ಅಫ್ಘಾನಿಸ್ತಾನದಲ್ಲಿ ಭೂಕಂಪ-ಸಾವಿನ ಸಂಖ್ಯೆ ಹೆಚ್ಚಳ

ಅಫ್ಘಾನಿಸ್ತಾನ, ಜೂ. ೨೩: ದಶಕಗಳಲ್ಲಿ ಅಫ್ಘಾನಿಸ್ತಾನದ ಮಾರಣಾಂತಿಕ ಭೂಕಂಪದಿAದ ಬದುಕುಳಿದವರನ್ನು ಹುಡುಕುವ ಭರವಸೆಯು ಗುರುವಾರ ಕ್ಷೀಣಿಸಿತು. ಪರಿಹಾರ ನೀಡಲು ಸರಕಾರ ಪರದಾಡುತ್ತಿದ್ದು, ಸಾವಿನ ಸಂಖ್ಯೆ ಹೆಚ್ಚಾಗುತ್ತಲಿದೆ. ಅಫ್ಘಾನಿಸ್ತಾನದ ಪಾಕ್ಟಿಕಾ ಪ್ರಾಂತ್ಯದ ಕಠಿಣ ಪೀಡಿತ ಪ್ರದೇಶಗಳಿಗೆ ಆಹಾರ ಮತ್ತು ಪರಿಹಾರ ಸಾಮಗ್ರಿಗಳನ್ನು ತರುತ್ತಿರುವ ಮೊದಲ ತಾಲಿಬಾನ್ ಸರ್ಕಾರದ ಸಹಾಯದ ಹೆಲಿಕಾಪ್ಟರ್‌ಗಳೊಂದಿಗೆ ಹಾನಿಯ ಪ್ರಮಾಣವು ಸ್ಪಷ್ಟವಾಗಲು ಪ್ರಾರಂಭಿಸುತ್ತಿದ್ದರೂ ಸಹ, ರಕ್ಷಣಾ ಪ್ರಯತ್ನಗಳು ಸ್ಥಗಿತಗೊಳ್ಳುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾವಿರಾರೂ ಜನರು ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಲೆಕ್ಕಕ್ಕೆ ಸಿಗುತ್ತಿಲ್ಲ ಎಂದು ಅಂದಾಜಿಸಲಾಗಿದೆ. ಅತಿ ಹೆಚ್ಚು ಹಾನಿಗೊಳಗಾದ ಜಿಲ್ಲೆಗಳಲ್ಲಿ ಒಂದಾದ ಗಯಾನ್‌ನಲ್ಲಿ ೧,೫೦೦ ಮನೆಗಳು ನಾಶವಾಗಿವೆ ಎಂದು ತಿಳಿದು ಬಂದಿದೆ. ಪರಿಹಾರ ನೀಡಲು ಅಗತ್ಯವಿರುವಷ್ಟು ಲಭ್ಯವಾಗುತ್ತಿಲ್ಲ ಎಂದು ಪ್ರಾಂತೀಯ ಗವರ್ನರ್‌ನ ವಕ್ತಾರ ಸನಾವುಲ್ಲಾ ಮಸೂಮ್ ಹೇಳಿದರು. ಹೆಚ್ಚಿನ ಆಹಾರ, ಆರೋಗ್ಯ ಮತ್ತು ಮಾನವೀಯ ಸಹಾಯವನ್ನು ಒದಗಿಸಲು ನಾವು ಸಹಾಯ ಸಂಸ್ಥೆಗಳಿಗೆ ಕರೆ ನೀಡಿದ್ದೇವೆ. ಇರಾನ್ ಮತ್ತು ಕತಾರ್‌ನಿಂದ ವಿಮಾನದ ಮೂಲಕ ಕೆಲವು ಸರಬರಾಜುಗಳು ದೇಶಕ್ಕೆ ಬಂದಿವೆ ಎಂದು ತಾಲಿಬಾನ್ ಸರ್ಕಾರ ಹೇಳಿದೆ. ಈ ಪ್ರದೇಶವು ಗಾಯಾಳುಗಳಿಗೆ ಸಹಾಯ ಮಾಡುವ ಅನೇಕ ಚಿಕಿತ್ಸಾಲಯಗಳು ಅಥವಾ ಆಸ್ಪತ್ರೆಗಳಿಂದ ದೂರವಿದೆ. ಗಾಯಾಳುಗಳನ್ನು ಮಿಲಿಟರಿ ಮತ್ತು ನಾಗರಿಕ ಆಸ್ಪತ್ರೆಗಳಿಗೆ ಸಾಗಿಸಲು ಅಫ್ಘಾನ್ ರಕ್ಷಣಾ ಸಚಿವಾಲಯವು ಏಳು ಹೆಲಿಕಾಪ್ಟರ್‌ಗಳು ಮತ್ತು ವೈದ್ಯಕೀಯ ತಂಡವನ್ನು ಕಳುಹಿಸಿದೆ.

ಶಿವಸೇನೆಗೆ ಬಂಡಾಯಗಾರರ ಬಿಸಿ

ಮುಂಬೈ, ಜೂ. ೨೩: ಏಕನಾಥ್ ಶಿಂಧೆ ನೇತೃತ್ವದಲ್ಲಿನ ಬಂಡಾಯ ಶಾಸಕರು ೨೪ ಗಂಟೆಯೊಳಗೆ ಅಸ್ಸಾಂನಿAದ ಮುಂಬೈಗೆ ಮರಳಿದರೆ ಮಹಾ ವಿಕಾಸ್ ಆಘಾದಿ ಸರ್ಕಾರದಿಂದ ಹೊರಬರಲು ಶಿವಸೇನೆ ಸಿದ್ಧವಾಗಿದೆ ಮತ್ತು ಸಮಸ್ಯೆಯನ್ನು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರೊಂದಿಗೆ ಚರ್ಚಿಸಲಾಗುವುದು ಎಂದು ಶಿವಸೇನಾ ಸಂಸದ ಸಂಜಯ್ ರಾವತ್ ಹೇಳಿದ್ದಾರೆ. ಪ್ರಸ್ತುತ ಏಕನಾಥ್ ಶಿಂಧೆ ನೇತೃತ್ವದಲ್ಲಿನ ೩೭ ಶಿವಸೇನಾ ಬಂಡಾಯ ಶಾಸಕರು ಮತ್ತು ೯ ಪಕ್ಷೇತರ ಶಾಸಕರು ಗೌಹಟಿಯಲ್ಲಿ ತಂಗಿರುವುದರಿAದ ಶಿವಸೇನಾ ನೇತೃತ್ವದ ಸರ್ಕಾರ ಬಿಕ್ಕಟ್ಟಿಗೆ ಸಿಲುಕಿದೆ. ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರದಲ್ಲಿ ಎನ್‌ಸಿಪಿ ಹಾಗೂ ಕಾಂಗ್ರೆಸ್ ಕೂಡಾ ಅಧಿಕಾರದ ಪಾಲು ಪಡೆದಿವೆ. ನೀವು ನಿಜವಾದ ಶಿವ ಸೈನಿಕರಾದರೆ ಪಕ್ಷವನ್ನು ತೊರೆಯುವುದಿಲ್ಲ, ೨೪ ಗಂಟೆಯೊಳಗೆ ಮುಂಬೈಗೆ ವಾಪಸ್ಸಾದರೆ ನಿಮ್ಮ ಬೇಡಿಕೆ ಪರಿಗಣಿಸಲು ನಾವು ಸಿದ್ಧರಿದ್ದೇವೆ. ಸಮಸ್ಯೆಗಳನ್ನು ಸಿಎಂ ಉದ್ಧವ್ ಠಾಕ್ರೆ ಅವರೊಂದಿಗೆ ಚರ್ಚಿಸಲಾಗುವುದು, ನಿಮ್ಮ ಬೇಡಿಕೆಗಳನ್ನು ಸಕಾರಾತ್ಮಕವಾಗಿ ಪರಿಗಣಿಸಲಾಗುವುದು, ವಾಟ್ಸಾಪ್ ಅಥವಾ ಟ್ವೀಟರ್‌ನಲ್ಲಿ ಪತ್ರ ಬರೆಯಬೇಡಿ ಎಂದು ಸಂಜಯ್ ರಾವತ್ ಹೇಳಿದ್ದಾರೆ. ಮುಂಬೈನಿAದ ಹೊರಗಿರುವ ಬಂಡಾಯ ಶಾಸಕರು ಹಿಂದೂತ್ವ ವಿಚಾರವೆತ್ತಿದ್ದಾರೆ. ಒಂದು ವೇಳೆ ಶಿವಸೇನಾ ಮಹಾ ಆಘಾದಿ ಸರ್ಕಾರ ತೊರೆಯಬೇಕೆಂಬುದು ಎಲ್ಲ ಶಾಸಕರಿಗೆ ಅನಿಸಿದರೆ ಮುಂಬೈಗೆ ವಾಪಸ್ಸಾಗಿ, ನೀವು ನಿಜವಾದ ಶಿವಸೈನಿಕರಾದರೆ ಮುಂಬೈಗೆ ವಾಪಸ್ಸಾಗಿ ಉದ್ಧವ್ ಠಾಕ್ರೆ ಅವರೊಂದಿಗೆ ಮಾತನಾಡಿ ಎಂದು ಅವರು ತಿಳಿಸಿದ್ದಾರೆ.

ಅಟ್ರಾಸಿಟಿ ಕಾಯ್ದೆ ಕುರಿತು ಹೈಕೋರ್ಟ್ ಸ್ಪಷ್ಟನೆ

ಬೆಂಗಳೂರು, ಜೂ. ೨೩: ಸಾರ್ವಜನಿಕ ಸ್ಥಳಗಳಲ್ಲಿ ನಿಂದನೆ ಮಾಡಿದರೆ ಮಾತ್ರ ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಅನ್ವಯವಾಗುತ್ತದೆ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ. ಕಟ್ಟಡದ ನೆಲಮಹಡಿ ಸಾರ್ವಜನಿಕ ವೀಕ್ಷಣೆಯ ಸ್ಥಳವಲ್ಲ. ಹಾಗಾಗಿ ಅಲ್ಲಿಂದ ಬಯ್ಯುವುದು ಅಥವಾ ನಿಂದನೆ ಮಾಡಿದರೆ ಅದು ಪರಿಶಿಷ್ಠ ಜಾತಿ, ಪಂಗಡದ ಮೇಲಿನ ದೌರ್ಜನ್ಯ ತಡೆ ಕಾಯ್ದೆ ವ್ಯಾಪ್ತಿಗೆ ಅನ್ವಯವಾಗುವುದಿಲ್ಲ ಎಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಮಂಗಳೂರಿನ ರಿತೇಶ್ ಪಯಾಸ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ. ೨೦೨೦ರಲ್ಲಿ ಈ ಪ್ರಕರಣ ನಡೆದಿತ್ತು. ನೆಲಮಹಡಿ ಸಾರ್ವಜನಿಕ ವೀಕ್ಷಣೆಯ ಸ್ಥಳವಲ್ಲ. ಹೀಗಾಗಿ ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಸೆ. ೩(೧)(ಆರ್)(ಎಸ್)(ವಿಎ) ಅನ್ವಯವಾಗುವುದಿಲ್ಲ ಎಂದು ಹೇಳಿರುವ ಕೋರ್ಟ್ ಜಾತಿ ನಿಂದನೆ ಮಾಡಿದ್ದಾರೆಂದು ಆರೋಪಿ ರಿತೇಶ್ ಪಯಾಸ್ ವಿರುದ್ಧ ಹೂಡಿದ್ದ ಅಟ್ರಾಸಿಟಿ ಕಾಯ್ದೆಯನ್ನು ರದ್ದುಪಡಿಸಿದೆ. ರಿತೇಶ್ ಪಯಾಸ್ ಮತ್ತು ಜಯಕುಮಾರ್ ನಾಯರ್ ನಡುವೆ ಆಸ್ತಿ ವಿವಾದಕ್ಕೆ ಸಂಬAಧಿಸಿದAತೆ ಸಿವಿಲ್ ವ್ಯಾಜ್ಯವಿತ್ತು. ನಾಯರ್ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ಮೋಹನ್ ಎಂಬಾತ ತಮ್ಮನ್ನು ಜಾತಿನಿಂದನೆ ಮಾಡಿದ್ದಾರೆ ಎಂದು ದೂರು ನೀಡಿದ್ದರು.

ಎನ್‌ಐಎ ಮಹಾನಿರ್ದೇಶಕರಾಗಿ ನೇಮಕ

ನವದೆಹಲಿ, ಜೂ. ೨೩: ಪಂಜಾಬ್ ಕೇಡರ್‌ನ ಹಿರಿಯ ಐಪಿಎಸ್ ಅಧಿಕಾರಿ ದಿನಕರ್ ಗುಪ್ತಾ ಅವರನ್ನು ರಾಷ್ಟಿçÃಯ ತನಿಖಾ ಸಂಸ್ಥೆ(ಎನ್‌ಐಎ)ಯ ಮಹಾನಿರ್ದೇಶಕರನ್ನಾಗಿ ನೇಮಿಸಲಾಗಿದೆ ಎಂದು ಗುರುವಾರ ಸಿಬ್ಬಂದಿ ಸಚಿವಾಲಯದ ಆದೇಶ ತಿಳಿಸಿದೆ. ಗುಪ್ತಾ ಪಂಜಾಬ್ ಕೇಡರ್‌ನ ೧೯೮೭-ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದು, ಕೇಂದ್ರ ಸಂಪುಟ ನೇಮಕಾತಿ ಸಮಿತಿಯು ಗುಪ್ತಾ ಅವರ ನಿವೃತ್ತಿಯ ದಿನಾಂಕವಾದ ಮಾರ್ಚ್ ೩೧, ೨೦೨೪ ರವರೆಗೆ ಮಹಾ ನಿರ್ದೇಶಕರಾಗಿ ನೇಮಕ ಮಾಡಲು ಅನುಮೋದಿಸಿದೆ. ಮತ್ತೊಂದು ಆದೇಶದಲ್ಲಿ, ಸ್ವಾಗತ್ ದಾಸ್ ಅವರನ್ನು ಗೃಹ ಸಚಿವಾಲಯದ ವಿಶೇಷ ಕಾರ್ಯದರ್ಶಿ (ಆಂತರಿಕ ಭದ್ರತೆ) ಆಗಿ ನೇಮಿಸಲಾಗಿದೆ. ದಾಸ್, ಛತ್ತೀಸ್‌ಗಢ ಕೇಡರ್‌ನ ೧೯೮೭-ಬ್ಯಾಚ್‌ನ ಐಪಿಎಸ್ ಅಧಿಕಾರಿ, ಪ್ರಸ್ತುತ ಇಂಟೆಲಿಜೆನ್ಸ್ ಬ್ಯೂರೋದಲ್ಲಿ ವಿಶೇಷ ನಿರ್ದೇಶಕರಾಗಿದ್ದಾರೆ. ದಾಸ್ ಅವರನ್ನು ನವೆಂಬರ್ ೩೦, ೨೦೨೪ ರವರೆಗೆ ನೇಮಿಸಲಾಗಿದೆ, ಅದು ಅವರ ನಿವೃತ್ತಿಯ ದಿನಾಂಕವಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಕಾರು ಅವಘಡ-ಮೂವರು ವಿದ್ಯಾರ್ಥಿಗಳು ಸಜೀವ ದಹನ

ಸೋನಿಪತ್, ಜೂ. ೨೩: ಹರಿಯಾಣದ ಸೋನಿಪತ್‌ನ ರಾಷ್ಟಿçÃಯ ಹೆದ್ದಾರಿ-೩೩೪ ಬಿ ನಲ್ಲಿ ವೇಗವಾಗಿ ಬಂದ ಕಾರೊಂದು ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದಿದ್ದು, ನಂತರ ಬೆಂಕಿ ಹೊತ್ತಿಕೊಂಡಿದೆ. ಭೀಕರ ಅಪಘಾತದಲ್ಲಿ ಮೂವರು ಎಂಬಿಬಿಎಸ್ ವಿದ್ಯಾರ್ಥಿಗಳು ಸಜೀವ ದಹನಗೊಂಡಿದ್ದಾರೆ ಮತ್ತು ಇತರ ಮೂವರು ಗಾಯಗೊಂಡಿರುವ ಘಟನೆ ಗುರುವಾರ ಬೆಳಗಿನ ಜಾವ ನಡೆದಿದೆ. ರೋಹ್ಟಕ್ ಪಿಜಿಐನಲ್ಲಿ ಎಂಬಿಬಿಎಸ್ ಮೂರನೇ ವರ್ಷದ ವಿದ್ಯಾರ್ಥಿಗಳಾದ ಪುಲ್ಕಿತ್, ನರ್ಬೀರ್, ಸಂದೇಶ್, ರೋಹಿತ್, ಅಂಕಿತ್ ಮತ್ತು ಸೋಂಬಿರ್ ರೋಹ್ಟಕ್‌ನಿಂದ ಹರಿದ್ವಾರಕ್ಕೆ ತೆರಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ರಾಯ್ ಗ್ರಾಮದ ಬಳಿಯ ಮೇಲ್ಸೇತುವೆಯಲ್ಲಿ ಅವರ ಕಾರು ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡಿತು.

ರಸಗೊಬ್ಬರ, ಕೀಟನಾಶಕ ಬಳಕೆ ಕಡಿಮೆ ಮಾಡಿ-ಕೇಂದ್ರ ಕೃಷಿ ಸಚಿವ

ನವದೆಹಲಿ, ಜೂ. ೨೩: ಕೃಷಿಯಲ್ಲಿ ರಸಗೊಬ್ಬರ ಮತ್ತು ಕೀಟನಾಶಕಗಳ ಬಳಕೆಯನ್ನು ಕಡಿಮೆ ಮಾಡಲು ಖಾಸಗಿ ವಲಯವೂ ಸರ್ಕಾರದೊಂದಿಗೆ ಕೈಜೋಡಿಸಬೇಕು ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ. ಸೋಲನ್‌ನಿಂದ (ಹಿಮಾಚಲ ಪ್ರದೇಶ) ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟದ (ಎಫ್‌ಐಸಿಸಿಐ) ವರ್ಚುವಲ್ ಆಯೋಜಿಸಿದ್ದ ೧೧ನೇ ಅಗ್ರೋಕೆಮಿಕಲ್ಸ್ ಕಾನ್‌ಕ್ಲೇವ್ ಅನ್ನು ಉದ್ದೇಶಿಸಿ ತೋಮರ್ ಮಾತನಾಡಿದರು. ನಮ್ಮ ದೇಶ ಕೃಷಿ ಪ್ರಧಾನವಾಗಿದ್ದು, ದೇಶದ ಆರ್ಥಿಕತೆಯಲ್ಲಿ ಕೃಷಿಯ ಕೊಡುಗೆ ಅಪಾರವಾಗಿದೆ. ಕೃಷಿ ಕ್ಷೇತ್ರದಲ್ಲಿ ರೈತರಿಗೆ ಲಾಭ ಬಹಳ ಮುಖ್ಯ. ಉತ್ಪಾದನೆಯ ಹೆಚ್ಚಳವೂ ಬಹಳ ಅವಶ್ಯಕ. ಬೇಳೆಕಾಳುಗಳು ಮತ್ತು ಎಣ್ಣೆಕಾಳುಗಳ ವಿಷಯದಲ್ಲಿ ದೇಶದಲ್ಲಿ ಉತ್ತಮ ಕೆಲಸ ನಡೆಯುತ್ತಿದೆ. ಕೃಷಿ ಕ್ಷೇತ್ರದಲ್ಲೂ ಲಾಭ ಹೆಚ್ಚಿಸುವುದು ಅಗತ್ಯವಾಗಿದ್ದು, ಕಟಾವಿನ ನಂತರ ರೈತರಿಗೆ ಆಗುವ ನಷ್ಟ ಕಡಿಮೆ ಆಗಬೇಕು. ಅದಕ್ಕಾಗಿ ಕ್ರಮಕೈಗೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಹಲವಾರು ಯೋಜನೆಗಳನ್ನು ರೂಪಿಸುತ್ತಿದೆ ಎಂದರು.