*ಗೋಣಿಕೊಪ್ಪ, ಜೂ. ೨೩: ಪೊನ್ನಂಪೇಟೆ ತಾಲೂಕಿನ ಮಾಯಮುಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಶಾಕಿರಣ ಕಾಲೋನಿಯ ರಸ್ತೆ ಕಾಮಗಾರಿಗೆ ರಾಜ್ಯ ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ, ಶಾಸಕ ಕೆ.ಜಿ. ಬೋಪಯ್ಯ ಭೂಮಿ ಪೂಜೆ ನೆರವೇರಿಸಿದರು.

ಕಾವೇರಿ ನೀರಾವರಿ ನಿಗಮದ ೮೫ ಲಕ್ಷ ಅನುದಾನವನ್ನು ಬಳಸಿ ಕಾಲೋನಿಗೆ ಕಾಂಕ್ರಿಟ್ ರಸ್ತೆ ನಿರ್ಮಾಣ ಮಾಡಲಾಗುತ್ತಿದ್ದು, ೧೧೦ ಮೀ. ಉದ್ದ ಮತ್ತು ೩.೭೫ ಅಗಲದಲ್ಲಿ ರಸ್ತೆ ನಿರ್ಮಾಣವಾಗಲಿದೆ ಎಂದು ಶಾಸಕರು ಕನ್ನಂಬಾಡಿ ಅಮ್ಮ ಮತ್ತು ಮಾರಿಯಮ್ಮ ದೇವಸ್ಥಾನ ಸಂಪರ್ಕ ರಸ್ತೆಯಲ್ಲಿ ಭೂಮಿ ಪೂಜೆ ನೆರವೇರಿಸಿ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷ ಮೀನಾ, ಸದಸ್ಯರುಗಳಾದ ಚೆಪುö್ಪಡೀರ ಪ್ರದೀಪ್ ಪೂವಯ್ಯ, ಸದಸ್ಯರುಗಳಾದ ಸುಮಿತ್ರ, ಸುಶೀಲಾ, ಶಾಂತಿ, ಸರಸ್ವತಿ, ನಾರಾಯಣ, ಮುತ್ತಮ್ಮ, ಅಂತರಾಷ್ಟಿçÃಯ ಕ್ರೀಡಾಪಟು ಲೆನ್‌ಗಣಪತಿ, ಗ್ರಾಮಸ್ಥರಾದ ಕಾಳಪಂಡ ಸುದೀರ್, ಪುಚ್ಚಿಮಾಡ ಕಿಶು, ಚೆಪುö್ಪಡೀರ ಮುದ್ದುರಾಜ್, ಸಿ.ಟಿ. ದರ್ಶನ್ ಬೆಳ್ಯಪ್ಪ, ಪಕ್ಷದ ಬೂತ್ ಅಧ್ಯಕ್ಷ ಸಿ.ಎಂ. ಅಪ್ಪಣ್ಣ, ಶಾಸಕರ ಆಪ್ತ ಕಾರ್ಯದರ್ಶಿ ಮಲ್ಲಂಡ ಮಧುದೇವಯ್ಯ, ಪಕ್ಷದ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಇದ್ದರು.