ಸೋಮವಾರಪೇಟೆ, ಜೂ.೨೬ : ನೂತನವಾಗಿ ನಿರ್ಮಿಸಲಾಗಿರುವ ಆಲೇಕಟ್ಟೆ-ಶಾಂತಳ್ಳಿ ರಾಜ್ಯ ಹೆದ್ದಾರಿಯ ಕಾಂಕ್ರೀಟ್ ರಸ್ತೆಯಲ್ಲಿ ಸಂಚರಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಇಳಿದ ಪರಿಣಾಮ ಕೆಲಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು.

ಇAದು ಬೆಳಿಗ್ಗೆ ಪಟ್ಟಣದಿಂದ ಶಾಂತಳ್ಳಿ ಮಾರ್ಗವಾಗಿ ತೆರಳುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಇಳಿದ ಪರಿಣಾಮ ಕಾರಿನ ಚಕ್ರವು ಕೆಸರಿನಲ್ಲಿ ಸಿಲುಕಿಕೊಂಡು ಮುಂದೆ ಚಲಿಸಲು ಸಾಧ್ಯವಾಗಲಿಲ್ಲ.

ಇದರಿಂದಾಗಿ ಆಲೇಕಟ್ಟೆ-ಶಾಂತಳ್ಳಿ ರಾಜ್ಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ವಾಹನಗಳು ಕೆಲಕಾಲ ರಸ್ತೆಯಲ್ಲಿ ನಿಲ್ಲುವಂತಾಯಿತು. ಕಾಫಿ ತೋಟಕ್ಕೆ, ಪಟ್ಟಣಕ್ಕೆ ಕೆಲಸಕ್ಕಾಗಿ ತೆರಳುತ್ತಿದ್ದವರು ಸಮಸ್ಯೆ ಎದುರಿಸಿದರು. ನಂತರ ಸ್ಥಳೀಯರು ಮತ್ತೊಂದು ವಾಹನದ ಮೂಲಕ ಕಾರನ್ನು ಹೊರಗೆ ಎಳೆದು ಇತರ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು.