ಮಡಿಕೇರಿ, ಜೂ. ೨೧: ಶತಾಯುಷಿ ಗೋಣಿಕೊಪ್ಪದ ಬುಟ್ಟಿಯಂಡ ಅಪ್ಪಾಜಿ ಅವರಿಗೆ ಕಿಗ್ಗಟ್ಟ್ನಾಡ್ ಹಿರಿಯ ನಾಗರಿಕರ ವೇದಿಕೆ ವತಿಯಿಂದ ಸನ್ಮಾನಿಸ ಲಾಯಿತು. ಅಪ್ಪಾಜಿ ಅವರು ೧೯೪೩ ರಿಂದ ೧೯೪೭ ರವರೆಗೆ ಸೇನೆಯಲ್ಲಿ ಸೇವೆ ಮಾಡಿದ್ದು, ಅವರು ಎರಡನೇ ಜಾಗತಿಕ ಯುದ್ಧದಲ್ಲಿ ಭಾಗವಹಿ ಸಿದ್ದಾರೆ. ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಕೊಡಗು ಜಿಲ್ಲೆಯ ವತಿಯಿಂದಲೂ ಸನ್ಮಾನಿಸಲಾಯಿತು.
ಮತ್ತೊಬ್ಬ ಶತಾಯುಷಿ ಹೊಟ್ಟೆಂಗಡ ಚೋಂದಮ್ಮ, (ತಾಮನೆ ಚೆಕ್ಕೆರ ಕೋಣಂಗೇರಿ) ಕುಶಾಲಪ್ಪ ಅವರನ್ನು (೧೦೪) ಗಣಪತಿ ನಗರದ ಅವರ ಪುತ್ರ ತಮ್ಮಯ್ಯ ಅವರ ಗೃಹದಲ್ಲಿ ಹಿರಿಯ ನಾಗರಿಕರ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭ ಕಿಗ್ಗಟ್ಟ್ನಾಡ್ ಹಿರಿಯ ನಾಗರಿಕ ವತಿಯಿಂದ ವೇದಿಕೆಯ ಸ್ಥಾಪಕ ಅಧ್ಯಕ್ಷ ಚೆಕ್ಕೆರ ಸನ್ನಿ ಸುಬ್ಬಯ್ಯ, ಜೀವಾವಧಿ ಅಧ್ಯಕ್ಷ ಕಾಟಿಮಾಡ ಜಿಮ್ಮಿ ಅಣ್ಣಯ್ಯ, ವೇದಿಕೆಯ ಹಾಗೂ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ, ಕೊಡಗು ಜಿಲ್ಲೆಯ ಅಧ್ಯಕ್ಷ ಮತ್ತು ಕಿಗ್ಗಟ್ಟ್ನಾಡ್ ಹಿರಿಯ ನಾಗರಿಕರ ವೇದಿಕೆಯ ಅಧ್ಯಕ್ಷ ಕೊಟ್ಟುಕತ್ತಿರ ಜಾಲಿ ಸೋಮಣ್ಣ, ಕಾರ್ಯದರ್ಶಿಗಳಾದ ಚೇಂದಿರ ಎಂ. ಬೋಪಣ್ಣ, ವೇದಿಕೆಯ ಸಮಿತಿ ಸದಸ್ಯರುಗಳಾದ ಬೊಟ್ಟಂಗಡ ಜಪ್ಪು, ಕೇಚಟ್ಟಿರ ಕಾಮುಣಿ ಪೂಣಚ್ಚ, ಮಾಚಿಮಾಡ ಲೌಲಿ ಸೋಮಯ್ಯ, ಮಾಣಿಪಂಡ ಪಾರ್ವತಿ ಅವರುಗಳು ಹಾಜರಿದ್ದರು.