ಗೋಣಿಕೊಪ್ಪ ವರದಿ, ಜೂ. ೨೩: ಪಾಲಿಬೆಟ್ಟ ಚೆಶೈರ್ ಹೋಮ್ ವಿಶೇಷ ಶಾಲೆಯಲ್ಲಿ ಮಣ್ಣು ಉಳಿಸಿ ಅಭಿಯಾನ ಕಾರ್ಯಕ್ರಮ ನಡೆಯಿತು.
ಶಾಲಾ ಸಿಬ್ಬಂದಿ ಕಾವೇರಿ ತಾಯಿಯ ಕುರಿತು ಹಾಡಿದರು. ವಿಶೇಷ ಮಕ್ಕಳು ಮಣ್ಣು ಉಳಿಸಿ ಕುರಿತ ಕಿರು ನಾಟಕವನ್ನು ಪ್ರದರ್ಶಿಸಿದರು. ನೃತ್ಯ ಮಾಡಿ ಸಂಭ್ರಮಿಸಿದರು. ಮಣ್ಣು ಉಳಿಸಿ ಅಭಿಯಾನದಲ್ಲಿ ತೊಡಗಿರುವ ಸದ್ಗುರು ಜಗ್ಗಿವಾಸುದೇವ್ ಅವರ ವೇಷ ತೊಟ್ಟು ವಿದ್ಯಾರ್ಥಿ ಧೀರಜ್ ಗಮನ ಸೆಳೆದರು.
ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಮುಖ್ಯಸ್ಥ ಡಾ. ಚೆಪ್ಪುಡೀರ ಜಿ. ಕುಶಾಲಪ್ಪ ಮಾತನಾಡಿ, ಮಣ್ಣಿನ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಮಣ್ಣು ರಕ್ಷಿಸಿಕೊಂಡು ನಮ್ಮ ಜೀವನವನ್ನು ಸಾರ್ಥಕತೆಗೊಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಚೆಶೈರ್ ಹೋಮ್ ವಿಶೇಷ ಶಾಲಾ ಆಡಳಿತ ಮಂಡಳಿ ಖಜಾಂಚಿ ಡಾ. ಅಜ್ಜಿನಿಕಂಡ ಗಣಪತಿ ಮಾತನಾಡಿದರು.
ಸಂಸ್ಥೆಯ ಅಧ್ಯಕ್ಷ ಗೀತಾ ಚೆಂಗಪ್ಪ, ಉಪಾಧ್ಯಕ್ಷ ಪುನೀತ ರಾಮಸ್ವಾಮಿ, ಕಾರ್ಯದರ್ಶಿ ಆಶಾ ಸುಬ್ಬಯ್ಯ, ಮುಖ್ಯ ಶಿಕ್ಷಕ ಶಿವರಾಜ್, ಸ್ವಯಂ ಸೇವಕರಾದ ಲೀನಾ, ಪಂಚು, ಅಖಿಲ್, ಕರುಂಬಯ್ಯ ಇದ್ದರು.