ಮಡಿಕೇರಿ, ಜೂ. ೨೫: ಕೊಡಗು ಜಿಲ್ಲಾ ವಿಶ್ವಕರ್ಮ ಸಮಾಜ ಸೇವಾ ಸಂಘ ಹಾಗೂ ವಿಶ್ವಕರ್ಮ ಮಹಿಳಾ ಸಮಿತಿ ಸಂಯುಕ್ತ ಆಶ್ರಯದಲ್ಲಿ ತಾ. ೨೬ ರಂದು (ಇಂದು) ವಾರ್ಷಿಕ ಮಹಾಸಭೆ ನಗರದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಸಮೀಪದ ಚೇತನ ಚಿಲುಮೆ (ಬಾಲ ಭವನ) ಸಭಾಂಗಣದಲ್ಲಿ ಅಪರಾಹ್ನ ೨.೩೦ ಗಂಟೆಗೆ ನಡೆಯಲಿದೆ.
ಸಭೆಯ ಅಧ್ಯಕ್ಷತೆಯನ್ನು ವಿಶ್ವಕರ್ಮ ಸೇವಾ ಸಂಘದ ಅಧ್ಯಕ್ಷ ಬಿ. ಜಗದೀಶ್ ಆಚಾರ್ಯ, ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾ ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷ ಎಸ್.ಜೆ. ದೇವದಾಸ್ ಆಚಾರ್ಯ, ಸಂಘದ ಸೋಮವಾರಪೇಟೆ ಅಧ್ಯಕ್ಷ ಯಶ್ವಂತ್ ಆಚಾರ್ಯ, ಕುಶಾಲನಗರ ಕಲಾಭೂಮಿ ಅಕಾಡೆಮಿ ಸಂಸ್ಥಾಪಕ ಹಾಗೂ ಯೋಗ ಮತ್ತು ಕರಾಟೆ ಶಿಕ್ಷಕ ಎಂ.ಕೆ. ಶಿವರಾಂ ಆಚಾರ್ಯ ಹಾಗೂ ವಿಶ್ವಕರ್ಮ ಮಹಿಳಾ ಸಮಿತಿ ಅಧ್ಯಕ್ಷೆ ವಿದ್ಯಾಲತ ವೆಂಕಟರಮಣ ಆಚಾರ್ಯ ಹಾಗೂ ಇನ್ನಿತರರು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.