*ಗೋಣಿಕೊಪ್ಪ, ಜೂ. ೨೩: ವಿಶೇಷಚೇತನರಿಗೆ ಊರುಗೋಲು, ಗಾಲಿ ಕುರ್ಚಿ, ಶ್ರವಣ ಸಾಧನ ಹಾಗೂ ಪಿ.ಪಿ. ಚೇರ್‌ಗಳನ್ನು ರಾಜ್ಯ ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ, ಶಾಸಕ ಕೆ.ಜಿ. ಬೋಪಯ್ಯ ಅವರು ವಿತರಿಸಿದರು.

ಪೊನ್ನಂಪೇಟೆ ಸಾಮರ್ಥ್ಯ ಸೌಧ ಸಭಾಂಗಣದ ಮುಂಭಾಗದಲ್ಲಿ ಜಿಲ್ಲಾ ಅಂಗವಿಕಲರ ಕಲ್ಯಾಣಭಿವೃದ್ಧಿ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ೨೨ ಫಲಾನುಭವಿಗಳಿಗೆ ಸುಮಾರು ರೂ. ೨ ಲಕ್ಷ ಮೌಲ್ಯದ ಅಗತ್ಯ ವಸ್ತುಗಳನ್ನು ವಿತರಿಸಲಾಯಿತು.

ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಕುಂಞAಗಡ ಅರುಣ್ ಭೀಮಯ್ಯ, ತಾಲೂಕು ಅಧ್ಯಕ್ಷ ನೆಲ್ಲಿರ ಚಲನ್‌ಕುಮಾರ್, ಕೃಷಿ ಮೋರ್ಚಾ ಅಧ್ಯಕ್ಷ ತೋರಿರ ವಿನು, ಅಕ್ರಮ ಸಕ್ರಮ ಸಮಿತಿ ಸದಸ್ಯ ತೀತಮಾಡ ಲಾಲ ಭೀಮಯ್ಯ, ಕಾನೂರು ಶಕ್ತಿ ಕೇಂದ್ರ ಪ್ರಮುಖ ಕಾಡ್ಯಮಾಡ ಭರತ್ ಮಾಚು, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಕೊಣಿಯಂಡ ಅಪ್ಪಣ್ಣ, ವ್ಯವಸ್ಥಾಪಕಿ ಸ್ವರೂಪ್, ಜಿಲ್ಲಾ ಅಂಗವಿಕಲ ಕಲ್ಯಾಣಭಿವೃದ್ಧಿ ಇಲಾಖೆ ಅಧಿಕಾರಿ ವಿಮಲ, ತಾಲೂಕು ಅಧಿಕಾರಿ ಪ್ರಥನ್ ಇದ್ದರು.