ಮಡಿಕೇರಿ, ಜೂ. ೨೪: ಸುಲಿಗೆ ಪ್ರಕರಣವೊಂದರ ಆರೋಪಕ್ಕೆ ಸಂಬAಧಿಸಿದAತೆ ವೀರಾಜಪೇಟೆ ತಾಲೂಕಿನ ಇಬ್ಬರಿಗೆ ಮೈಸೂರಿನ ೮ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ೭ ವರ್ಷ ಜೈಲುಶಿಕ್ಷೆ ಹಾಗೂ ತಲಾ ರೂ. ೧೧ ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ. ವೀರಾಜಪೇಟೆ ತಾಲೂಕಿನವರಾದ ಮಡಿಕೇರಿ, ಜೂ. ೨೪: ಸುಲಿಗೆ ಪ್ರಕರಣವೊಂದರ ಆರೋಪಕ್ಕೆ ಸಂಬAಧಿಸಿದAತೆ ವೀರಾಜಪೇಟೆ ತಾಲೂಕಿನ ಇಬ್ಬರಿಗೆ ಮೈಸೂರಿನ ೮ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ೭ ವರ್ಷ ಜೈಲುಶಿಕ್ಷೆ ಹಾಗೂ ತಲಾ ರೂ. ೧೧ ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ. ವೀರಾಜಪೇಟೆ ತಾಲೂಕಿನವರಾದ ಅಡ್ಡಗಟ್ಟಿದ್ದರು. ನಂತರ ಕಾರಿನಲ್ಲಿದ್ದ ಸಿಜೇಸ್, ಶೈಲೇಂದ್ರ, ರಿನೀವ್ ಪ್ರಶಾಂತ್ ಎಂಬವರನ್ನು ಕಾರಿನ ಸಮೇತ ಅಪಹರಿಸಿ, ಮರುದಿನ ಸಂಜೆಯವರೆಗೂ ಅದೇ ಕಾರಿನಲ್ಲಿ ಸುತ್ತಾಡಿಸಿದ್ದರು. ಬಿಡುಗಡೆ ಮಾಡಲು ೧೦ ಲಕ್ಷ ರೂ. ಕೊಡುವಂತೆ ಒತ್ತಾಯಿಸಿ, ಅವರ ಬಳಿಯಿದ್ದ

(ಮೊದಲ ಪುಟದಿಂದ) ೩ ಮೊಬೈಲ್ ಮತ್ತು ಸುಮಾರು ೮೫ ಸಾವಿರ ರೂ. ನಗದನ್ನು ಸುಲಿಗೆ ಮಾಡಿ, ಹಲ್ಲೆ ನಡೆಸಿದ್ದರು. ಅಪಹರಣಕ್ಕೆ ಒಳಗಾಗಿದ್ದ ಮೂವರೂ ಬಳಿಕ ತಪ್ಪಿಸಿಕೊಂಡು ಬಂದು ಪಿರಿಯಾಪಟ್ಟಣ ಠಾಣೆಗೆ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು, ನಾಲ್ವರ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಈ ಸಂಬAಧ ವಿಚಾರಣೆ ನಡೆಸಿದ ೮ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಪಾಟೀಲ್ ಮೋಹನ್ ಕುಮಾರ್ ಭೀಮನ್‌ಗೌಡ ಅವರು, ಆರೋಪಿಗಳ ಪೈಕಿ ಷರೀಫ್ ಮತ್ತು ಸಿರಾಜ್ ಎಂಬವರಿಗೆ ೭ ವರ್ಷ ಜೈಲು ಶಿಕ್ಷೆ ಮತ್ತು ತಲಾ ೧೧ ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಇನ್ನಿಬ್ಬರು ಆರೋಪಿಗಳು ವಿಚಾರಣೆ ಹಂತದಲ್ಲಿ ತಲೆಮರೆಸಿಕೊಂಡಿದ್ದಾರೆ. ಸರ್ಕಾರಿ ಅಭಿಯೋಜಕರಾದ ಕೆ.ಎಂ.ಸಿ. ಶಿವಶಂಕರ್ ಮೂರ್ತಿ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.