ಮಡಿಕೇರಿ, ಜೂ. ೨೪: ಜಿಲ್ಲೆಯಲ್ಲಿ ಕಂದಾಯ ಇಲಾಖೆಯಲ್ಲಿ ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಕೊಡಗು ಪ್ಲಾö್ಯಂರ‍್ಸ್ ಅಸೋಸಿಯೇಷನ್ ಮತ್ತು ಕೊಡಗು ಸೇವಾ ಕೇಂದ್ರದ ಪದಾಧಿಕಾರಿಗಳ ನಿಯೋಗ ರಾಜ್ಯ ಭೂಮಾಪನೆ ಮತ್ತು ಭೂದಾಖಲೆಗಳ ಇಲಾಖೆ ಆಯುಕ್ತ ಮುನೀಶ್ ಮುದ್ಗಿಲ್ ಹಾಗೂ ಜಂಟಿ ಕಾರ್ಯದರ್ಶಿ ಶ್ರೀಧರ್ ಸಿ.ಎನ್. ಅವರನ್ನು ಭೇಟಿ ಮಾಡಿ ಪರಿಹಾರೋಪಾಯದ ಬಗ್ಗೆ ಚರ್ಚಿಸಿದರು.

ಜಿಲ್ಲೆಯಲ್ಲಿ ಆರ್.ಟಿ.ಸಿ. ವ್ಯವಸ್ಥೆ ಜಾರಿ ಸಮಯದಲ್ಲಿ ಜಮಾಬಂದಿಯಲ್ಲಿನ ೩ನೇ ಕಲಂನಲ್ಲಿದ್ದ ಪಟ್ಟೇದಾರ ಹೆಸರನ್ನು ಆರ್.ಟಿ.ಸಿ.ಯ ೯ನೇ ಕಲಂಗೆ ವರ್ಗಾಯಿಸಿರುವುದರಿಂದ ಎದುರಾಗಿರುವ ಸಮಸ್ಯೆಯ ಕುರಿತು ನಿಯೋಗದ ಅಧಿಕಾರಿಗಳಿಗೆ ವಿವರಿಸಿದರು. ಈ ಬಗ್ಗೆ ಮಾತನಾಡಿದ ಕಮೀಷನರ್ ಮುನೀಶ್ ಮುದ್ಗಿಲ್, ಈ ವಿಚಾರದಲ್ಲಿ ವರದಿ ಸಲ್ಲಿಕೆಯಾಗಿದ್ದು, ಕ್ರಮದ ಭರವಸೆ ನೀಡಿದರು.

ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಅಟಲ್ ಜೀ ಜನಸ್ನೇಹಿ ಕೇಂದ್ರಗಳಲ್ಲಿ ತತ್ಕಾಲ್ ಪೋಡಿ (೧೧ಇ) ಅರ್ಜಿ ಸ್ವೀಕರಿಸುವುದನ್ನು ಸ್ಥಗಿತಗೊಳಿಸಿ ನಾಡಕಚೇರಿಗಳಲ್ಲಿ ಮತ್ತು ಭೂದಾಖಲೆಗಳ ಕಚೇರಿಯಲ್ಲಿ ಮಾತ್ರ ಸ್ವೀಕರಿಸುವುದರಿಂದ ಸಮಸ್ಯೆ ಸೃಷ್ಟಿಯಾಗಿದೆ ಎಂದು ನಿಯೋಗ ಗಮನ ಸೆಳೆಯಿತು. ಈ ಕ್ರಮದ ಬಗ್ಗೆ ಬೇಸರ ವ್ಯಕ್ತಪಡಿಸಿದ ಅಧಿಕಾರಿ, ಮಡಿಕೇರಿಯ ಭೂ ದಾಖಲೆಗಳ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ (ಮೊದಲ ಪುಟದಿಂದ) ತೆಗೆದುಕೊಂಡು. ಮಡಿಕೇರಿಯ ಅಟಲ್ ಜೀ ಜನಸ್ನೇಹಿ ಕೇಂದ್ರದಲ್ಲಿ ೧೧ಇಗೆ ಸಂಬAಧಿಸಿದ ಅರ್ಜಿ ಸ್ವೀಕರಿಸುವಂತೆ ಆದೇಶಿಸಿದರು.

ಕೃಷಿಗೆ ಒಳಪಟ್ಟ ಬಾಣೆ ಜಮೀನಿನ ಕಂದಾಯ ನಿಗದಿಯ ವಿಚಾರದಲ್ಲಿ ವಿಳಂಬಧೋರಣೆ ಯನ್ನು ಸರಿಪಡಿಸುವುದಾಗಿ ಮುನೀಶ್ ಮುದ್ಗಿಲ್ ಭರವಸೆ ನೀಡಿದರು.

ಇದರೊಂದಿಗೆ ಭೂಮಾಪಕರ ಹುದ್ದೆ ಖಾಲಿ ಇರುವುದು, ಆರ್‌ಟಿಸಿಗಳಲ್ಲಿ ಬಹುವಾರ್ಷಿಕ ಬೆಳೆಗಳ ನಮೂದಿಗೆ ಸಮಯ ವ್ಯರ್ಥವಾಗುತ್ತಿದೆ ಸೇರಿದಂತೆ ಇನ್ನಿತರ ಸಮಸ್ಯೆಗಳ ಬಗ್ಗೆ ನಿಯೋಗ ಗಮನ ಸೆಳೆಯಿತು.

ಜಮೀನು ನೋಂದಾವಣೆ ಪ್ರಕ್ರಿಯೆಯ ನಂತರ ಆರ್‌ಟಿಸಿ ಲಭಿಸಿರುವ ಐಎಂಪಿ ಕಡತಗಳ ದುರಸ್ತಿ ಬಾಕಿಯಿರುವ ಬಗ್ಗೆ ನಿಯೋಗ ಗಮನ ಸೆಳೆಯಿತು. ಈ ಬಗ್ಗೆ ಭೂಮಿ ಕೇಂದ್ರದ ಅಧಿಕಾರಿ ಗಳಿಗೆ ತಕ್ಷಣ ಕ್ರಮಕೈಗೊಳ್ಳುವಂತೆ ಅಧಿಕಾರಿ ನಿರ್ದೇಶನ ನೀಡಿದರು. ಆರ್‌ಟಿಸಿಗಳಲ್ಲಿ ಬಹುವಾರ್ಷಿಕ ಬೆಳೆಗಳ ನಮೂದಿಗೆ ಕಂದಾಯ ಇಲಾಖೆಯ ಸಮಯ ವ್ಯರ್ಥ ವಾಗುತ್ತಿರುವ ಅಂಶವನ್ನು ನಿಯೋಗ ಸರಕಾರದ ಗಮನಕ್ಕೆ ತಂದಿತು. ಈ ಬಗ್ಗೆ ಸರಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದ್ದು, ಸದ್ಯದಲ್ಲಿಯೇ ಸೂಕ್ತ ನಿರ್ಧಾರ ತೆಗೆದುಕೊಳ್ಳುವ ನಿರೀಕ್ಷೆಯಿದೆ ಎಂದು ಮುನೀಸ್ ಮುದ್ಗಿಲ್ ಹೇಳಿದರು.

ರಾಜ್ಯ ಸರಕಾರ ಇತ್ತೀಚೆಗೆ ಬಿಡುಗಡೆ ಮಾಡಿರುವ ಸ್ವಾವಲಂಬಿ ಆ್ಯಪ್ ಮೂಲಕ ಭೂ ಹಿಡುವಳಿ ದಾರರು ೧೧ಇಗೆ ಸಂಬAಧಿಸಿದ ತತ್ಕಾಲ್ ಪೋಡಿ, ವಿಭಾಗ ಮತ್ತು ದಾನಕ್ಕೆ ಬೇಕಾದ ದಾಖಲೆಗೆ ಆನ್ ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹು ದಾಗಿದ್ದು, ಇದರ ಸದುಪಯೋಗ ಮಾಡಿಕೊಳ್ಳುವಂತೆ ಜಂಟಿ ಕಾರ್ಯ ದರ್ಶಿಗಳು ಮಾಹಿತಿ ನೀಡಿದರು. ಈ ಆ್ಯಪನ್ನು ಮೊಬೈಲ್ ಮತ್ತು ಸೈಬರ್ ಸೆಂಟರ್‌ಗಳಲ್ಲಿ ಬಳಸುವುದರಿಂದ ನಾಗರಿಕರು ಸರಕಾರಿ ಕಚೇರಿಗಳಿಗೆ ಭೇಟಿ ನೀಡುವುದನ್ನು ತಪ್ಪಿಸಬಹುದು ಎಂಬ ಮಾಹಿತಿಯನ್ನು ನೀಡಿದರು.

ಈ ಸಂದರ್ಭ ಪ್ಲಾö್ಯಂರ‍್ಸ್ ಅಸೋಸಿಯೇಷನ್ ಬಿ.ವಿ. ಮೋಹನ್ ದಾಸ್, ಕೊಡಗು ಸೇವಾ ಕೇಂದ್ರದ ಸಂಚಾಲಕ ಎಂ.ಕೆ. ಅಪ್ಪಚ್ಚು ಸೇರಿದಂತೆ ಉಭಯ ಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದರು.