ಅದೆಷ್ಟೋ ಶತಮಾನಗಳಿಂದ ಅಯಸ್ಕಾಂತ (ಮ್ಯಾಗ್‌ನೆಟ್) ಶಕ್ತಿಯಿಂದ ಭೂಮಿಯು ನಮ್ಮನ್ನು ಅಪಾಯಕಾರಿ ‘ಸೋಲಾರ್ ವಿಂಡ್’ (ಸೂರ್ಯನ ಮೇಲ್ಪದರದಿಂದ ಚಿಮ್ಮುವ ಪದಾರ್ಥಗಳು) ನಿಂದ ರಕ್ಷಿಸುತ್ತಾ ಬಂದಿದೆ. ಬಾಹ್ಯಾಕಾಶದಲ್ಲಿನ ಹಲವಾರು ಪದಾರ್ಥಗಳಿಂದ ಉಗಮಿಸುವ ಅಪಾಯಕಾರಿ ‘ಕಾಸ್ಮಿಕ್ ರೇಸ್’ ಗಳಿಂದ ಸಹ ಭೂಮಿಯು ತನ್ನ ಮ್ಯಾಗ್‌ನೆಟಿಕ್ ಫೀಲ್ಡ್ನಿಂದಾಗಿ ನಮ್ಮನ್ನು ರಕ್ಷಿಸುವುದಲ್ಲದೆ, ಸಂಚಾರ ವ್ಯವಸ್ಥೆ(ಮುಖ್ಯವಾಗಿ ವಾಯು ಹಾಗೂ ಸಮುದ್ರ ಸಂಚಾರ)ಯಲ್ಲಿ ವಿಮಾನ, ಹಡಗುಗಳು ಸಂಚರಿಸಲು ಮಾರ್ಗದರ್ಶನಕ್ಕೆ ಅತ್ಯಮೂಲ್ಯ ಎನಿಸಿಕೊಂಡಿದೆ. ಆದರೆ ಇಂತಹ ಮ್ಯಾಗ್‌ನೆಟಿಕ್ ಶಕ್ತಿ ಭೂಮಿಗೆ ಬರುವುದಾದರೂ ಹೇಗೆ?

ಭೂಮಿಯ ಒಳಭಾಗದಲ್ಲಿ ಮಧ್ಯದಲ್ಲಿ ಕಬ್ಬಿಣದ ‘ಕೋರ್’ ಇದ್ದು ಇದರ ಸುತ್ತ, ಕರಗಿರುವ ರೂಪದಲ್ಲಿ ಕಬ್ಬಿಣ ಸೇರಿದಂತೆ ಇತರ ಲೋಹದ ಪದಾರ್ಥಗಳು, ಕುದಿಯುವ ದ್ರಾವಣ ರೂಪದಲ್ಲಿ ಅಸ್ತಿತ್ವ ಪಡೆದುಕೊಂಡಿವೆ. ದ್ರಾವಣ ರೂಪದಲ್ಲಿರುವ ಕಾರಣ ಇವು ಒಂದೇ ಕಡೆ ಇರದೆ ಕಬ್ಬಿಣದ ‘ಕೋರ್’ ಸುತ್ತ ಚಲಿಸುವುದು ಸಹಜ. ಈ ಚಲನದಿಂದಾಗಿ ಸೃಷ್ಟಿಯಾಗುವ ವಿದ್ಯುತ್ ಶಕ್ತಿ ಮ್ಯಾಗ್‌ನೆಟಿಕ್ ಶಕ್ತಿಯನ್ನೂ ಉತ್ಪಾದಿಸುತ್ತದೆ. (ವಿದ್ಯುತ್ ಶಕ್ತಿಯಿಂದ ಮ್ಯಾಗ್‌ನೆಟಿಕ್ ಹಾಗೂ ಮ್ಯಾಗ್‌ನೆಟಿಕ್ ಶಕ್ತಿಯಿಂದ ವಿದ್ಯುತ್ ಶಕ್ತಿ ಉತ್ಪಾದಿಸಬಹುದಾಗಿದೆ.) ಈ ಮ್ಯಾಗ್‌ನೆಟಿಕ್ ಶಕ್ತಿಯಿಂದ ಭೂಮಿಯ ಸುತ್ತ ಉತ್ಪಾದನೆಗೊಳ್ಳುವ ಮ್ಯಾಗ್‌ನೆಟಿಕ್ ಫೀಲ್ಡ್ ನಮ್ಮನ್ನು ಸೂರ್ಯನ ಅಪಾಯಕಾರಿ ಕಿರಣಗಳಿಂದ ರಕ್ಷಿಸಬಲ್ಲ ಸಾಮರ್ಥ್ಯ ಹೊಂದಿದೆ.

ಕಬ್ಬಿಣದ ಕೋರ್ ಸುತ್ತ ದ್ರಾವಣ ಲೋಹಗಳ ಸ್ಥಿರವಲ್ಲದ ಚಲನದಿಂದಾಗಿ ಭೂಮಿಯ ಮ್ಯಾಗ್‌ನೆಟಿಕ್ ಶಕ್ತಿಯ ಸಾಮರ್ಥ್ಯದಲ್ಲಿ ಏರುಪೇರಾಗುವುದು ಸಹಜ. ಆದರೆ ಇದು ಗೃಹದ ಉತ್ತರ - ದಕ್ಷಿಣ ಪೋಲ್‌ಗಳನ್ನೇ ಅದಲು ಬದಲು ಮಾಡುವಷ್ಟು ಅಸ್ಥಿರತೆ ಹೊಂದುವುದೆAದರೆ ಆಶ್ಚರ್ಯಕಾರಿ. ಇಲ್ಲಿ ಹೆದರುವ ಅಂಶ ಏನೂ ಇಲ್ಲ. ಈ ವಿಶೇಷ ಘಟನೆ ೧೦೦ ವರ್ಷಕ್ಕೋ, ಸಾವಿರ ವರ್ಷಕ್ಕೋ ಸಂಭವಿಸುದಿಲ್ಲ. ಸಾಮಾನ್ಯವಾಗಿ ಪೊಲಾರಿಟಿ ಅದಲು-ಬದಲು ೨ ರಿಂದ ೩ ಲಕ್ಷ ವರ್ಷಗಳಲ್ಲಿ ಒಮ್ಮೆ ಆಗುವಂತಹ ಪ್ರಸಂಗವಾಗಿದ್ದರೂ ಈ ಹಿಂದೆ ಈ ಘಟನೆ ನಡೆದಿದ್ದು ಈ ಸಾಮಾನ್ಯ ಸರಾಸರಿಗಿಂತ ೨ ರಿಂದ ೩ ಪಟ್ಟು ಹೆಚ್ಚು ವರ್ಷಗಳ ಹಿಂದೆ, ಅಂದರೆ ಸುಮಾರು ೮ ಲಕ್ಷ ವರ್ಷಗಳ ಹಿಂದೆ.

ದಿಕ್ಸೂಚಿ (ಕಂಪಾಸ್) ಮೂಲಕ ದಿಕ್ಕು ಕಂಡುಹಿಡಿಯುವಾಗ ಅದರಲ್ಲಿ ಲೇಪಿತವಾಗಿರುವ ಉತ್ತರ ಎಂಬ ಕಡ್ಡಿಯು ಉತ್ತರ ದಿಕ್ಕಿನತ್ತ ವಾಲುತ್ತದೆ. ಹಾಗೆಯೇ ದಕ್ಷಿಣ ಲೇಪಿತ ಕಡ್ಡಿಯು ದಕ್ಷಿಣದತ್ತ ವಾಲಿ ದಿಕ್ಕನ್ನು ಸೂಚಿಸುವ ಕಾರ್ಯ ನಿರ್ವಹಿಸುತ್ತವೆ. ಆದರೆ ಇದೇ ದಿಕ್ಸೂಚಿಯನ್ನು ೮ ಲಕ್ಷ ವರ್ಷಗಳ ಹಿಂದೆ ಬಳಸಿದ್ದರೆ, ದಕ್ಷಿಣದ ಕಡ್ಡಿಯು ಉತ್ತರ ಹಾಗೂ ಉತ್ತರದ ಕಡ್ಡಿಯು ದಕ್ಷಿಣದತ್ತ ವಾಲುತ್ತಿತ್ತು ಎಂಬುದು ಇಲ್ಲಿ ಗಮನಾರ್ಹ.

ಒಮ್ಮೆಲೆ ಬದಲಾಗುತ್ತವೆಯೇ ?

ಭೂಮಿಯ ಉತ್ತರ ಹಾಗೂ ದಕ್ಷಿಣ ಪೋಲ್‌ಗಳು ಒಮ್ಮೆಲೆ ಬದಲಾಗುವುದಿಲ್ಲ. ಭೂಮಿಯ ಮ್ಯಾಗ್‌ನೆಟಿಕ್ ಫೀಲ್ಡ್ನ ವ್ಯತ್ಯಾಸಗಳನ್ನು ಸೂಕ್ಷö್ಮವಾಗಿ ಅಧ್ಯಯನ ನಡೆಸಿದ ಬಳಿಕ ಭೂಮಿಯ ಪೋಲ್‌ಗಳು ಮೆಲ್ಲಮೆಲ್ಲನೆ ತಮ್ಮ ಸ್ಥಳ ಬದಲಾಯಿಸುತ್ತಿರುವುದು ಪತ್ತೆಯಾಗಿದೆ. ೧೯ನೇ ಶತಮಾನದ ಪ್ರಾರಂಭದಿAದ ಇಂದಿನವರೆಗೆ ಭೂಮಿಯ ಉತ್ತರ ಪೋಲ್ ಸುಮಾರು ೧,೧೦೦ ಕಿ.ಮಿ ಮತ್ತಷ್ಟು ಉತ್ತರ ದಿಕ್ಕಿಗೆ ತನ್ನ ಸ್ಥಾನವನ್ನು ಬದಲಾಯಿಸರುವುದಾಗಿ ಸಂಶೋಧನೆ ವೇಳೆ ಸಾಬೀತಾಗಿದೆ. ೨೦ನೇ ಶತಮಾನದ ಪ್ರಾರಂಭದಲ್ಲಿ ಈ ಉತ್ತರ ಪೋಲ್ ವಾರ್ಷಿಕ ೧೬ ಕಿ.ಮೀ ನಷ್ಟು ಉತ್ತರಕ್ಕೆ ಚಲಿಸುತ್ತಿದ್ದು, ಇದೀಗ ಅದರ ವೇಗ ಮತ್ತಷ್ಟು ಹೆಚ್ಚಿದ್ದು ವಾರ್ಷಿಕ ೬೪ ಕಿ.ಮೀ ಉತ್ತರಕ್ಕೆ ಚಲಿಸುತ್ತಿದೆ.

ಭೌಗೋಳಿಕ ಉತ್ತರ-ದಕ್ಷಿಣ ಹಾಗೂ ಮ್ಯಾಗ್‌ನೆಟಿಕ್ ಉತ್ತರ-ದಕ್ಷಿಣಕ್ಕೂ ಅಜಗಜಾಂತರ ವ್ಯತ್ಯಾಸ

ಭೂಮಿಯು ಪಶ್ಚಿಮ ದಿಕ್ಕಿನಿಂದ ಪೂರ್ವ ದಿಕ್ಕಿಗೆ ತಿರುಗುವುದು ಎಲ್ಲರಿಗೂ ಅರಿವಿರುವ ವಿಚಾರ.(ಈ ಚಲನದಿಂದಾಗಿ ಸೂರ್ಯನು ಪೂರ್ವದಿಂದ ಉದ್ಭವಿಸುವ ಹಾಗೆ ಭಾಸವಾಗುತ್ತದೆ) ಒಂದು ವೇಳೆ ಭೂಮಿಯ ಉತ್ತರ ಪೋಲ್ ದಕ್ಷಿಣಕ್ಕೆ ಹಾಗೂ ದಕ್ಷಿಣ ಪೋಲ್ ಉತ್ತರಕ್ಕೆ ಅದಲು-ಬದಲಾದರೆ, ಭೂಮಿಯು ಈ ತಿರುಗುವಿಕೆ (ರೊಟೇಶನ್)ಗೂ ಧÀಕ್ಕೆ ಬರಲಿದೆ ಎಂಬುದು ಸತ್ಯಕ್ಕೆ ದೂರವಾದ ವಿಚಾರ. ಏಕೆಂದರೆ ಭೂಮಿಯು ಪಶ್ಚಿಮದಿಂದ ಪೂರ್ವಕ್ಕೆ ತಿರುಗುವುದು ತನ್ನ ಭೌಗೋಳಿಕ ಅಕ್ಷರೇಖೆ (ಚಿxis) ಸುತ್ತ ಹೊರತು ಮ್ಯಾಗ್‌ನೆಟಿಕ್ ಅಕ್ಷರೇಖೆ ಸುತ್ತವಲ್ಲ. ಆದ್ದರಿಂದ ಪೊಲಾರಿಟಿ ಅದಲು-ಬದಲುವಿಕೆಯಿಂದ ಭೂಮಿಯ ತಿರುಗುವಿಕೆಗೆ ಯಾವುದೇ ದಕ್ಕೆಯಿಲ್ಲ. ಭೂಮಿಯಲ್ಲಿನ ಹವಮಾನಕ್ಕೂ ಯಾವುದೇ ವ್ಯತಿರಿಕ್ತ ಪರಿಣಾಮ ಬೀರಲು ಸಾಧ್ಯವಿಲ್ಲ. ಚಿತ್ರ ಗಮನಿಸಿದರೆ ಭೌಗೋಳಿಕ (ಜಿಯಿಗ್ರಾಫಿಕಲ್) ಹಾಗೂ ಮ್ಯಾಗ್‌ನೆಟಿಕ್ ಪೋಲ್‌ಗಳ ವ್ಯತ್ಯಾಸದ ಸ್ಪಷ್ಟ ಚಿತ್ರಣ ದೊರಕಲಿದೆ. ಉತ್ತರದ ಮ್ಯಾಗ್‌ನೆಟಿಕ್ ಪೋಲ್ ಉತ್ತರದ ಭೌಗೋಳಿಕ ಪೋಲ್‌ನಿಂದ ೯೬೫ ಕಿ.ಮೀ. ದೂರದಲ್ಲಿದೆ ಹಾಗೂ ದಕ್ಷಿಣದ ಮ್ಯಾಗ್‌ನೆಟಿಕ್ ಪೋಲ್ ದಕ್ಷಿಣದ ಭೌಗೋಳಿಕ ಪೋಲ್‌ನಿಂದ ೨,೮೬೦ ಕಿ.ಮೀ ದೂರದಲ್ಲಿದೆ.

ಪ್ರಸ್ತುತ ಭೂಮಿಯಲ್ಲಿನ ಎಲ್ಲಾ ಅತ್ಯಾಧುನಿಕ ಮಾರ್ಗಸೂಚಕಗಳು (ಉದಾ: ಜಿ.ಪಿ.ಎಸ್) ಮ್ಯಾಗ್‌ನೆಟಿಕ್ ಉತ್ತರ ದಿಕ್ಕಿಗನ್ವಯ ಕಾರ್ಯಚರಿಸುತ್ತಿವೆ. ಇದು ಭೌಗೋಳಿಕ ಉತ್ತರ ದಿಕ್ಕಿನಿಂದ ಕೇವಲ ೯೬೫ ಕಿ.ಮೀ ಅಂತರದಲ್ಲಿದ್ದು, ಮಾರ್ಗಸೂಚಕಗಳಿಗೆ ಗುಣಾತ್ಮಕ ಕಾರ್ಯನಿರ್ವಹಣೆಗೆ ಅಷ್ಟರ ಮಟ್ಟಿಗೆ ಪೆಟ್ಟು ಬೀಳದಿದ್ದರೂ ೨೦೪೦ ನೇ ಇಸವಿಯಷ್ಟರಲ್ಲಿ ಮ್ಯಾಗನೆಟಿಕ್ ಉತ್ತರವು ಭೌಗೋಳಿಕ ಪೂರ್ವದಿಕ್ಕಿನತ್ತ ಹೆಚ್ಚಾಗಿ ವಾಲಲಿದ್ದು, ಪ್ರಸ್ತುತ ಇರುವ ಅತ್ಯಾಧುನಿಕ ಮಾರ್ಗಸೂಚಕಗಳು ಸಂಪೂರ್ಣ ನಿಷ್ಪçಯೋಜಕವಾಗಲಿವೆ. (ಅಂದರೆ ದಿಕ್ಸೂಚಿಯಲ್ಲಿನ ಉತ್ತರ ಲೇಪಿತ ಕಡ್ಡಿಯು ಪೂರ್ವ ದಿಕ್ಕನ್ನು ಸೂಚಿಸುತ್ತದೆ.)

-ಪ್ರಜ್ವಲ್ ಜಿ.ಆರ್