ಮಡಿಕೇರಿ, ಜೂ. ೨೬: ರಾಜಧಾನಿ ಬೆಂಗಳೂರಿನಲ್ಲಿರುವ ಪ್ರತಿಷ್ಠಿತ ಬೆಂಗಳೂರು ಕೊಡವ ಸಮಾಜದ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಕರವಟ್ಟಿರ ಪೆಮ್ಮಯ್ಯ ಅವರು ಆಯ್ಕೆಯಾಗಿದ್ದಾರೆ.

ಎರಡು ಪ್ರಬಲ ಗುಂಪುಗಳ ನಡುವಿನ ನೇರ ಸ್ಪರ್ಧೆಯಿಂದಾಗಿ ಈ ಚುನಾವಣೆ ಭಾರೀ ಕುತೂಹಲ ಸೃಷ್ಟಿಸಿತ್ತು. ಇಂದು ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಪೆಮ್ಮಯ್ಯ, ಉಪಾಧ್ಯಕ್ಷರಾಗಿ ಪಾಂಡAಡ ಕಮಲ ಮುತ್ತಪ್ಪ, ಕಾರ್ಯದರ್ಶಿಯಾಗಿ ಲೆ.ಕ. ಚಿರಿಯಪಂಡ ವಿವೇಕ್ ಮುತ್ತಣ್ಣ, ಜಂಟಿ ಕಾರ್ಯದರ್ಶಿಯಾಗಿ ಬೊಪ್ಪಂಡ ಟಿ. ಮಹೇಶ್, ಖಜಾಂಚಿಯಾಗಿ ಬಲ್ಯಮೀದೇರಿರ ಬಿ. ಗಣೇಶ್, ಜಂಟಿ ಖಜಾಂಚಿಯಾಗಿ ಪೊನ್ನಚೆಟ್ಟೀರ ಗಣಪತಿ (ರಮೇಶ್) ಅವರುಗಳು ಚುನಾಯಿತರಾಗಿದ್ದಾರೆ.

ಸಮಾಜದಲ್ಲಿ ಅಧಿಕ ಸಂಖ್ಯೆಯಲ್ಲಿ ಸದಸ್ಯರಿರುವುದರಿಂದ ಚುನಾವಣೆಗಾಗಿ ಮತಯಂತ್ರವನ್ನು ವ್ಯವಸ್ಥೆ ಮಾಡಲಾಗಿತ್ತು. ಆಯ್ಕೆಯಾದ ಎಲ್ಲಾ ಅಭ್ಯರ್ಥಿಗಳು ಒಂದೇ ಗುಂಪಿನಿAದ ಚುನಾಯಿತರಾಗಿರುವುದು ವಿಶೇಷವಾಗಿದೆ.