊಮ್ಮಾಯಿ ಸರಕಾರ ರೈತರ ಸಂಕಷ್ಟಗಳ ಪರಿಹಾರದ ಬದ್ಧತೆಯನ್ನು ಹೊಂದಿ ರೈತಪರ ಆಡಳಿತವನ್ನು ನಡೆಸುತ್ತಿದೆ ಎಂದರು.
ತಾಲೂಕು ಬಿಜೆಪಿ ಕೃಷಿ ಮೋರ್ಚಾ ಅಧ್ಯಕ್ಷ ಕಟ್ಟೆರ ಈಶ್ವರ ಮಾತನಾಡಿ, ಕಾಫಿ ಬೋರ್ಡ್, ಕೃಷಿ ಇಲಾಖೆ ನೀಡುವ ಸಬ್ಸಿಡಿಗಳನ್ನು ಬಳಸಿಕೊಂಡು ಕೃಷಿಯಲ್ಲಿ ಉತ್ತಮ ಮಾರ್ಗದಲ್ಲಿ ಸಾಗಬೇಕಾಗಿದೆ ಎಂದು ಹೇಳಿದರು. ಹುಲಿ ದಾಳಿಯಿಂದ ಜಾನುವಾರುಗಳು ಮೃತಪಟ್ಟು ರೈತರು ಸಂಕಷ್ಟ ಎದುರಿಸುವ ಪರಿಸ್ಥಿತಿಯಲ್ಲಿ ಸರ್ಕಾರ ನೀಡುತ್ತಿದ್ದ ೧೦ ಸಾವಿರ ಪರಿಹಾರ ಧನವನ್ನು ಮೂವತ್ತು ಸಾವಿರ ರೂಪಾಯಿಗಳಿಗೆ ಏರಿಸುವಲ್ಲಿ ಶಾಸಕ ಕೆ.ಜಿ. ಬೋಪಯ್ಯ ಅವರ ಪಾತ್ರ ಬಹು ಮುಖ್ಯವಾಗಿದೆ ಎಂದು ಶ್ಲಾಘಿಸಿದರು.
ಕಟ್ಟೆರ ಈಶ್ವರ ಅಧ್ಯಕ್ಷತೆಯಲ್ಲಿ ರಾಜ್ಯ ಕೃಷಿ ಮೋರ್ಚಾ ಸದಸ್ಯೆ ಮಾಪಂಗಡ ಯಮುನಾ ಚಂಗಪ್ಪ, ಅಕ್ರಮ ಸಕ್ರಮ ತಾಲೂಕು ಅಧ್ಯಕ್ಷ ಕಾಡ್ಯಮಾಡ ಗೀರಿಶ್ ಗಣಪತಿ, ತಾಲೂಕು ಅಧ್ಯಕ್ಷ ನೆಲ್ಲೀರ ಚಲನ್ ಕುಮಾರ್, ಕೃಷಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮತ್ರಂಡ ಕಬೀರ್ ದಾಸ್, ಕೃಷಿ ಮೋರ್ಚಾ ತಾಲೂಕು ಪ್ರಧಾನ ಕಾರ್ಯದರ್ಶಿ ಟಿ. ವಿನು, ರಾಜ್ಯ ಶಿಸ್ತು ಸಮಿತಿ ಸದಸ್ಯೆ ಪಟ್ಟಡ ರೀನಾ ಪ್ರಕಾಶ್, ಹಾಗೂ ಪದಾಧಿಕಾರಿಗಳು ಫಲಾನುಭವಿಗಳು ಇದ್ದರು.