ಕುಶಾಲನಗರ, ಜೂ.೨೦ : ಯೋಗ ದಿನಾಚರಣೆ ಅಂಗವಾಗಿ ಕುಶಾಲನಗರದಲ್ಲಿ ಹಲವೆಡೆ ಯೋಗಾಸನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕುಶಾಲನಗರ ತಾಲೂಕು ಆಡಳಿತ ವತಿಯಿಂದ ಸ್ಥಳೀಯ ಜ್ಞಾನಭಾರತಿ ವಿದ್ಯಾ ಸಂಸ್ಥೆಯ ಆವರಣದಲ್ಲಿ ಬೆಳಿಗ್ಗೆ ೫.೩೦ರಿಂದ, ಭಾರತೀಯ ಜನತಾ ಪಕ್ಷ ಆಶ್ರಯದಲ್ಲಿ ಕುಶಾಲನಗರದ ರೈತ ಸಹಕಾರ ಭವನ ಆವರಣದಲ್ಲಿ ಬೆಳಿಗ್ಗೆ ೬.೩೦ರಿಂದ, ಕೂಡಿಗೆ ಸೈನಿಕ ಶಾಲೆಯಲ್ಲಿ ಬೆಳಗ್ಗೆ ೫.೫೦ರಿಂದ ಯೋಗಾಸನ ಕಾರ್ಯಕ್ರಮ ನಡೆಯಲಿದೆ.