ಸೋಮವಾರಪೇಟೆ, ಜೂ. ೨೪: ವಂಚನೆ ಪ್ರಕರಣಕ್ಕೆ ಸಂಬAಧಿಸಿದAತೆ ೨೬ ವರ್ಷಗಳ ಬಳಿಕ ಆರೋಪಿಯನ್ನು ಬಂಧಿಸಿರುವ ಪೊಲೀಸರು, ನ್ಯಾಯಾಲಯದ ನಿರ್ದೇಶನದಂತೆ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಹಾಸನ ಜಿಲ್ಲೆ, ಹೊಳೆನರಸೀಪುರ, ಕಟ್ಟೆಹೊಸಳ್ಳಿ ನಿವಾಸಿ ೬೧ ವರ್ಷ ಪ್ರಾಯದ ಪುಟ್ಟೇಗೌಡ ಎಂಬವರನ್ನು ೨೬ ವರ್ಷದ ಬಳಿಕ ಪತ್ತೆಹಚ್ಚಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕಳೆದ ೧೯೯೬ರಲ್ಲಿ ೩೫ ವರ್ಷ ಪ್ರಾಯವಾಗಿದ್ದ ಪುಟ್ಟೇಗೌಡ, ಪಟ್ಟಣದ ಖಾಸಗಿ ಲಾಡ್ಜ್ನಲ್ಲಿ ಉಳಿದುಕೊಂಡು, ಚೆನ್ನಮ್ಮ ಹೆಚ್.ಡಿ. ದೇವೇಗೌಡ ಮತ್ತು ಶಾಂತಮ್ಮ ಅವರುಗಳ ಹೆಸರಿನಲ್ಲಿ ಸೋಮವಾರಪೇಟೆಯಲ್ಲಿ ಟಿಸಿಹೆಚ್ ಕಾಲೇಜು ಪ್ರಾರಂಭಿಸುವುದಾಗಿ ಪತ್ರಿಕೆಗಳಲ್ಲಿ ಪ್ರಕಟಣೆ ನೀಡಿದ್ದರು.

ಸರ್ಕಾರ ಹಾಗೂ ಇಲಾಖೆ ಯಿಂದ ಯಾವುದೇ ರೀತಿಯ ಪೂರ್ವಾನುಮತಿ ಪಡೆಯದೇ ಟಿಸಿಹೆಚ್ ಕಾಲೇಜು ಪ್ರಾರಂಭಿಸು ವುದಾಗಿ ಸುಳ್ಳು ಹೇಳಿಕೊಂಡು ಸಾರ್ವಜನಿಕರಿಂದ ವಂತಿಗೆ ಸಂಗ್ರಹಿಸಿದ್ದ. ಈ ಬಗ್ಗೆ ಅಂದಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿದ್ದ ಎಂ.ಮಲ್ಲಪ್ಪ

(ಮೊದಲ ಪುಟದಿಂದ) ಅವರು ಸೋಮವಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಭಾರತೀಯ ದಂಡ ಸಂಹಿತೆ ೪೨೦ ಕಲಂ ಅಡಿಯಲ್ಲಿ ಮೊಕದ್ದಮೆ ದಾಖಲಿಸಿಕೊಂಡ ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದರೂ ಯಶಸ್ಸು ಕಂಡಿರಲಿಲ್ಲ. ಇದೀಗ ಅಪರಾಧ ವಿಭಾಗದ ಮುಖ್ಯ ಪೇದೆ ಕುಮಾರ್ ಅವರು ೨೬ ವರ್ಷಗಳ ಬಳಿಕ ಆರೋಪಿಯನ್ನು ಪತ್ತೆಹಚ್ಚಿದ್ದಾರೆ. ಪೊಲೀಸ್ ವೃತ್ತ ನಿರೀಕ್ಷಕ ಬಿ.ಜಿ. ಮಹೇಶ್, ಠಾಣಾಧಿಕಾರಿ ವಿರೂಪಾಕ್ಷ ಅವರ ಮಾರ್ಗದರ್ಶನಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಅಪರಾದ ವಿಭಾಗದ ಮುಖ್ಯಪೇದೆ ರಮೇಶ್, ಸಿಬ್ಬಂದಿಗಳಾದ ಕೇಶವಮೂರ್ತಿ, ಪರಮೇಶ್ ಅವರುಗಳು ಹಾಸನದ ಮಲ್ಲಸಂದ್ರದ ಬಳಿಯಿಂದ ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.