ಮಡಿಕೇರಿ, ಜೂ. ೧೮: ಮಡಿಕೇರಿ ಉಪವಿಭಾಗ ವ್ಯಾಪ್ತಿಯ ವಿದ್ಯುತ್ ಗ್ರಾಹಕರ ಕುಂದು ಕೊರತೆಗಳನ್ಮ್ನ ನಿವಾರಿಸುವ ಸಭೆ ತಾ. ೨೧ ರಂದು (ಇಂದು) ಬೆಳಗ್ಗೆ ೧೧ ಗಂಟೆಯಿAದ ಮಧ್ಯಾಹ್ನ ೧೨ ಗಂಟೆವರೆಗೆ ಮಡಿಕೇರಿ ಉಪವಿಭಾಗ ಕಚೇರಿ ಆವರಣದಲ್ಲಿ ಕಾರ್ಯನಿರ್ವಾಹಕ ಇಂಜಿನಿಯರ್ (ವಿ)., ಸೆಸ್ಕ್, ಮಡಿಕೇರಿರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಮಡಿಕೇರಿ ಉಪವಿಭಾಗ (ಮಡಿಕೇರಿ ತಾಲೂಕು) ವ್ಯಾಪ್ತಿಯ ಸಾರ್ವಜನಿಕರು/ ವಿದ್ಯುತ್ ಗ್ರಾಹಕರ ವಿದ್ಯುಚ್ಛಕ್ತಿಗೆ ಸಂಬAಧಿಸಿದ ಸಮಸ್ಯೆ ಅಥವಾ ದೂರುಗಳು ಇದ್ದಲ್ಲಿ ಈ ಸಭೆಯಲ್ಲಿ ಚರ್ಚಿಸಿ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಈ ಸಭೆಗೆ ಹಾಜರಾಗುವಂತೆ ಸೆಸ್ಕ್ ಕಾರ್ಯನಿರ್ವಾಹಕ ಇಂಜಿನಿಯರ್ ಅವರು ಕೋರಿದ್ದಾರೆ.